...

9 views

ಸೇಲ್ಸ್ Girls ' BoYs ಮತ್ತು ಅವರ ಜೀವನ
ಪೂರ್ತಿ ಓದಿ frnds 😊😊🤝ನಮ್ಮ ಮನೆ ಕಥೆ 😊👇🏻👇🏻ಸ್ವಲ್ಪ ಕಲ್ಪನೆ, ಸ್ವಲ್ಪ ಹಾಗೇ ತಿಳಿದು ✍️ 💯% ನಿಜ 👇🏻👇🏻 ಹೇಗಿದೆ ಹೇಳಿ, 😊

[( ಈಗ sales ನವರು ಎಲ್ಲಾರೂ ಒಳ್ಳೆಯವರು ಇರೋದಿಲ್ಲ ಮನೆಗೆ ಸೇಲ್ಸ್ ಅಂತ ಬಂದು ಪಿನಾಯಿಲ್ ಸ್ಮೆಲ್ ತೋರಿಸಿ ಮೂರ್ಛೆ ಬರೋ ಹಾಗೇ ಮಾಡಿ ಹಣ ಚಿನ್ನ ಕಳ್ಳತನ ಮಾಡುವವರೇ ಇರೋದು, ಎಚ್ಚರವಾಗಿರಿ, ಒಬ್ಬರೇ ಮನೆಯಲ್ಲಿದರೆ ಯಾವುದೇ ಸೇಲ್ಸ್ ಪ್ರಾಡಕ್ಟ್ ಖರೀದಿಸುವುದು ಬಿಡಿ ಅವರ ಹತ್ತಿರ ಮಾತಾಡಲು ಹೋಗಬೇಡಿ, (ಕೆಟ್ಟವರಿಂದ ಒಳ್ಳೆಯವರಿಗೂ ಕೆಡುಕು ))/ಹಾಗೂ ತೆಗೆದುಕೊಳ್ಳುವುದಾದ್ರೆ ಹತ್ತಿರ ಮನೆಯವರಿಗೆ ಕರೆ ಮಾಡಿ ತಿಳಿಸಿ 👇🏻👇🏻👇🏻👇🏻👇🏻👇🏻👇🏼👇🏼
5 ವರ್ಷದ ಹಿಂದಿನ ಕಥೆ 😊ಸಣ್ಣ ಮಾನವೀಯತೆ 👍🏻
ಆ ದಿನ ನಾನು ರಜೆ ಆಗಿದ್ದ ಕಾರಣ ಮದ್ಯಾಹ್ನ ತಡವಾಗಿ ಊಟ ಮಾಡಿ ಆಗ ತಾನೇ ಮನೆಯ ಸಿಟೌಟ್ನಲ್ಲಿದ್ದ ಸೋಫಾದಲ್ಲಿ ಮೊಬೈಲ್ ಒತ್ತುತ್ತಾ ಕುಳಿತಿದ್ದೆ, ಆಚೆಯಿಂದ ಧ್ವನಿ ಕೇಳಿಸಿತು sir, sir, ಒಮ್ಮೆಲೇ ಗಾಬರಿಗೊಂಡು ಹಾ ಎಂದೇ ನೋಡೋವಾಗ ಇಬ್ಬರು ಹುಡುಗಿಯರು ಬ್ಯಾಗ್ ಹಿಡಿದು sir ಎಂದು ಕರೆಯುತ್ತಾ ಬರುತ್ತಿದ್ದರು, ಹಾಗೇ ಬಂದವರೇ sir ನಿಮ್ಮಲ್ಲಿ 5 ನಿಮಿಷ ಮಾತಾಡಬಹುದಾ ಎಂದು ಕೇಳಿದರು, ಹೇ ನಾನಿವತ್ತು ರಜಾ 5 ನಿಮಿಷ ಯಾಕೆ ಸಂಜೆ ತನಕ ಮಾತಾಡುವ ಎಂದು ನಗುತ್ತಲೇ ಹೇಳುತ್ತಿರುವಾಗ ಅವರು ನಗುತ್ತಾ sir ಪ್ರಾಡಕ್ಟ್ ಬಗ್ಗೆ ಹೇಳ್ಬೇಕಿತ್ತು, ಎಂದು ಹೇಳುತ್ತಾ ತಮ್ಮ 2 ಬ್ಯಾಗ್ನ್ ನ್ನು ಕೆಳಗಿಳಿಸಿ, ಅದರಲ್ಲಿರುವ ಒಂದೊಂದು ಐಟಂ ಅನ್ನು ಒಂದು ಇಂಚು ಬಿಡದೇ ವಿವರಿಸಿದರು, ಅವರ ಮಾತುಗಳು ಕೇಳುತ್ತಿದ್ದಂತೆ ನನ್ನ ಮನೆಯೊಳಗಿಂದ ಅಕ್ಕ ಅಮ್ಮ ಅಪ್ಪ ಅಣ್ಣ ಹೊರ ಬಂದರು, ಅಕ್ಕ ಬರುತ್ತಿದ್ದಂತೆ ನನಗೆ ಜೀರ್ಣ ಶಕ್ತಿಯ ಲೇಹದ ಬಗ್ಗೆ ವಿವರಣೆ ಮಾಡುತ್ತಿದವರಲ್ಲಿ ಇನ್ನೊಬ್ಬರು ಅವರಲ್ಲಿದ್ದ ಅಷ್ಟು ಕ್ರೀಮ್ಗಳನ್ನು ಬ್ಯಾಗಿಂದ ಹೊರಹಾಕಿ ಅದರ ಬಗ್ಗೆ ವಿವರಿಸಿದರು, ಎಲ್ಲಾವನ್ನು ಬೇಗ ಬೇಗನೇ ಸರಿಯಾದ ಕ್ರಮದಲ್ಲೇ ವಿವರಿಸುತ್ತಿದ್ದರು, ಆದರೇ ಅವರು ತೋರಿಸಿದ ಪ್ರಾಡಕ್ಟ್ ನಲ್ಲಿ 60% ರಷ್ಟು ನಮ್ಮಲ್ಲಿ ಅದಾಗಲೇ ಇತ್ತು, ಏಕೆಂದರೆ ನಮ್ಮ ಮನೆಯಲ್ಲಿ ಕಾಳಜಿ ಜಾಸ್ತಿ ಮಾಡುತ್ತಾರೆ ಆಗಾಗ sales boys, girls ಬರ್ತಾ ಇದ್ದ ಕಾರಣ ಅವರು ಬಂದದ್ದಕ್ಕೆ ಅವರನ್ನು ಖಾಲಿ ಕಳಿಸಬಾರದೆಂದು, ತಮ್ಮ ಮನೆ ಮಕ್ಕಳಂತೆ ಏನಾದರೂ ಒಂದೆರಡು ಐಟಂನ್ನು, ಅಮ್ಮ ತೆಗೆದು ಇಡುತ್ತಿದ್ದರು, ಕೆಲವರು ಪಾಯಿಂಟ್ ಜಾಸ್ತಿ ಆಗಬೇಕೆಂದು, ಕೆಲವರು ಪ್ರಾಡಕ್ಟ್ ಸೇಲ್ ಆಗಬೇಕೆಂದು, ಹೇಳುತ್ತಿದ್ದರು, ಏಕೆಂದರೆ ಅವರು ಕಷ್ಟದಲ್ಲಿ ಇರುತ್ತಾರೆ ಅವರಿಗೆ ಒಳ್ಳೆ job ಸಿಗೋ ಮೊದಲು ಈ ತರ ಮನೆ ಮನೆ ಸುತ್ತಿ ಕಷ್ಟಪಟ್ಟು ಅವರ bossನ ಕಂಪೆನಿ ಪ್ರಾಡಕ್ಟ್ ಸೇಲ್ ಮಾಡಬೇಕಾದ ಅನಿವಾರ್ಯತೆ ಅವರಿಗಿದೆ, ಬಹಳ ಕಲಿತಿದ್ದರು ಸರಿಯಾದ job ಸಿಗದೇ ಎಷ್ಟೋ ಜನ ಬಿಸಿಲು ಮಳೆಯೇನ್ನದೆ ಎಷ್ಟು ದೂರವಾದರೂ ನಡೆದುಕೊಂಡೆ ಇಂತಹ ಕಷ್ಟದ ಕೆಲಸ ಮಾಡುತ್ತಿರುತ್ತಾರೆ, ಅವರಿಗೂ ಒಂದು ನಂಬಿರುವ ಫ್ಯಾಮಿಲಿ ಇದೆ, ಹಾಗಾಗಿ ನಾವು ಒಂದು 20rs ಜಾಸ್ತಿಯಾದರು ನಮಗೆ ಅಗತ್ಯವಿರುವ ಕೆಲವು ವಸ್ತುಗಳನ್ನು ಖರೀದಿ ಮಾಡುವುದು ತಪ್ಪೇನಿಲ್ಲಾ,👇🏼
ಹಾಗೇ ದೋಸೆ ಮಾಡೋ ತವ ಹೀಗೆಲ್ಲಾ ವಸ್ತುಗಳನ್ನು ತೋರಿಸುತ್ತಿದ್ದಾಗ, ನನ್ನ ಅಪ್ಪ ಅವರಲ್ಲಿ ಕೇಳಿದರು ಎಲ್ಲಿ ಊರು ಎಂದು,' ಇಲ್ಲೇ ಸಾಧಾರಣ 70 km ದೂರದ ವಿಳಾಸವನ್ನು ಹೇಳಿದಾಗ ಅಮ್ಮ ಕೇಳಿದರು ಊಟ ಆಯ್ತಾ ಎಂದು, ಅದಕ್ಕೆ ಅವರಿಬ್ಬರೂ ಇಲ್ಲಾ ಇಲ್ಲೆಲ್ಲೂ ಬರುವ ದಾರಿಯಲ್ಲಿ ಹೋಟೆಲ್ ಇರಲಿಲ್ಲಾ ಎಂದು ಹೇಳುತ್ತಿದ್ದಂತೆ ಅಪ್ಪ ಅಮ್ಮನಲ್ಲಿ ಅವರಿಬ್ಬರಿಗೂ ಊಟ ಬಡಿಸಿ ತರಲು ಹೇಳಿದರು, ಇವರು ಬೇಡಾ ಬೇಡಾ ಎನ್ನುತ್ತಿದ್ದಂತೆ ಅಪ್ಪ ಹೇಳಿದರು ಈ ಮದ್ಯಾಹ್ನದ ಬಿಸಿಲಿಗೆ ನಡೆದುಕೊಂಡು ಬಂದು ಸುಸ್ತಾಗಿ ಹೋಗಿದ್ದಿರಿ, ಅನ್ನುವಾಗಲೇ, ಅಮ್ಮ ತಡ ಮಾಡದೇ 2 ಪ್ಲೇಟ್ ನಲ್ಲಿ ಊಟ ಬಡಿಸಿ ತಂದರು, ಅಕ್ಕ ಕೈ ತೊಳೆಯಲು ನೀರು ಕೊಟ್ಟಳು ಅವರಿಗೆ ಏನು ಮಾಡಬೇಕೆಂದು ತೋಚದೆ ಅವರು ಮೌನವಾದರೂ, ಆಗ ನಾನೇ ಮಾತು ಮುಂದುವರಿಸುತ್ತಾ ಇಲ್ಲಿ ಹತ್ತಿರದಲ್ಲಿ ಎಲ್ಲೂ ಹೋಟೆಲ್ ಇಲ್ಲಾ, ನೀವು 2 ವರೆ km ನಡೆದು ಹೋಗಬೇಕು ಸಮಯ ಈಗಲೇ, 2.30, ಆಗಿದೆ, ಊಟ ಮಾಡಿ ಪರವಾಗಿಲ್ಲ ಎಂದು ಹೇಳಿದಾಗ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಾ ಹೇಗೋ ಅಪ್ಪ ಅಮ್ಮನ ಒತ್ತಾಯಕ್ಕೆ ಊಟ ಮಾಡಿದರು, ಮತ್ತು ಸ್ವಲ್ಪ ಹೊತ್ತು ಇದ್ದು ಬಹಳ ಕೃತಜ್ಞತೆಯನ್ನು ಸಲ್ಲಿಸುತ್ತಾ, ಪ್ರಾಡಕ್ಟ್ ಬಗ್ಗೆ ಅಷ್ಟು ಮಾತಾಡುತ್ತಿದ್ದವರು ಮಾತೇ ಕಡಿಮೆ ಮಾಡಿದ್ದರು, ಮತ್ತು ನಾವೇ ಅವರಿಂದ ಕೆಲವು ಅಗತ್ಯ ವಸ್ತುಗಳ ಖರೀದೀ ಮಾಡಿ ಅವರನ್ನು ಆತ್ಮೀಯತೇಯಿಂದ ಬೀಳ್ಕೊಟ್ಟೆವು, ಮತ್ತು ಈ ಸೇಲ್ಸ್ ನವರು ಬಂದವರೇ ಒಂದೆರಡು, ಮೂರು ಸಲ ಬರ್ತಾರೆ, 6 months ಗೆ ಚೇಂಜ್ ಆಗ್ತಾ ಹೊಸ ಹೊಸಬರೇ ಬರುತ್ತಿರುತ್ತಾರೆ, ಬಹುಷಃ ಅವರಿಗೆ ಬೇರೆ job ಸಿಕ್ಕಿರುತ್ತೋ ಏನೋ ಗೊತ್ತಿಲ್ಲಾ 😊 ಇರಲಿ ಎಲ್ಲಾದಾರು, ಎಲ್ಲಾರೂ ಚೆನ್ನಾಗಿರಲಿ, 😊ಆ ದೇವರು ಹೆಚ್ಚು ಕಷ್ಟ ಯಾರಿಗೂ ಕೊಡದಿರಲಿ😊🤝🤝
ಈಗಲೂ ನಾವು ಅಷ್ಟೇ ಗೌರವವನ್ನು ಕೊಡುತ್ತೇವೆ 🤝🤝🤝
ಎಲ್ಲರಿಗೂ ಗೌರವ ಕೊಡಿ ತಾತ್ಸರ ಬೇಡಾ🤝👍🏻😊😊
#HaRshiTh_vR_AchaRya_ಬರಹಗಳು
#ಸಣ್ಣಕಥೆ
#saLes_giRLs_boYs_ಮತ್ತು_ಅವರ_ಜೀವನ
#yqjogi#Yqquotes#yqಕನ್ನಡ#ಕನ್ನಡಭಾವನೆಗಳು
ನಾ_ಬರೆದ_ಕಥೆಗಳು_harshith_dream_writer