...

6 views

ಕನಸಿನ ಲೋಕ
ಈ ಕನಸಿನ ಲೋಕ ಸೃಷ್ಟಿ ಆದದ್ದು ಐದು ಜನ ಸ್ನೇಹಿತರಿಂದ ವಿನೋದ್, ಪ್ರದೀಪ್, ಶಶಾಂಕ್, ಅನಿಲ್ ಇವರೊಡನೆ ಐದನೆಯದಾಗಿ ಸಿಕ್ಕವಳೆ ರಾಧ.
    ಇವರ ಸ್ನೇಹ ರಾಧೆಯೊಡನೆ ಹೇಗೆ ಒಂದಾಯಿತು ಎಂಬುದೇ ಇಲ್ಲಿನ ಕಥೆಯ ಆರಂಭ.....
    ವಿನು, ಪ್ರದಿ, ಶಶಾಂಕ್ ಮತ್ತು ಅನಿಲ್ ಎಲ್ಲರೂ ಚಿಕ್ಕ ಹುಡುಗರು ತಂದೆ ತಾಯಿ ಯಾರು ಇಲ್ಲದ ಅನಾಥರು ಅವರದೇ ಆದ ಪ್ರಪಂಚದಲ್ಲಿ ಬದುಕನ್ನು ಸಾಗಿಸುತ್ತಾ ಹೋಗುತಿದ್ದರು.
   ನಂತರ ಒಂದು ದಿನ ಯಾವುದೋ ಒಂದು ಕೊಳದ ಬಳಿ ರಾಧೆಯನ್ನು ನೋಡುತ್ತಾರೆ ಅಲ್ಲಿ ಅವಳು ಸಾವು ಬದುಕಿನ ಮದ್ಯೆ ನರಳುತ್ತಾ ಇರುತ್ತಾಳೆ,
   ಯಾರೋ ದುಷ್ಟರು ಅವಳನ್ನು ಎಳೆದು ತಂದು ಕೊಳಕ್ಕೆ ದೂಡಿ ಹೋಗಿರುತ್ತಾರೆ. ಯಾಕೆ ಯಾವ ಕಾರಣಕ್ಕೆ ಒಂದು ತಿಳಿಯದ ರಾಧೆ.
  ಅಲ್ಲಿ ರಾಧೆಯನ್ನು ನೋಡಿದ ಪ್ರದೀಪ್ ಅವಳನ್ನು ಮೇಲಕ್ಕೆ ಎತ್ತಿಕೊಂಡು ಬರುವನು. ನಂತರ ಅವಳನ್ನು ಮನೆಗೆ ಕರೆದುಕೊಂಡು ಹೋಗಿ ಆರೈಕೆ ಕೂಡ ಮಾಡುತ್ತಾರೆ. ರಾಧೆ ಪೂರ್ಣ ಸುಧಾರಿಸಿದ ನಂತರ ಅವಳನ್ನು ಕೇಳುತ್ತಾನೆ ನೀನು ಯಾರು ಅಲ್ಲಿ ಹೇಗೆ ಬಂದೆ ನಿನ್ನ ಹೆಸರು ಏನು ಎಂದೆಲ್ಲ ಒಂದೇ ಸಾರಿ ಕೇಳುತ್ತಾನೆ ಅವಳಿಗೆ ಗಾಬರಿ ಶುರು ಆಗಿ ಪ್ರಜ್ಞೆ ತಪ್ಪುಗಳು ಅದನ್ನು ನೋಡಿದ ಪ್ರದೀಪ್ ಸ್ನೇಹಿತರು ಅವಳು ಹೆದರಿದ್ದಾಳೆ ಏನು ಕೇಳಬೇಡ ಬಿಟ್ಟು ಬಿಡು ನೋಡಲು ತುಂಬ ಒಳ್ಳೆಯ ಹುಡುಗಿಯಂತೆ ಇದ್ದಾಳೆ ಯಾರೋ ದುಷ್ಟರು ಹೀಗೆ ಮಾಡಿದ್ದಾರೆ ಅನಿಸುತ್ತಿದೆ ಎಂದು ಅವನಿಗೆ ಹೇಳುತ್ತಾರೆ ಅವಳಾಗೆ ಎಲ್ಲ ಹೇಳುವ ವರೆಗೂ ಏನು ಕೇಳುವುದು ಬೇಡ ಎಂದು ಸುಮ್ಮನಾಗುತ್ತಾರೆ.
