...

2 views

"ನನ್ನ ಕಥೆ...ಭಾಗ-1
(ನನ್ನಹೆಸರು ವಸಂತ )
"ನನ್ನದೊಂದು ಸುಂದರ ಪ್ರಪಂಚ ಅಪ್ಪ ಅಮ್ಮ ಅಕ್ಕ
ತಂಗಿಯರಿಬ್ಬ್ರು. ತಮ್ಮ. ಇದು ನನ್ನ ಲೋಕ ನನ್ನನ್ನೇ
ನಾ ಕಳೆದು ಹೋದ ಪ್ರಪಂಚ, ಆಟ ಪಾಟಗಳು
ಅಕ್ಕ ತಂಗಿಯರ ಜೊತೆ ಜಗಳ ಕಿತ್ತಾಟ ತಮ್ಮನ
ತುಂಟಾದ ಹಬ್ಬ ಹರಿದಿನಗಳಲಿ ಬಂದು ಬಾಂದವರ
ಜೊತೆ ಬೆರೆತು ಹಬ್ಬ ಆಚರಣೆ ಹೀಗೆ ದಿನಗಳು

ಕಳೆದದ್ದೇ ಗೊತ್ತಾಗಲಿಲ್ಲ.ಜೀವನ ತುಂಬಾ ಅಂದ್ರೆ
ತುಂಬಾ ಸಂತೋಷದಿಂದ ಕೂಡಿದ ಕೂಡು
ಕುಟುಂಬ ಹೇಗೋ ಜೀವನ ಸಾಗಿತ್ತು ಬೆಳೆದು
ದೊಡ್ಡವರಾದ್ವಿ ಅತ್ತೆ ಮಗನ ಜೊತೆ ಪ್ರೀತಿಯ...💘
ಬಲೆಗೆ ಸಿಕ್ಕಾಪಟ್ಟೆ ಚೆನ್ನಾಗೇ ಇತ್ತು ಜೀವನ ಅಕ್ಕ
ಭಾವನ ಪ್ರೀತಿಲಿ ಹೀಗೆ...,ಸಾಗಿತ್ತು ಆದರೆ

ಅಪ್ಪ ಇದ್ದಕಿದ್ದಾಗೆ ಹುಷಾರಿಲ್ಲದೆ ಧವಾಖಾನೆ
ಸೇರಿದ್ರು ತುಂಬಾ ಭಯ ನೋವು ಅಳಲು
ಮುಗಿಲು ಮುಟ್ಟೋ ತರ ಹೀಗಿರುವಾಗ ಅಪ್ಪ
ಚಿಕಿತ್ಸೆ ಫಲಕಾರಿಯಾಗಲಿಲ್ಲ ನಮ್ಮನ್ನೆಲ್ಲ
ಅಗಲಿದರು..😭😭 ಅಪ್ಪ ಅಂದ್ರೇ ಪ್ರಾಣ
ಅಪ್ಪನ ಪ್ರೀತಿಯ ಮುಂದೆ ಯಾವುದು ದೊಡ್ಡದಲ್ಲ

ಅನ್ನಿಸಿತು ಸಾಯಬೇಕು ಅಂದ್ಕೊಂಡೆ ಆದ್ರೇ ಪ್ರೀತಿ
ಅಡ್ಡ ಬಂತು ನಾನಿಲ್ಲದೆ ಬದ್ಕೊಲ್ಲ ಅಂತ ನನ್ನ
ಪ್ರೀತಿಯ ಕೂಗು ಆ ಕರೆಗೆ ಸೋತುಬಿಟ್ಟೆ .
ಅಪ್ಪನ ನೆನಪು ಅವರ ಜೊತೆಗಿನ ಒಡನಾಟ
ಮರೆಯಲಿಕ್ಕೆ ಆಗದೆ ಹುಚ್ಚು ಹಿಡಿಯುವಂತೆ
ಕೊನೆಗೆ ಹಠಾತ್ತಿನ ಸಾವು ನನ್ನ ಮಾತು ನಿಂತಿತು ,

ಸುಮಾರು ಒಂದು ವರ್ಷಗಳ ಕಾಲ ಮಾತು
ಬಾರದಿರಲು ಒದ್ದಾಟ ಸೆಣಸಾಟ ಓದು ಅರ್ಧಕ್ಕೆ
ಸಮಾಪ್ತಿ ಆಯ್ತು ನಂತರ ಅಮ್ಮ ಚಿಕಿತ್ಸೆ
ಕೊಡಿಸುತ್ತೇನೆ ಶುರು ಮಾಡಿದ್ರು .ದೇವರ ಮೊರೆ
ಹೋದ್ರು ಹೀಗೇ ಹೇಗೋ ಮೌನವಾಗಿದ್ದ ನಾನು
ಆ ಭಯದಿಂದ ಹೊರಗೆ ಬಂದು ಮಾತು ಕೂಡ

ಬಂದವು ಹೀಗಿರುವಾಗ ಅಕ್ಕನ ಮದುವೆ ನನ್ನ
ಪ್ರೇಮಿಯ ಅಣ್ಣನ ಜೊತೆ ನಂತರ ಹೀಗೆ
ಸಾಗುತ್ತಿರುವಾಗ ನನ್ನ ಮದುವೆ ಮಾತು ಸಾಗಿ
ಬಂತು ನಂತರ ನಮ್ಮ ಮದುವೆಗೆ ಯಾರು
ಒಪ್ಪಲಿಲ್ಲ ಮನೆ ಬಿಟ್ಟು ಅತ್ತೆ ಮನೆಗೆ ಬಂದೆ ಆದರೆ
ಅಲ್ಲೂ ಕೂಡ ನೆಮ್ಮದಿ ಇಲ್ಲಾ .ಉಟ್ಟ ಬಟ್ಟೆಯಲ್ಲಿ

ಅಮ್ಮನ ಮನೆಯಿಂದ ಹೊರಟ ನನಗೆ ಬರೀ
ಕಣ್ಣೀರಿನಲ್ಲೇ ಕೈ ತೊಳೆಯೋ ಪರಿಸ್ಥಿತಿ ಕಾರಣ ನನ್ನ
ಅಪ್ಪನ ಕೆಲಸ ನನಗೆ ಸಿಗುತ್ತದೆಂದು
ದುರುದ್ದೇಶದಿಂದ ನನಗೆ ಮದುವೆ ಮಾಡಿಕೊಳ್ಳುವ
ಮಾತು ಕೊಟ್ಟು ಮನೆಗೆ ಕರೆಸಿಕೊಂಡಿದ್ದರು, ಇದು
ನನಗೆ ತಿಳಿಯದೆ ಹೋಯಿತು.

ಭಾಗ-2.....

ಮನೆಗೆಲಸದವರಿಗಿಂತ ಕಡೆಯಾಗಿ ನನ್ನ
ನೋಡಿಕೊಂಡರು (ಅದು ಸೋದರತ್ತೆ ಕೂಡ)
ನಾದಿನಿ ಪಿತೂರಿ ಹೆಂಗಸು. ಯಾವ ಕೆಲಸವು ನನಗೆ
ಸಿಗದ ಕಾರಣ ನನ್ನ ಒಡವೆ ದುಡ್ಡು(ನನ್ನ ಹೆಸರಿನಲ್ಲಿ
ಇದ್ದದ್ದು)ಸಿಗದಕೊನೆಗೆ ಒಂದು ವರ್ಷದ ಹತ್ತತ್ತಿರ
ಮನೆಬಿಟ್ಟು ಕಳಿಸಿರಲು ಎಲ್ಲಿ ಹೋಗೋದು

ತಿಳಿಯದೆ ಮದ್ಯ ರೋಡಿನಲ್ಲಿ ನಿಂತೆ,
ಪ್ರೀತಿ ಮಾಡಿದವ ದಾರಿ ತೋರದೆ ಅಮ್ಮನ ಮನೆಗೆ
ಕಳಿಸಿದ ಅದೂ ಅಮ್ಮನ ಮನೆ ಹತ್ತಿರ ಮದ್ಯ
ರೋಡಿನಲ್ಲಿ (ಮದುವೆ ಆಗುತ್ತೇನೆ ಎಂದು ಹೇಳಿ)
ದಾರಿ ತೋರದೇ ಅಮ್ಮನತ್ತಿರ ಹೋದೇ ಆದರೆ
ಅಮ್ಮ ಮನೆ ಒಳಗೆ ಬಿಡದೆ ಹೊರದೂಡಿದರು

ಕಾಲು ಹಿಡಿದು ಕ್ಷಮೆ ಕೇಳಿದೆ ಅತ್ತು ಕರೆದು
ಗೋಗರೆದೆ ಪ್ರಯೋಜನವಿಲ್ಲ ನಾನು ಮಾಡಿದ್ದು
ತಪ್ಪೇ ಅಲ್ವಾ ಅದಿಕ್ಕೆ ಸಾಯುವ ನಿರ್ಧಾರ ಮಾಡಿದೆ,
ಕೊನೆಗೆ ಅಕ್ಕ ತಂಗಿ ಎಲ್ಲ ಒಳಗೆ ಕರೆದರು.
ಮದುವೆ ಮಾಡಿಕೋ ಇಲ್ಲ ಹೀಗೆ ಬಂದರೆ ಜನ
ಆಡ್ಕೋತ್ತಾರೆ ಮಾನ ಮರ್ಯಾದೆ ಪ್ರಶ್ನೆ ಎಂದರು

