...

5 views

ಪರಿಶ್ರಮ
"ಪರಿಶ್ರಮ"ಈ ಪದಕ್ಕೆ ಬೆಲೆಕಟ್ಟಲು ಅಸಾಧ್ಯವಾದ ಅರ್ಥವಿದೆ....
ಹೊಲ ಊಳುವ ರೈತ ಸಹ ಪರಿಶ್ರಮವನ್ನ ಕೈಗೊಳ್ಳುತ್ತಾನೆ. ಕೆಲವೊಮ್ಮೆ ದುಸ್ಥಿತಿ ಎದುರಾದಲ್ಲಿ ಬೇಸರವ ವ್ಯಕ್ತಪಡಿಸುತ್ತಾನೆ ನಿಜ ಆದರೆ ತನ್ನ ಮೇಲಿನ ನಂಬಿಕೆಯಿಂದ ಪುನಃ ಪ್ರಯತ್ನಿಸುತ್ತಾನೆ ಮೊದಲಿಗಿಂತ ಹೆಚ್ಚಾಗಿ ಪರಿಶ್ರಮವ ಹಾಕುತ್ತಾನೆ....
ಹೀಗೇ, ವೈದ್ಯರು ರೋಗಿಯನ್ನು ಗುಣಪಡಿಸಲು ಪ್ರಯತ್ನಿಸುತ್ತಾನೆ ಇದೂ ಸಹ ಒಂದು ರೀತಿಯಲ್ಲಿ ಪರಿಶ್ರಮವೇ ಸರಿ....
ಇದೇ ರೀತಿ, ಒಬ್ಬ ವಿದ್ಯಾರ್ಥಿಯು ಉತ್ತಮ ಅಂಕಗಳನ್ನು ಗಳಿಸಲು ಪರಿಶ್ರಮವ ಹಾಕುತ್ತಾನೆ....
ಒಬ್ಬ ಶಿಕ್ಷಕ ತನ್ನ ವಿದ್ಯೆಯನ್ನು ವಿದ್ಯಾರ್ಥಿಗಳಲ್ಲಿ ಮನನವಾಗಿಸಲು ಪರಿಶ್ರಮವ ಹಾಕುತ್ತಾನೆ....
ಭೂಮಿಯ ಮೇಲಿನ ಒಂದೇ ಒಂದು ಜೀವಿಯೂ ಸಹ ತನ್ನ ನಿತ್ಯದ ಕಾರ್ಯವ ನಡೆಸಲು ಪರಿಶ್ರಮವ ಹಾಕುತ್ತವೆ....
ಆದರೆ, ಒಮ್ಮೆ ಪರಿಶ್ರಮಕ್ಕೆ ಫಲ ದೊರೆಯದಿದ್ದರೆ ಎಂದೂ ನಂಬುಗೆಗೆ ಸೋಲಕೂಡದು....
ಒಮ್ಮೆ ನಂಬುಗೆಯ ಮನದಿ ಅಳಿಸಿದರೆ ಎಂದೂ ಸತ್ಯ ನಂಬುಗೆಯ ಪುನಃ ಭರಿಸಲು ಕಷ್ಟಸಾಧ್ಯ....
"ಪ್ರಯತ್ನವೇ ಪರಿಶ್ರಮಕ್ಕೆ ದಾರಿ"
"ಪರಿಶ್ರಮಕ್ಕೆ ನಂಬುಗೆಯೇ ನೌಕೆ"