    ಹೀಗೆ ಸ್ವಲ್ಪ ದಿನಗಳು ಕಳೆಯುತ್ತದೆ ರಾಧ ಎಲ್ಲರೊಡನೆ ಮಾತನಾಡಲು ಶುರು ಮಾಡುವಳು ಆದರೆ ಸ್ವಲ್ಪ ಮುಜುಗರ ಪಡುತ್ತಾ ಇರುತ್ತಾಳೆ ಎಲ್ಲದಕ್ಕೂ. ನಂತರ ಅವರೆಲ್ಲ ನಾವೆಲ್ಲ ನಿನ್ನ ಸ್ನೇಹಿತರು ಎಂದು ತಿಳಿಯಮ್ಮ ರಾಧ ಎಂದು ಹೇಳುವರು.
ರಾಧ ಸಂಪೂರ್ಣ ಹುಶಾರಾಗುತ್ತಾಳೆ ಪ್ರದೀಪ್ ನಾನು ಹೋಗುವೆ ಎಂದಾಗ ಅದಕ್ಕೆ ಪ್ರದೀಪ್ ಎಲ್ಲಿ ಹೋಗುತ್ತಿಯ ಯಾರು ಇದ್ದಾರೆ ಹೇಳು ನಾವೇ ಬಿಟ್ಟು ಬರುತ್ತೇವೆ ಎಂದು ಹೇಳುತ್ತಾರೆ. ಆದರೆ ಅವಳ ಕಡೆಯಿಂದ ಯಾವುದೇ ಉತ್ತರ ಬಾರದೆ ಮೌನ ಒಂದೇ ಆಗಿರುವುದು.
     ನಂತರ ಬಾಯಿ ತೆರೆದು ಯಾರು ಇಲ್ಲ ನನಗೆ ನಾನು ಅನಾಥೆ ಎಂದು ಹೇಳುವಳು. ಹಾಗಾದರೆ ಎಲ್ಲಿ ಹೋಗುವೆ ನಮ್ಮ ಜೊತೆಯೇ ಇರು ನಾವು ಅನಾಥರು ಯಾರು ಇಲ್ಲ ಎಂದು ಹೇಳುತ್ತಾರೆ. ಅದಕ್ಕೆ ರಾಧ ನೀವು ಕಷ್ಟ ಪಟ್ಟು ದುಡಿದು ಜೀವನ ಮಾಡುತ್ತಾ ಇದ್ದೀರಿ ನಿಮಗೆ ನನ್ನಿಂದ ತೊಂದರೆ ಆಗುವುದು ಬೇಡ ಎಂದು ಹೇಳುವಳು. ಅದಕ್ಕೆ ಎಲ್ಲರು ತೊಂದರೆ ಏನು ಇಲ್ಲ ನೀನು ಕೂಡ ನಮ್ಮ ಸ್ನೇಹಿತೆ ಎಂದು ಅವರೆಲ್ಲರೂ ಹೇಳುವರು ಅದಕ್ಕೆ ರಾಧೆಯ ಮುಖದಲ್ಲಿ ಸಂತೋಷ ಮೂಡುವುದು.
   ರಾಧೆ ಎಲ್ಲರಿಗೂ ಧನ್ಯವಾದ ಹೇಳುತ್ತಾ ನಾನು ಓದಬೇಕು ಸ್ನೇಹಿತರೆ ಎಂದು ಹೇಳುವಳು ಅದಕ್ಕೆ ಅವರು ಓದು ಎಷ್ಟು ಬೇಕಾದರೂ ನಾವು ಸಹಾಯ ಮಾಡುತ್ತೇವೆ ಎಂದು ಹೇಳುವರು ಅದಕ್ಕೆ ರಾಧೆ ಒಪ್ಪುವಳು...