ನನ್ನ ಹುಡುಗನಿಗೆ ಕರೆ ಮಾಡಿ ನಡೆದದ್ದೆಲ್ಲಾ ಹೇಳಿ
ಕರೆಸಿ ಮದುವೆಗೆ ಒಪ್ಪಿಸಿ ವರದಕ್ಷಿಣೆ
ಕೊಡುವುದಾಗಿ ಕೇಳಿದ ಆಧಾರ
ಯಾವುದಿಲ್ಲವೆಂದು ಸರಿ ಎಂದು ತಕ್ಕ ಮಟ್ಟಿಗೆ
ವರದಕ್ಷಿಣೆ ಕೊಟ್ಟು ಮದುವೆ ಮಾಡಿದರು
ಧರ್ಮಸ್ಥಳದಲ್ಲಿ ಬಂದುಬಳಗದ ಜೊತೆ

ಸಂತೋಷವೇನೋ ಆಯ್ತು ಆದರೆ ಭಯ ಕೂಡ
ಆಯ್ತು ಮದ್ಯದಲ್ಲಿ ಕೈ ಬಿಟ್ಟರೆ ಎಂದು ಅದಕ್ಕೆ
ರಿಜಿಸ್ಟರ್ ಮದುವೆ ಕೂಡ ಮಾಡ್ಸಿದ್ರು ಅದರೂ
ಅಮ್ಮನಿಗೆ ನನ್ನ ಮೇಲಿನ ಕೋಪ ತಗ್ಗಿರಲಿಲ್ಲ
ಒಂದು ತಿಂಗಳು ಅಮ್ಮನ ಮನೆಯಲ್ಲೇ ಇದ್ವಿ
ಕಾರಣ ಅತ್ತೆ ಮನೆಗೆ ಗೊತ್ತಿರಲಿಲ್ಲಾ...

ಒಂದು ತಿಂಗಳ ನಂತರ ಬಾಡಿಗೆ ಮನೆ
ಮಾಡಿಕೊಂಡು ಜೀವನ ಶುರು ಮಾಡಿದ್ವಿ
ಅಮ್ಮನಿಗೆ ಕ್ರಮೇಣ ಕೋಪ ಕಡಿಮೆ ಆಯಿತು
ಮನಸ್ಸಿಗೆ ನೆಮ್ಮದಿ ಬಾಡಿಗೆ ಆಟೋ ತುಂಬಾ
ಸಂಪಾದನೇ ಜೋರಾಗೆ ನಡಿತಿತ್ತು
ಜೀವನ ಅತ್ತೆ ಮಾವ ನಿಗೆ ಎಲ್ಲಾ ವಿಷಯ
ತಿಳಿಯಿತು ಎನೂ ತೊಂದರೆ ಆಗಲಿಲ್ಲಾ ಆದರೆ

ಭಾಗ-3.....

ಮನೆಗೆ ಕೂಡಲಿಲ್ಲಾ ನನ್ನ ಗಂಡ ಹೋಗಿಬರ್ತಾ
ಇದ್ದರೂ ಜೀವನ ಹೀಗೆ ಸುಖವಾಗಿ
ಸಂತೋಷವಾಗಿ ಸಾಗುತ್ತಿತ್ತು.,ಹನುಮಾನ್ ಗಾಗಿ
ಮಡಿಕೇರಿ ಹೋಗಿದ್ವಿ ಅದು ಬೈಕ್ನಲ್ಲಿ ಹೀಗೆ ಸುಂದರ
ಸಂಸಾರ ಎರಡು ವರ್ಷ ಕಳೆದದ್ದೇ ಗೊತ್ತಾಗಲಿಲ್ಲಾ
ಎರಡು ವರ್ಷದ ನಂತರ ಮೂರು ತಿಂಗಳ ಗರ್ಭಿಣಿ

ಎಂದು ಗೊತ್ತಾಯಿತು ಎಲ್ಲರಿಗೂ ಅಂದು ಅತ್ತೆ
ಮನೆಗೆ ಕರೆದರು ಖುಷಿಗಿಂತ ಭಯವೇ ಹೆಚ್ಚಾಗಿತ್ತು
ಕಾರಣ ನನ್ನಿಂದ ನನ್ನ ಗಂಡನ ದೂರ
ಮಾಡುವರೆಂಬ ಭಯ ನನ್ನ ಭಯ ಆತಂಕ ಸ
ಸುಳ್ಳಾಗಲಿಲ್ಲಾ ಅದೇ ಸತ್ಯ ಆಯ್ತು, ಹೇಳಿಕೆ ಮಾತು
ಜಾಸ್ತಿ ಆಯ್ತು ಜಗಳ ಶುರುವಾಯ್ತು.

