ಫೇಸ್ಬುಕ್ ಎಂಬ ಮಾಯಲೋಕ
ಕನಸೆಂಬ ಕನ್ನಡಿಯ ಹಿಡಿದು ಕನವರಿಕೆಯ ಮೆಟ್ಟಿಲೇರಿ ದೂರದ ದಾರಿಯಲಿ ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದೇನೆ. ಕಂಗಳು ಕಾದಿದೆ ಕನಸಿನ ದಾರಿಯಲಿ....
ಪರಿಚಿತನಲ್ಲದ ಪರಿಚಿತನಿಗಾಗಿ ಈ ಕಾಯುವಿಕೆ. ಮೊಬೈಲ್ ಸಂದೇಶಗಳಲಿ ಮನವನು ಕದ್ದವನ ಭೇಟಿಯಾಗುವ ಸಮಯಕ್ಕಾಗಿ ಮನಸ್ಸು ಕಾದು ಬಸವಳಿದಿದೆ. ಇಂದು ಬರುವ ನಾಳೆ ಬರುವ ಎಂಬ ಕಾಯುವಿಕೆಯಲ್ಲೇ ದಿನ ದೂಡುತ್ತಿದ್ದಾಳೆ ಪರಿಧಿ. ಯಾರನ್ನೂ ಹತ್ತಿರ ಸೇರಿಸಿಕೊಳ್ಳದ ಅವಳ ಮನದಲ್ಲಿ ಅವನು ಅವಳಿಗರಿವಿಲ್ಲದೇ ತನ್ನ ಜಾಗ ಭದ್ರ ಪಡಿಸಿಕೊಂಡಿದ್ದ.
ಫೇಸ್ಬುಕ್ ಎಂಬ ಮಾಯಾಲೋಕದಲ್ಲಿ ಪರಿಚಿತನಾದ ಕುನಾಲ್.. ಮೆಲ್ಲಮೆಲ್ಲನೇ ಅವಳ ಮನದಾಳದಲ್ಲಿ ಇಳಿದು ಹೋಗಿದ್ದ.
ಮೊದ ಮೊದಲು ಅಪರಿಚಿತರಂತೆ ಚಾಟ್ ಮಾಡುತ್ತಿದ್ದ ಅವರಿಬ್ಬರೂ ದಿನಕಳೆದಂತೆ ಆಪ್ತರಾಗುತ್ತಾ ಹೋಗಿದ್ದರು. ಮನೆಯಲ್ಲಿನ ಕಷ್ಟ ಕಾರ್ಪಣ್ಯಗಳನ್ನೇ ನೋಡುತ್ತಾ ಬೆಳೆದ ಪರಿಧಿ ಅವನ ಬಣ್ಣ ಬಣ್ಣದ ಮಾತುಗಳಿಗೆ ಬೆರಗಾಗಿ ಅವನ ಜೀವನ ಶೈಲಿಯನ್ನು ಅವನ ಬಾಯಿಯಿಂದ ಕೇಳಿ ತಿಳಿದು ಅಚ್ಚರಿಪಡುವುದರ ಜೊತೆ ಜೊತೆಗೆ ತನ್ನ ಜೀವನ ಅವನ ಜೀವನದೊಂದಿಗೆ ಹೋಲಿಸಿ ನೋಡಿ ದುಃಖ ಪಡತೊಡಗಿದ್ದಳು. ಅವನಲ್ಲಿ ಹೇಳುವ ಮನಸ್ಸಾಗದೇ ಮೌನವಾದವಳ ನಡೆ ಅವನಿಗೂ ಅರ್ಥವಾಗಿರಲಿಲ್ಲ. ಒತ್ತಾಯ ಮಾಡಿದವನ ಹಠಕೆ ಮಣಿದು ಮನೆ ಪರಿಸ್ಥಿತಿಯನ್ನು ವಿವರಿಸಿದವಳಿಗೆ ಅವನೇ ಸಮಾಧಾನದ ಮಾತುಗಳ ಮೂಲಕ ಮನಕೆ ತಂಪನ್ನೆರೆದಿದ್ದ ಹಾಗೂ ತನ್ನ ಜೀವನ ಶೈಲಿ ಅವಳೊಂದಿಗೆ ಹಂಚಿ ನೋವು ಮಾಡಿದ ಕಾರಣಕ್ಕೆ ಕ್ಷಮೆಯನ್ನೂ ಕೇಳಿದ್ದ.
