ಬಿಲ್ವಪತ್ರೆ ...
ಶಂಭೋ ಎಂದರೆ ಒಲಿಯುವ ಸದಾಶಿವ ಆಡಂಬರದ ಪೂಜೆ ಎಂದಿಗೂ ಬಯಸಿದವನಲ್ಲ. ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಪ್ರಸನ್ನನಾಗುವ ದೇವರೆಂದರೆ ಶಿವ.
ಹಾಗಾದ್ರೆ ಶಿವನಿಗೆ ಬಿಲ್ವಪತ್ರೆ ಯಾಕೆ ಅರ್ಪಿಸುತ್ತಾರೆ. ಬಿಲ್ವಪತ್ರೆ ಹುಟ್ಟಿದ್ದು ಹೇಗೆ..? ಇದು ಯಾವ ಸ್ವರೂಪ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತ್ರಿದಳ ಅಂದರೆ ಮೂರು ದಳ ಹೊಂದಿರುವ ಬಿಲ್ವ ಪತ್ರೆ ಬ್ರಹ್ಮ, ವಿಷ್ಣು ಮಹೇಶ್ವರರ ಸ್ವರೂಪವಾಗಿದೆ. ಮಂದಾರ ಪರ್ವತದ ಮೇಲೆ ಪಾರ್ವತಿಯ ಬೆವರ ಹನಿ ಬಿದ್ದಾಗ ಬಿಲ್ವ ಪತ್ರೆಯ ಮರ ಹುಟ್ಟಿತೆಂದು ಹೇಳಲಾಗಿದೆ. ಇಡೀ ಮರದಲ್ಲಿ ಪಾರ್ವತಿ ನಾನಾ ರೂಪದಲ್ಲಿ ನೆಲೆಸಿದ್ದು, ಈ ಕಾರಣಕ್ಕೆ ಬಿಲ್ವಪತ್ರೆ ಶಿವಪೂಜೆಗೆ ಅತ್ಯಂತ ಶ್ರೇಷ್ಠವೆಂದು ಹೇಳಲಾಗಿದೆ.
ಶಿವರಾತ್ರಿಯ ದಿನ ಉಪವಾಸ ಮಾಡಿ, ಶಿವಲಿಂಗಕ್ಕೆ ನೀರೆರೆದು, ಬಿಲ್ವಪತ್ರೆ ಅರ್ಪಿಸಿದರೆ ಸಕಲ ಪಾಪ ನಾಶವಾಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಪ್ರತೀ ಸೋಮವಾರ ಬೆಳಿಗ್ಗೆ ಸಮಯದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ ಬಿಲ್ವಪತ್ರೆ ಅರ್ಪಿಸಿದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದಲ್ಲಿ ಪ್ರತೀ ಸೋಮವಾರ ಶಿವನಿಗೆ ಜಲಾಭಿಷೇಕ ಮಾಡಬೇಕು. ಮತ್ತು ಶಿವರಾತ್ರಿಯ ದಿನ ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿದರೆ ಶಿವ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಕೂಡ ಇದೆ.
ಸನಾತನ ಧರ್ಮದಲ್ಲಿ ನಂಬಿಕೆಯೇ ಜೀವಾಳ ನಂಬಿಕೆ ಇಲ್ಲದೆ ಯಾವ ಕರ್ಮವೂ ತನ್ನ ಪರಿಪೂರ್ಣ ಫಲ ನೀಡದು ಹಾಗಾಗಿ ನಮ್ಮ ನಿತ್ಯ ಕರ್ಮಗಳೊಂದಿಗೆ ಶಿವನ ನೆನೆದು ನಡೆದಾಗಲೇ ನಮ್ಮ ಬದುಕು ಬಲು ಸುಲಭವಾಗಿ ತೀರ ಸೇರಬಲ್ಲದು ಅಂತಾನೇ ಹೇಳಬಹುದು ..
ಓಂ ನಮಃ ಶಿವಾಯ 🙏🙏
#Kannada #Kannadaquote #vijaykumarvm #ವಿಬೆಣ್ಣೆ #ಸಂಗ್ರಹ