ಎರಡು ದಿನ ಇದ್ದು ಮತ್ತೆ ಬಾಡಿಗೆ ಮನೆಗೆ ಬಂದ್ವಿ
ಮನೆಯಲ್ಲಿ ತುಂಬಾ ಜಗಳ ಮನೆಬಿಟ್ಟು
ಹೋಗುತ್ತೇನೆ ಎಂದು ಹೆದ್ರುಸೋದು ನಾನು
ಕಂಗಾಲಾದೆ ನೆಮ್ಮದಿ ಮರೆಯಾಯಿತು...ಒಂಬತ್ತು
ತಿಂಗಳು ತುಂಬುತ್ತಾ ಬಂದಿತು ಅಷ್ಟರಲ್ಲಿ ಅತ್ತೆ
ಅನಾರೋಗ್ಯದ ಕಾರಣ ಹಾಸಿಗೆ ಇಡಿದಿದ್ದರು

ಡೆಲಿವರಿ ಡೇಟು ಹತ್ತಿರ ಬಂದಿತ್ತು ಇವರು ಅಮ್ಮನ
ಹತ್ತಿರ ಅತ್ತೆ ತೀರಿ ಹೋದರು ಇದು ಕಳೆದ ಮೂರು
ದಿನಕ್ಕೆ ನನಗೆ ಮಗು ಆಯಿತು ಗಂಡು ಮಗುವಿಗೆ
ಜನ್ಮ ವಿತ್ತೆ ನಗು ಇಲ್ಲ ಸಂತೋಷವಿಲ್ಲಾ ಗಂಡ
ಪಕ್ಕದಲ್ಲಿಲ್ಲಾ ಅಂದೇ ನಾನು ಬದುಕಲಿ ಸೋತೆ
ಹೆಣ್ಣಿನ ಆಸೆಗೆ ಅವಳ ಭಾವನೆಗೆ ಬೆಲೆ ಇಲ್ಲಾ,
ಅಂದು ಅರ್ಥ ವಾಯಿತು...

ನಂತರ ಅಮ್ಮನ ಮನೆಗೆ ಬಾಣಂತನಕ್ಕೆ ಹೋದೇ
ಮಗುಗೆ ಐದು ತಿಂಗಳು ನನ್ನ ಗಂಡ ಆಟೋ
ಓಡಿಸುವಾಗ ದುಡ್ಡಿನ ಹಿಂದೆ ಬಿದ್ದು ನಲವತ್ತು
ವರ್ಷದ ಹೆಂಗಸಿನ ಹಿಂದೆ ಹೋದರು ಇದು
ತಿಳಿಯದೆ ಕಾದುಕಾದು ಸಾಕಾದೇ ನಂಬಿ ಮೋಸ
ಹೋದೆನೆಂದು ತಿಳಿಯದೆ ಮುಗ್ದಳಂತೆ ಅವರು

ಹೇಳೋ ಸುಳ್ಳು ಕಥೆಗಳನ್ನು ನಂಬಿದೆ ಯಾರು
ಏನೇ ಹೇಳಿದ್ರು ನನ್ನ ಗಂಡನ ಬಗ್ಗೆ ನಂಬದೇ
ಮೂರ್ಖುಳಾಗಿದ್ದೆ ಕೊನೆಗೆ ಅವರ ಫೋನ್
ಮುಖಾಂತರ ಯಾರದೋ ಹೆಂಗಸಿನ ಸಹವಾಸ
ಮಾಡಿದ್ದು ಗೊತ್ತಾಯಿತು ಮನೆಯಲ್ಲಿ ಗಲಾಟೆ
ಶುರುವಾಯಿತು.

ಭಾಗ-4.....

ಕೇಳಿದ್ದೇ ತಪ್ಪಾಯಿತೆಂದು ನನ್ನ ನನ್ನ ಮಗುನಾ
ಬಿಟ್ಟು ಹೊರಟೋದ್ರು ಎಲ್ಲಿ ಹುಡುಕಿದರು
ಸುತ್ತಿದರೂ ಕಣ್ಣೀರಿನ ಹೊಳೆ ಹರಿಸಿದರೂ ನನ್ನ
ಗಂಡ ಸಿಗಲಿಲ್ಲಾ ಯಾರೋ ಒಬ್ಬ ವ್ಯಕ್ತಿಯ
ಸಹಾಯದಿಂದ ಹುಡುಕಿಕೊಂಡು ಹೋದಾಗ
ಆ ಹೆಂಗಸು ನನ್ನ ನ್ನೇ ಯಾಮಾರಿಸಿದ್ದು ಉಂಟು