ಹೀಗೆ ಒಬ್ಬರಿಗೊಬ್ಬರು ಮಾನಸಿಕವಾಗಿ ಹತ್ತಿರವಾದರೂ ಭೇಟಿಯಾಗುವ ಸಂದರ್ಭ ಬಂದಿರಲೇ ಇಲ್ಲ. ನಿನ್ನನ್ನು ನೋಡಬೇಕು ಯಾವಾಗ ಬರುವೆ ಎಂದು ಅವನಲ್ಲಿ ಬಾಯಿಬಿಟ್ಟು ಕೇಳಲು ಅವಳಿಗೋ ಅಂಜಿಕೆ, ಅವನಿಗೋ ಅದೇನೋ ಸಂಕೋಚ.
ಮನದೊಳಗಿರುವ ಮನವೇ ಮರೆಮಾಚಿತ್ತು ಆ ಪ್ರೀತಿಯ. ಮೋಹಕ ಮಾತಿಗೆ ಮರುಳಾಗಿ ಮನವನ್ನು ಅವನಿಗಾಗಿ ಅರ್ಪಿಸಿದರೂ.. ಅಪರಿಚಿತ ಹೂವೊಂದು ಪರಿಚಿತವಾದಂತೆ ಬಾನು ಭುವಿಯನು ಸಂಧಿಸಿದಂತೆ ಅವರಿಬ್ಬರೂ ಒಬ್ಬರನ್ನೊಬ್ಬರು ಸಂಧಿಸಲು ಹಾತೊರೆಯುತ್ತಿದ್ದರು.
ಕುನಾಲ್, ಪರಿಧಿಯ ಪಾಲಿಗೆ ಅಪರಿಚಿತನಾದರೂ.. ಅವಳ ಮನಸ್ಸಿಗವನು ತೀರಾ ಪರಿಚಿತ. ಬಿಡಿಸಲಾರದ ಬೆಸುಗೆಯಲಿ ಬೆಸೆಯಲ್ಪಟ್ಟಿತ್ತು ಅವರ ಮನಸ್ಸು..
ಫೇಸ್ಬುಕ್ ಎಂಬ ಮಾಯಲೋಕ ಯಾರ ಬಾಳಲ್ಲಿ, ಹೇಗೆ ತಿರುವು ಕೊಡುತ್ತೋ ಹೇಳಲು ಯಾರಿಗೆ ತಾನೇ ಸಾಧ್ಯ? ಕೆಲವರಿಗೆ ಅದರಿಂದ ಒಳ್ಳೆಯದಾದರೆ, ಇನ್ನು ಕೆಲವರ ಜೀವನವೇ ಹಾಳಾಗಿ ಹೋಗುತ್ತದೆ.
ನಿಮಗೂ ಇಂತಹ ಯಾವುದಾದರೂ ಅನುಭವ ಆಗಿದೆಯಾ? ಆಗಿದ್ದರೆ ನಿಮ್ಮ ಜೀವನದಲ್ಲಿ ಪಡೆದುಕೊಂಡ ತಿರುವಾದರೂ ಏನು? ಹೇಳಲಿಚ್ಛಿಸುವವರು ಕಮೆಂಟ್ ಬಾಕ್ಸಿನಲ್ಲಿ ತಿಳಿಸಿ...
....✍️Shamna.
© ಹೃದಯ ಸ್ಪರ್ಶಿ