     ಹೀಗೆ ಓದುತ್ತಾ ಓದುತ್ತಾ ದೊಡ್ಡವಳು ಆಗಿದ್ದಳು ತುಂಬ ಸುಂದರವಾಗಿ ಕಾಣುತ್ತ ಇದ್ದಳು ಎಲ್ಲರೂ ಅವಳ ಸೌಂದರ್ಯಕ್ಕೆ ಮನ ಸೋಲುವಷ್ಟು ಎಲ್ಲರೂ ಅವಳನ್ನು ಇಷ್ಟ ಪಟ್ಟರೆ ಅವಳು ಮಾತ್ರ ಪ್ರದೀಪ್ ನನ್ನು ತುಂಬ ಇಷ್ಟ ಪಡುತಿದ್ದಳು.
    ಹೀಗೆ ಅವಳು ಪದವಿ ಹಂತಕ್ಕೆ ಬರುವಳು ರಾಧ ಇದ್ದ ಸ್ಥಳದಿಂದ ದೂರ ಹೋಗುವ ಪರಿಸ್ಥಿತಿ ಬರುವುದು ಅವಳು ಸ್ನೇಹಿತರೊಡನೆ ಮಾತು ಆಡಲು ಕಷ್ಟ ಆಗುತ್ತಿತ್ತು ಆದರೂ ಅವಳಿಗೆ ಎಲ್ಲರೂ ದೈರ್ಯ ಹೇಳಿ ನೀನು ಓದು ಮುಗಿಸಿ ಬಾ ಎಂದು ಕಳಿಸುತ್ತಾರೆ.
  ಅವಳ ಜೊತೆಗೆ ಇವರು ಕೂಡ ಓದಿ ಪದವಿಯನ್ನು ಮುಗಿಸಿದ್ದರು. ಇವರೇ ಸ್ವಂತ ಉದ್ಯಮ ಮಾಡಿಕೊಂಡು ಒಟ್ಟಿಗೆ ಜೀವನ ನಡೆಸುತ್ತಿರುತ್ತಾರೆ ಪ್ರದೀಪ್, ಅನಿಲ್, ಶಶಾಂಕ್, ವಿನೋದ್ ಇವರೆಲ್ಲರೂ.....
     ಪ್ರದೀಪ್ ಅಂದರೆ ರಾಧೆಗೆ ತುಂಬ ಇಷ್ಟ ಆದರೆ ಅವಳು ಹೇಳಿರಲಿಲ್ಲ ಎಲ್ಲರಿಗೂ ಆಶ್ಚರ್ಯ ಆಗುವ ರೀತಿ ತಿಳಿಸಬೇಕು ಎಂದುಕೊಳ್ಳುತ್ತಾ ಅವಳ ಓದನ್ನು ಮುಂದುವರೆಸುತ್ತಾರೆ. ಅವಳು ಓದಲು ಬೆಂಗಳೂರಿನಿಂದ ವಿದೇಶಕ್ಕೆ ಹೋಗುತ್ತಾಳೆ ಅಲ್ಲಿಂದ ಕರೆ ಮಾಡುವಳು ವಿನೋದ್ ಗೆ ಹೇಗಿದ್ದೀರಿ ಎಲ್ಲರೂ ನಾನು ನಿಮ್ಮಲ್ಲಿ ಮಾತು ಆಡಲು ಆಗಿಲ್ಲ ಕ್ಷಮಿಸಿ ಎಂದು ಹೇಳುವಳು ವಿನೋದ್ ಅದಕ್ಕೆ ಕ್ಷಮೆ ಯಾಕೆ ನೀನು ಓದಬೇಕು ಅಂತ ತಾನೇ ನಾವು ಇಷ್ಟು ಕಷ್ಟ ಪಡುತ್ತಾ ಇರುವುದು ಎಂದು ಹೇಳುವನು ಅದಕ್ಕೆ ರಾಧ ನೀವು ಯಾವುದಕ್ಕೂ ಕಷ್ಟ ಪಡುವ ಅಗತ್ಯವಿಲ್ಲ ಇನ್ನೂ ಮುಂದೆ ನಾನು ನಮ್ಮ ದೇಶಕ್ಕೆ ಹಿಂದಿರುಗಿ ಬರುವೆ ಓದು ಮುಗಿಸಿಕೊಂಡು ಆಗ ಎಲ್ಲ ಹೇಳುವೆ ಎಂದು ಹೇಳುವಳು ಆದರೆ ವಿನೋದ್ ಗೆ ಯಾವುದು ಅರ್ಥ ಆಗಲಿಲ್ಲ ನಂತರ ರಾಧ ಪ್ರದೀಪ್ ಹೇಗಿದ್ದಾನೆ ಅಂತ ಕೇಳುತ್ತಾಳೆ ವಿನೋದ್ ಗೆ ತಿಳಿದಿತ್ತು ರಾಧ ಪ್ರದೀಪ್ ನನ್ನು ತುಂಬ ಪ್ರೀತಿ ಮಾಡುತ್ತಾ ಇದ್ದಳು ಎಂದು ಆದರೆ ಪ್ರದೀಪ್ ಇನ್ನಾರನ್ನೋ ಪ್ರೀತಿ ಮಾಡಿ ಮದುವೇ ಆಗಿ ಬಿಟ್ಟಿರುತ್ತಾನೆ.