ಅಲ್ಲಿಂದ ಬಂದ ಮೇಲೆ ತಿಳಿದದ್ದು ಅದೊಂದು
ವೇಶ್ಯಾಗೃಹವೆಂದು ನನ್ನ ಗಂಡನಿಗೆ ಗೊತ್ತಾಗಿ
ಬಂದು ಜಗಳ ಮಾಡಿ ಹೋದರು ಮತ್ತೆ ಅವರ ಸು
ಸುಳ್ಳು ದುಡ್ಡಿಗಾಗಿ ಹೋಗಿದ್ದೇನೆ ಅಂತಹ ಜಾಗಕ್ಕೆ
ಬರಬಾರದೆಂದು ನನಗೆ ಬುದ್ದಿ ಹೇಳಿ ಸಮಾಧಾನ
ಮಾಡಿ ಹೊರಟರು ಅಂದು ಗೊತ್ತಾದದ್ದು ಇವರು

ಅವಳಿಗೆ ಸಹಚಾರಿ ಎಂದು ಹೃದಯವೆ
ಕುಸಿದಂತಾಯ್ತು ಬದುಕಿದ್ದು ಸಂತಂತಾಯ್ತು
ಕಣ್ಣೀರಿನ ಬದುಕಾಯ್ತು ಅಂದಿನಿಂದ
ನನ್ನ ಮಗನಿಗಾಗಿ ಬದುಕಬೇಕಾದ ಪರಿಸ್ಥಿತಿ
ಸಾಯಲು ಆಗದೇ ಬದುಕಲು ಆಗದೆ ಮದ್ಯ
ಹೊಳೆಲಿ ಬಿಟ್ಟಂತಾಯಿತು,

ಹಪ್ಪಳ ಮಾರಿ ಇರೋ ಒಡವೆ ಮಾರಿ ಕೆಲಸ
ಮಾಡ್ಕೊಂಡು ನನ್ನ ಮಗನ್ನಾ ಓದುಸ್ಕೊಂಡು
ಜೀವನ ಸಾಗಿಸ್ತಾ ಇರುವಾಗ ನಾನು ಸರಿ ಇಲ್ಲದೆ
ನನ್ನ ಗಂಡ ಮನೆ ಬಿಟ್ಟೋಗಿದ್ದಾನೆ ಎಂದು
ಬಂದುಬಳಗ ನನ್ನ ದೂರಲು ಪ್ರಾರಂಬಿಸಿದರು
ನಾನು ಏನೇ ಹೇಳಿದರು ನಂಬದಾದರೂ

ಅವರಿಂದ ನೆಮ್ಮದಿ ಇಲ್ಲದೆ ಒದ್ದಾಟ ಅಳು ಅಳು
ಅಳು....ಅಳುಒಂದು ಬಿಟ್ಟು ಬೇರೇನು
ಉಳಿಯಲಿಲ್ಲಾ ಹೊರಗಡೆ ಎಲ್ಲೂ ಹೋಗಿ
ದುಡಿಯೋ ಹಾಗಿರಲ್ಲಿಲ್ಲಾ ಅಲ್ಲಿಗು ಬಂದು ಗಲಾಟೆ
ಮಾಡಿ ಕೆಲಸದಿಂದ ದೂರ ಮಾಡೋದು
ಅಸಹ್ಯ ಮಾತುಗಳು ಕೇಳಿ ಜನರ ಚುಚ್ಚು ಮಾತು

ಸಹಿಸದಾದೆ ಸಾಯೋ ಅಷ್ಟು ಆದರೆ
ಮಗನಿಗೋಸ್ಕರ ಬಾಳಬೇಕಾದ ಪರಿಸ್ಥಿತಿ
ಮಗನ ಐದು ತಿಂಗಳಿಂದ ಎಂಟು ಒಂಬತ್ತು
ವರ್ಷದ ವರೆಗೂ ಮಗನಿಗಾಗಿ ಈ ಒದ್ದಾಟ
ಸೆಣಸಾಟ ಬದುಕಿನ ತೊಳಲಾಟ ಬಂದುಗಳೆಲ್ಲಾ
ನನ್ನ ಗಂಡನ ಕಡೆಗೆ ನನ್ನ ದು ತಬ್ಬಲಿಯ
ಹೋರಾಟ...

ಭಾಗ-5.....

