...

2 views

ಹಿಂಸೆ ನೀಡುವುದು
ಹೌದು ಕೆಲವೊಮ್ಮೆ ನಮ್ಮ ಸುತ್ತಮುತ್ತಲಿರುವವರೇ ಕಿತ್ತು ತಿನ್ನುವ ರಣಹದ್ದುಗಳಂತೆ ಕಾಣುವರು. ಸ್ವಾರ್ಥಿಗಳಾಗಿ ಬಿಡುತ್ತಾರೆ. ಝಣಝಣ ಕಾಂಚಾಣದ ಪ್ರಭಾವ ಜನರ ಮನಸ್ಸು ತಲೆಕೆಡಿಸಿ ನಿಷ್ಟೂರಿಗಳನ್ನಾಗಿ ಮಾಡಿಬಿಡುತ್ತದೆ. ಎದುರಿಗಿದ್ದರಿಗೆ, ಜೊತೆಗಿದ್ದವರಿಗೇನೆ ಅಹಂಕಾರದಿಂದ ಮಾತನಾಡುವುದು, ಹಂಗಿಸುವುದು, ಸಸಾರಮಾಡಲು ದಂಡಿಸಲು ಶುರುಮಾಡುತ್ತಾರೆ.

ಶರ್ಮಿಳಾ ಬಹಳ ಚಿಕ್ಕ ವಯಸ್ಸಿನಿಂದಲೂ ಹಟಹಿಡಿದು ಓದಿ ತರಗತಿಯಲ್ಲಿ ಮೊದಲಿಗೆ ಬರುತ್ತಿದ್ದವಳು. ಅವಳಿಗೆ ಯಾವುದು ಕೂಡ ಆಗುವುದಿಲ್ಲವೆಂದೇ ಇರಲಿಲ್ಲ. ಏಕೆ ಸಾಧ್ಯವಿಲ್ಲ ಎಂದು ಹಟಹಿಡಿದು ಸಾಧಿಸಿ ತೋರಿಸುತ್ತಿದ್ದಳು. ಓದಿನಲ್ಲಿ ,ರಸಪ್ರಶ್ನೆ ಸ್ಪರ್ಧೆ, ಭಾಷಣ, ತರಗತಿಯಲ್ಲಿ ‌ಲೀಡರ್ ಎಂದು ಹೀಗೆ ಅವಳ ತರಗತಿಯಲ್ಲಿ ಅವಳೇ ಮೊದಲಿರುತ್ತಿದ್ದಳು. ಅದಕ್ಕೆ ತಾಯಿ ಸಂಪೂರ್ಣ ಬಮಬಲ ನೀಡುತ್ತಿದ್ದರು. ಎಲ್ಲಿಯ ತನಕವೆಂದರೆ ಕಾಫಿ ತಿಂಡಿ ಊಟ ಎಲ್ಲವೂ ಅವಳುನೋದುವ ಕೋಣೆಗೆ ಅವಳ‌ಕೈಗೆ ಕೊಟ್ಟು ಬರುವಷ್ಟು. ಅವಳ ಡಿಗ್ರಿ ಕಾಲೇಜಿಗೆ‌ ಹೋಗುವ ಹುಡುಗಿಯಾದರೂ ಸಹ ಅವಳ ಬಟ್ಟೆಯನ್ನೂ ಒಗೆದು ಹಾಕುವಷ್ಟು ಅವಳಿಗೆ ಬೆಂಬಲ ನೀಡುತ್ತಿದ್ದರು. ಅದರರ್ಥ ಮನೆಯ ತಾವ ಕೆಲಸವನ್ನೂ ಮಾಡಲು ಬಿಡದೇ ತಾನೇ ಮಾಡಿಕೊಂಡು ಹೋಗುತ್ತಿದ್ದರು. ಇದರಿಂದ ಅವಳು‌ ಓದಿನಲ್ಲಿ ರ್ಯಾಂಕ್ ಪಡೆದಳು.

ಉದ್ಯೋಗ ಅರಸಿ ಬೆಂಗಳೂರಿನಂತಹ‌ನಗರಕ್ಕೆ ಬಂದಾಗ ಯಾರ ಮನೆಯಲ್ಲಿ ಇರುವುದು ಎಂಬುದೇ ದೊಡ್ಡ ‌ಸಮಸ್ಯೆಯಾಯಿತು.  ಆಗ ಅಣ್ಣನ ಮನೆಯಲ್ಲಿರಲಿ ಎಂದು...