  ವಿನೋದ್ ಏನು ಹೇಳದೆ ರಾಧ ನೀನು ಮೊದಲು ಓದನ್ನು ಸಂಪೂರ್ಣವಾಗಿ ಮುಗಿಸಿಕೊಂಡು ಬಾ ನನಗೆ ತುಂಬಾ ಸಂತೋಷ ಆಗುವುದು ಎಂದು ಹೇಳುವನು ರಾಧ ಹೇಯ್ ವಿನು ಶಶಾಂಕ್, ಅನಿಲ್, ಹೇಗಿದ್ದಾರೆ ನನ್ನ ಮರೆತೇ ಹೋಗಿದ್ದಾರೆ ಅನಿಸುತ್ತೆ ಇಲ್ಲ ಅವರು ನಿನ್ನ ಮರೆತಿಲ್ಲ ಎಲ್ಲರೂ ಎಷ್ಟು ಬಾರಿ ನೆನೆಯುತ್ತಾರೆ ನಿನಗೆ ತಿಳಿದಿಲ್ಲ ಎಂದು ಹೇಳಿ ಸರಿ ನೀನು ಮೊದಲು ಓದಿನ ಕಡೆ ಗಮನ ಕೊಡು ಓದು ಮುಗಿಸಿ ಬಾ ಎಂದು ಹೇಳಿ ಕರೆಯನ್ನು ಕಡಿತ ಗೊಳಿಸುತ್ತಾನೇ.
    ವಿನೋದ್ ಮನದಲ್ಲೇ ಹೇಳಿಕೊಳ್ಳುತ್ತಾ ಪ್ರದೀಪ್ ರಾಧ ನನ್ನನ್ನು ಇಷ್ಟ ಪಡುತ್ತಾ ಇದ್ದಾಳೆ ಎಂದು ತಿಳಿದಿದ್ದರು ಕೂಡ ಅವಳ ಸ್ನೇಹಿತೆಯರನ್ನು ಮದುವೇ ಆಗಿದ್ದಾನೆ ಇದೆಲ್ಲ ತಿಳಿದರೆ ರಾಧೆಯ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಾ ಅಲ್ಲೇ ಕುಳಿತು ಬಿಡುವನು.
    ಪ್ರದೀಪ್ ರಾಧೆಯ ಗೆಳತಿಯನ್ನು ಪ್ರೀತಿಸಿದರು ಕೂಡ ಅವಳು ಸಿರಿವಂತೆ ಒಬ್ಬಳೇ ಮಗಳು ಅವಳ ಅಪ್ಪನಿಗೆ ಎಂದು ತಿಳಿದು ಮದುವೆ ಆಗಿರುತ್ತಾನೆ.....

  ಮುಂದೆ ಏನಾಗುವುದು ಎಂದು ಕಾದು ಓದಿ.....
ಏನಾದರೂ ತಪ್ಪಿದ್ದರೆ ತಿದ್ದಿಕೊಂಡು ಓದಿ...🙏


© Radha