ಕೊನೆಗೊಮ್ಮೆ ನನ್ನ ತಂಗಿಯ ಮದುವೆ ಮಾತುಕತೆ
ವಧುವಿನ ಮನೆಗೆ ಹೋಗಬೇಕಾದ ಸಂದರ್ಭ
ಹೋಗುವ ದಾರಿಯಲ್ಲಿ ನನ್ನ ಗಂಡ ಅವನ ಜೊತೆ
ನಾಲ್ವರು ಹೆಂಗಸರು ಹೃದಯವೇ ಕುಸಿದಂತೆ
ಬಂದುಬಳಗ ಕಣ್ಣಾರೇ ನೋಡಿದರು ಎಲ್ಲರಿಗೂ
ಸತ್ಯದ ಅರಿವಾಯಿತು .,

ಪ್ರಯೋಜನವಿಲ್ಲ ಏಕೆಂದರೆ ಅವರನ್ನೂ
ತಡೆಯುವ ಶಕ್ತಿಯು ಯಾರಿಗೂ ಇಲ್ಲ ಅಷ್ಟೊತ್ತಿಗೆ
ದೊಡ್ಡ ಮರವಂತೆ ಬೆಳೆದಿದ್ದರೂ ತಡೆಯಲು
ಯಾವ ಪ್ರಯತ್ತಗಳನ್ನೂ ಮಾಡಲು ಸಾದ್ಯವೋ
ಎಲ್ಲವನ್ನೂ ಮಾಡಿಬಿಟ್ಟೆ ಯಾರ ಸಾದ್ಯವಿಲ್ಲ
ಆಗದೆ ಕೈ ಚೆಲ್ಲಿ ಕೂತೆ

ದೇವರ ಮೊರೆ ಹೋದೇ ಕೆಟ್ಟಂತವರಿಗೆ ದೇವರೂ
ಕೈ ಹಿಡಿಯಾಲಾರಾ ಎಂಬ ಮಾತು ನಿಜವಾಯಿತು
ಒಂಬತ್ತು ವರ್ಷದ ನಂತರ ಬದಲಾಗಿದ್ದೇನೆ ಎಂದು
ಸುಳ್ಳಿನ ಕಂತೆಯ ಜೊತೆಗೆ ಎಲ್ಲರಿಂದ ಮೋಸ
ಹೋಗಿ ಬರೀಗೈಯಲ್ಲಿ ಮನೆಗೆ ಬಂದರು
ತಪ್ಪಾಯ್ತೆಂದು ಮೊರೆ ಇಟ್ಟರು ಅಂಗಲಾಚಿದರು
ನಂಬಿದೆ...

ಬರುವಾಗ ಬಿ.ಪಿ ಶುಗರ್ ಕೂಡ ಕರೆದೂಕೊಂಡು
ಬಂದಿದ್ದರು (ಎಷ್ಟೋ ಹೆಣ್ಣುಗಳ ಸಹವಾಸ
ಮಾಡಿದ್ದರೂ) ಅಮ್ಮ ತಮ್ಮ ಅಕ್ಕ ತಂಗಿ ಎಲ್ಲಾ
ಬದಲಾದವರ ಕ್ಷಮಿಸೋದು ಹೆಣ್ಣಿನ ಗುಣವೆಂದು
ಹೇಳಿ ನಾನು ಒಪ್ಪುವಂತೆ ಮಾಡಿದರು ಒಪ್ಪಿದೆ
ಆಧರಿಸಿದೆ ಮಗುವಂತೆ ಲಾಲಿಸಿದೆ
ಪ್ರೇಯಸಿಯಂತೆ ಪ್ರೀತಿಸಿದೆ.,

ಆರೋಗ್ಯ ವು ಸುಧಾರಿಸಿತು ಪ್ರೀತಿ ಪ್ರೇಮದಿಂದ
ಸುಖ ಸಂತೋಷದಿಂದ ಸಾಗಿತ್ತು ಜೀವನ
ಮತ್ತೆ ನನ್ನ ಜೀವನ ಸರಿಯಾಯ್ತು ಎಂದು
ನಿಟ್ಟುಸಿರು ಬಿಡುವಷ್ಟರಲ್ಲಿ ಕೆಲಸ ಮಾಡಲು ಶುರು
ಮಾಡಿದರು ಪುಟ್ಟದಾಗಿ ಅಂಗಡಿ ಇಡವಾ
ಎಂದರು ಸರಿ ಎಂದು ಅಂಗಡಿ ಶುರು ಮಾಡಲು

ಸಾಲ ಮಾಡಿ ಸಂಘದಿ ದುಡ್ಡು ತಂದು ಅಂಗಡಿ
ಓಪನ್ ಮಾಡಿದೆವು ಹೀಗೆ ನಡೆಯುತ್ತಿತ್ತು
ನಂತರ ಆರ್ಕೆಸ್ಟ್ರಾ ಶುರು ಮಾಡುತ್ತೇನೆ ಎಂದರು
ಬೇಡ ಎಂದೆ ಆದರೂ ಕೇಳದೇ ಹಾಡಲು ಶುರು
ಮಾಡಿದರು ನಾನು ಹೇಳಿಕೊಡಲು ಶುರು ಮಾಡಿದೆ
ನಾನು ನನ್ನ ಗಂಡ ಇಬ್ಬರು ಹಾಡಬೇಕೆಂಬ ಆಸೆ
ಇತ್ತು...!

