...

2 views

"ಮಾತುಗಳ ಚಕಮಕಿ....
" ಎಲ್ಲರೂ ನನ್ನವರೆಂದು ಬದುಕುವ ಹೆಣ್ಣು ಎಲ್ಲರಲ್ಲಿ ಒಂದಾಗಿ ಅವರಲ್ಲಿ ಒಬ್ಬಳಾಗಿ ಬದುಕುವಳು
ಜೀವನ ನಡೆಸುವಳು.ಆದರೆ ಯಾರು ಅವಳ ನೋವ ಅರಿಯುವುದಿಲ್ಲ, ಮಾತು ಮಾತು ಒಂದು ಹೆಣ್ಣು ಆಡುವ ಜನರ ಬಾಯಿಗೆ ತುತ್ತಾಗುತ್ತಾಳೆ.

ಹೆಣ್ಣು ಅಂದಮೇಲೆ ಅವಳಿಗೆ ಎಲ್ಲವೂ ಸರಿ ಇರಬೇಕು ಇಲ್ಲದಿದ್ದಲ್ಲಿ ಅವಳ ಬದುಕೇ ನರಕ
ತವರಲ್ಲಿ ಮಗಳಾಗಿ ನೆಮ್ಮದಿಯ ಕಾಣುತ್ತಾಳೆ,
ಅದೇ ಗಂಡನ ಮನೆಯಲ್ಲಿ ನರಕವ ನೋಡುತ್ತಾಳೆ ಅನುಭವಿಸುತ್ತಾಳೆ ಯಾರಿಗೂ ಹೇಳಲಾಗದೇ

ತನ್ನಲ್ಲಿ ತಾನು ಕೊರಗುತ್ತಾ ನೋವ ನುಂಗುತ್ತಾ
ಇಲ್ಲಸಲ್ಲದ ನಿಂದನೆಗೆ ಗುರಿಯಾಗುತ್ತಾ.,
ಮಾತು ಆಡದೇ ನೋಯುತ್ತಾಳೆ ಸರ್ವರಲ್ಲೂ ಸಹಚಾರಿಣಿ ಈ ಹೆಣ್ಣು ಮಾತುಗಳಿಂದ ಚುಚ್ಚಿ ಕೊಲ್ಲತ್ತಾರೆ ಅವಳ ಮನಸನ್ನೂ.

ಅವಾಗ ಅವಳನ್ನು ಅರಿಯಲು ಶುರು ಮಾಡುತ್ತಾಳೆ
ಮೌನದಿ ಮನದಲಿ ಮಾತನಾಡುತ್ತಾ ಮನವೇ ಅವಳಿಗೆ ಸಹಚಾರಿಯಾಗತ್ತಾ ಹೀಗೇ ಎಷ್ಟೋ ಹೆಣ್ಣುಮಕ್ಕಳು ಆಡುವ ಜನರ ಮಾತಿಗೆ ಸಿಕ್ಕು ಪ್ರಪಂಚದೆದುರು ನಲುಗುತ್ತಿರುತ್ತಾರೇ.

ಪ್ರತಿಯೊಬ್ಬ ಮಹಿಳೆಯು ಮಾತುಗಳ ಚಾಕಚಕ್ಯತೆಯ ಕಲಿಯಬೇಕು ಕಲಿತಾಗ ಎಂದೂ ಇಂಥವರ ಮಾತಿಗೆ ನೋವ ಪಡದೇ ಎಲ್ಲವ ಜಯಿಸುವಂತೆ ಧೃಡಶಾಲಿಯಾಗಿ ನಿಲ್ಲುತಾತಳೆ
ಅವಳ ಮಾತಿನ ಚಕಮಕಿಗೆ ಯಾರು ಉತ್ತರಿಸಬಾರದು.,

ಕಲಿಯಬೇಕು ಮಾತಿನ ಮುಂದೆ ಯಾವುದೂ ಇಲ್ಲ
ಮಾತಿನಿಂದ ಇಡೀ ಪ್ರಪಂಚವೇ ಗೆಲ್ಲಬಹುದು
ಮಾತೇ ಬಂಡವಾಳ ಮಾತನಾಡದೇ ಕುಗ್ಗಲು
ಹೀಗೆ ಮೌನದಿ ಮನಸಲ್ಲೇ ಮಾತನಾಡುತ್ತಾ ಮನದಿ ಒಂಟಿಯಾಗಿ ನರಳುವಂತಾಗುತ್ತೆ.

ಜೀವನವೇ ಒಂದು ಹೋರಾಟ ಎಂದಾಗ ಎಲ್ಲವ
ಕಲಿಯಬೇಕು ಹೋರಾಟದಲಿ ಗೆಲುವು ನೊಂದ ಹೆಣ್ಣಿನ ಜಯವೇ ಆಗಿರಬೇಕು ಹೆಣ್ಣು ಅಬಲೆಯಲ್ಲಾ ಅವಳೆಂದು ಸಬಲೆಯಂತೆ
ಮುನ್ನುಗ್ಗತ್ತಿರಬೇಕು..

ಯಾರಿಗೂ ಅಂಜದೆ ಎದೆಗುಂದದೆ ಮುನ್ನುಗ್ಗುತ್ತಿರಬೇಕು ಹೆಣ್ಣಿನ ಜೀವನ ಎಂದಿಗೂ ಕಣ್ಣೀರಿಗೆ ಮುಡುಪಲ್ಲಾ ಎಂದಿಗೆ ಅರಿವಳೋ ಎಲ್ಲರಲಿ ಒಂದಾಗಿ ಬೆರೆವಳೋ ಮೌನವ ಮುರಿವಳೋ ಮಾತಿನ ಬಲವ ತೋರ್ವಳೋ..,✍

ಸತ್ಯ ಅಲ್ವಾ...
👍 shobha 🤔