ಭಾಗ-6.....

ಆದರೆ ಬೇರೊಬ್ಬ ಸಿಂಗರ್ ಕರೆತಂದರು
ಅಷ್ಟೊತ್ತಿಗೆ ಅವರು ಬಂದು ಐದು ತಿಂಗಳು ಆಗಿತ್ತು
ಮತ್ತೆ ನಮ್ಮ ಜೀವನ ಶುರುವಾಗಿ ಬಂದವಳೇ ನನ್ನ
ಗಂಡನ ಮೇಲೆ ಇಷ್ಟ ಪಟ್ಟವಳು ವಾಮಾಚಾರದ
ಬಲದಿಂದ (ನಂಬುವವರಿಗೆ ಮಾತ್ರ ಇಲ್ಲದಿದ್ದಲ್ಲಿ
ಬೇಡಾ) ಅವಳ ವಶ ಮಾಡಿಕೊಂಡಳು ಮತ್ತೆ

ಹೊಡೆದಾಟ ಜಗಳ ಹೇಳಿಕೆ ಮಾತು ಕೇಳಿ ಜೀವನ
ಸಾಕಾಗಿ ಹೋಯ್ತು ಮತ್ತೆ ಇನ್ನೊಬ್ಬಳ ಸಹವಾಸ
ಇವಳೋ ಎಷ್ಟನೆಯವಳೋ ಲೆಕ್ಕವಿಲ್ಲಾ
ಮನೆಯಲ್ಲಿ ಸದಾ ಜಗಳ ನೆಮ್ಮದಿ ಇಲ್ಲಾ
ಏನು ತಂದಾಕೊಲ್ಲಾ ಇದರ ನಡುವೆ ಮೈದುನ
ನನಗೂ ನನ್ನ ಗಂಡನಿಗೂ ಜಗಳ ತಂದಿಡೋದು

ಕಾರಣ ದುಡ್ಡಿಗೋಸ್ಕರ ಅವಾಗಲೂ ನಾನೇ
ಸಾಕಬೇಕಾದ ಪರಿಸ್ಥಿತಿ ಮನೆ ಬಾಡಿಗೆ
ಕಟ್ಟುತ್ತಿರಲಿಲ್ಲಾ ಮಗನಿಗೆ ಸರಿಯಾದ ಊಟವಿಲ್ಲಾ
ಸಾಲ ಎಲ್ಲವೂ ನನ್ನ ತಲೆಗೆ ಬಂತು ಮತ್ತೆ ಕಣ್ಣೀರಿನ
ಜೊತೆ ಜೀವನ ಆ ಹೆಂಗಸಿಗು ಮದುವೆ ಆಗಿ
ಗಂಡ ಮಗ ಮಗಳು ಇದ್ದರೂ ಎಲ್ಲರನ್ನೂ ಬಿಟ್ಟು

ನನ್ನ ಜೀವನಕ್ಕೆ ಮುಳ್ಳಾಗಿ ಬಂದಳು ( ವೇದಶ್ರಿ )
ಜಗಳ ಮಾಡಿದೆ ಫೋಲೀಸ್ ಕಂಪ್ಲೇಂಟ್ ಕೊಟ್ಟೆ
ಪ್ರಯೋಜನವಿಲ್ಲಾ ಮಗನ್ನಾ ನನ್ನಿಂದ
ಕಿತ್ತುಕೊಂಡು ಮನೆಬಿಟ್ಟು ಓಡಿಸಿದರು
ಹೋಗಲ್ಲಾ ಅಂದಿದ್ದಕ್ಕೆ ಸಿಲೆಂಡರ್ ತೆಗೆದು
ಹೊಡೆಯಲು ಬಂದಾಗ ಮನೆಬಿಟ್ಟು ಹೊರಟೆ

ಅಷ್ಟಕ್ಕೇ ಹೊರಡುವವಳಲ್ಲಾ ಹೊಡೆತ ತಡೆದು
ತಡೆದು ಸಾಕಾಗಿದ್ದೇ ಕೈಗೆ ಏನೇ ಸಿಕ್ಕಿದರೂ
ಹೊಡೆಯೋದೇ ಕಬ್ಬಿಣದಲ್ಲಿ ಹೊಟ್ಟೆಗೆ ಹೊಡೆದು
ಇವಾಗಲೂ ಹೊಟ್ಟೆ ನೋವು ಚೇರಲ್ಲಿ ಒಮ್ಮೆ
ಹೊಡೆದು ತಲೆಗೆ ಏಳು ಒಲಿಗೆ ಹೀಗೆ ಹಲವಾರು
ಅಪ್ಪನ ಮನೆ ಸ್ವರ್ಗ ಗಂಡನ ಮನೆ ನರಕ ಅದಿಕ್ಕೆ

ಮನೆ ಬಿಟ್ಟು ಬಂದೆ ಜೊತೆಗೆ ಯಾರನ್ನೋ
ನೋಡಿಕೊಂಡಿದ್ದಾಳೆಂಬ ಅಪವಾದ ಅತ್ತೆ ಮಾವ
ಇಲ್ಲ ಯಾರ ಸಹಾಯವು ಇಲ್ಲ ಅಕ್ಕ ಭಾವ
ಪಕ್ಕದಲ್ಲಿದ್ದರೂ ಗಂಡ ಬಿಟ್ಟೋಳು ಅನ್ನೋ
ಅಪವಾದ ಅಕ್ಕನಿಂದಲೇ ಎಲ್ಲಿಯಾದರೂ

ಭಾಗ-7....

ಇಲ್ಲೂ ಬದುಕಲು ಬಿಡಲ್ಲಾ ಎನ್ನಲೂ
ಪೋಲಿಸರ ಸಹಾಯದಿಂದ ಅತ್ತೆಮನೆಗೆ ಬಂದೆ
ಅಲ್ಲೂ ನಾನು ಸರಿ ಇಲ್ಲವೆಂದು ಮಗನಿಂದ ಹೇಳಿಸಿ
ಮಗನೂ ನನ್ನ ನ್ನೂ ಬೇಡವೆಂದಾಗ ಸಾವೇ ಸೂಕ್ತ
ಅಂದ್ಕೊಂಡೆ ಆದರೂ ಯಾರ ಸಹಾಯವಿಲ್ಲದೇ
ನನ್ನ ದುಡಿಮೆಯಲಿ ನಾನು ದುಡಿದು
ಬದುಕುತಿದ್ದೇನೆ

ಅಲ್ಲಿಂದ ಬಂದಮೇಲೇ ಮಗನಿಗೂ ಹೊಡೆದು
ತುಂಬಾ ಹಿಂಸೆ ಕೊಟ್ಟು ಮನೆಬಿಟ್ಟು ಹೋಡಿಸಿದರು
ಮಗನು ತಪ್ಪಾಯಿತೆಂದು ಬಂದಾಗ ಕೂಡದೇ ವಿಧಿ
ಇರಲ್ಲಿಲ್ಲಾ ಸಾಕಿ ಸಲಹುತಿದ್ದೇನೇ ನನ್ನ ಕರ್ತವ್ಯ
(ನನ್ನ ಕರುಳ ಬಳ್ಳಿ ಅಲ್ವಾ ಅವನೇ ನನ್ನ
ಪ್ರಪಂಚ )

ಮನೆಬಿಟ್ಟು ಬಂದಾಗ ಮಗ ಏಳನೆ
ತರಗತಿ ಇಂದು ಹತ್ತನೇ ತರಗತಿ ಆರು ತಿಂಗಳ
ಹಿಂದೆ ನನಗೆ ಗಾಡಿಯಲ್ಲಿ ಅಪಘಾತ ಸಂಭವಿಸಿದ
ಕಾರಣ ಮಗನನ್ನು ಮತ್ತೆ ಬಂದು ಕರೆದುಕೊಂಡು
ಹೋಗಿದ್ದಾರೆ ಮಗನ ನೆನಪು ಹಿಂದಿನ ಕರಾಳ
ನೆನಪುಗಳ ಮದ್ಯ ಬದುಕುತಿದ್ದೇನೆ

ಅಮ್ಮ ತಮ್ಮ ತಂಗಿಯರಿಬ್ಬರು ಅಕ್ಕ ಬಂಧು ಬಳಗ
ಎಲ್ಲರೂ ಇದ್ದಾರೇ ಯಾರಿಂದಲೂ ಯಾವುದೇ
ಸಹಾಯವಿಲ್ಲಾ ಎಲ್ಲರೂ ಕೇವಲವಾಗಿ
ನೋಡೋರೇ ಬಂದುಬಳಗ ನನ್ನ ಗಂಡನಿಗೆ
ಇಂದೂ ಸಪೋರ್ಟ್ ಮಾಡುತ್ತಿದ್ದಾರೆ ಕಾರಣ
ದುಡ್ಡಿಗೋಸ್ಕರ ಯಾರ ನಂಬಲಿ ಯಾರ ಕಾಯಲಿ

ಮಗನಿಗಾಗಿ ಎಲ್ಲಾ ಇದ್ದು ತಬ್ಬಲಿಯ ಬದುಕು
ಹದಿನಾರು ವರ್ಷದಿಂದ ಇದೇ ಒಂಟಿ ಬದುಕು
ಮುಂದುವರೆಯುತ್ತದೆ...........?????? ✍
😭 shobha 😭