ಅಟಲ್ ಬಿಹಾರಿ ವಾಜಪೇಯಿ..
ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ..1924
ಅಜಾತ ಶತ್ರು ಎಂದೇ ಹೆಸರಾದ ಅಟಲ್ ಬಿಹಾರಿ ವಾಜಪೇಯಿ
3 ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ಅವರು ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಹಾಸ್ಯಪ್ರಜ್ಞೆಯ ಸರಳ ಮನುಷ್ಯರಾಗಿ, ಮಾನವೀಯ ಅಂತಃಕರಣದ ಜನಾನುರಾಗಿಯಾಗಿ ಕೋಟ್ಯಂತರ ಭಾರತೀಯರ ಹೃದಯದಲ್ಲಿ ನೆಲೆಸಿದವರು.
ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಪ್ರಧಾನಿಯಾಗಿ ಐದು ವರ್ಷ ಪೂರೈಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ವಾಜಪೇಯಿ. 1998 ರಿಂದ 2004 ರವರೆಗೆ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವಾಜಪೇಯಿ ಅವರು ಹಲವು ಮೊದಲುಗಳಿಗೆ ನಾಂದಿ ಹಾಡಿದವರು. ಇಂಥ ಅಜಾತಶತ್ರು ವಾಜಪೇಯಿ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.
ಜನನ ಮತ್ತು ವಿದ್ಯಾಭ್ಯಾಸ
ಮಧ್ಯಪ್ರದೇಶದ ಗ್ವಾಲಿಯರ್ ನ 'ಶಿಂದೆ ಕಿ ಚವ್ವಾಣಿ'ಎನ್ನುವ ಗ್ರಾಮದಲ್ಲಿ 1924 ರ ಡಿಸೆಂಬರ್ 25 ವಾಜಪೇಯಿ ಅವರ ಜನನ
ತಾಯಿ ಕೃಷ್ಣಾ ದೇವಿ ಮತ್ತು ತಂದೆ ಕೃಷ್ಣ ಬಿಹಾರಿ ವಾಜಪೇಯಿ
ಗ್ವಾಲಿಯರ್ ನಲ್ಲೇ ವಿದ್ಯಾಭ್ಯಾಸ ಮುಗಿಸಿದ ವಾಜಪೇಯಿ ಅವರು ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪರಿಣಿತಿ ಪಡೆದಿದ್ದರು. ನಂತರ ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು.
ಗ್ವಾಲಿಯರ್ ನ ಯುವ ಸಂಘಟನೆಯಾದ ಆರ್ಯ ಕುಮಾರ್ ಸಭಾ ಮೂಲಕ ಸಾಮಾಜಿಕ ಬದುಕಿಗೆ ಪ್ರವೇಶಿಸಿದ ವಾಜಪೇಯಿ ಅವರು ರಾಷ್ಟ್ರೀಯ ಸ್ವಯಂಸೇವಕದೊಂದಿಗೆ ಗುರುತಿಸಿಕೊಂಡವರು.
ಬಲಪಂಥೀಯ ಸಿದ್ಧಾಂತದೆಡೆಗೆ ಆಕರ್ಷಣೆ
1939 ರಿಂದ ಆರೆಸ್ಸೆಸ್ ನ ಸ್ವಯಂಸೇವಕರಾಗಿ ಸೇರಿದ ವಾಜಜಪೇಯಿ ಅವರನ್ನು ಬಲಪಂಥೀಯ ಸಿದ್ಧಾಂತಗಳು ಬಹುವಾಗಿ ಆಕರ್ಷಿಸಿದ್ದವು.
ಆರೆಸ್ಸೆಸ್ ಹಿರಿಯ ಮುಖಂಡ ಬಾಬಾ ಸಾಹೇಬ್ ಆಪ್ಟೆ (ಉಮಾಕಾಂತ್ ಕೇಶವ್ ಆಪ್ಟೆ) ಅವರಿಂದ ಪ್ರಭಾವಿತರಾಗಿ 1940-44 ರವರೆಗೆ ಆರೆಸ್ಸೆಸ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಅವರು ನಂತರ ಪೂರ್ಣಾವಧಿ ಕಾರ್ಯಕರ್ತರಾದರು.
ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್ ಮತ್ತು ವೀರ್ ಅರ್ಜುನ್ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.
1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ 23 ದಿನಗಳ ಕಾಲ ಬಂಧನಕ್ಕೊಳಗಾಗಿದ್ದ ವಾಜಪೇಯಿ ಅವರ ರಾಜಕೀಯ ಬದುಕಿನ ಆರಂಭವಾಗಿದ್ದು ಆಗಲೇ.
1951ರಲ್ಲಿ ಭರತೀಯ ಜನಸಂಘ ಆರಂಭವಾದಾಗ ಅದರೊಂದಿಗೆ ಸಕ್ರಿಯರಾದ ವಾಜಪೇಯಿ ಅವರು ಶಾಮ್ ಪ್ರಸಾದ್ ಮುಖರ್ಜಿ ಮತ್ತು ದೀನ ದಯಾಳ್ ಉಪಾಧ್ಯಾಯ ಅವರ ಒಡನಾಟಕ್ಕೆ ಬಂದರು.
1954 ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರೇತರರನ್ನು ಕೀಳಾಗಿ ಕಾಣುವ ಪ್ರವೃತ್ತಿಯನ್ನು ವಿರೋಧಿಸಿ ಶಾಮ್ ಪ್ರಸಾದ್ ಮುಖರ್ಜಿ ಅವರು ಆರಂಭಿಸಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ವಾಜಪೇಯಿ ಅವರೂ ಭಾಗಿಯಾಗಿದ್ದರು.
1957ರಲ್ಲಿ ಮಥುರಾ ಲೋಕಸಭಾ ಕ್ಷೇತ್ರದಿಂದ ಸೋತರೂ, ಬಲರಾಮ್ಪುರ ಕ್ಷೇತ್ರದಿಂದ ಗೆದ್ದ ವಾಜಪೇಯಿ ಅವರ ಮಾತಿನ ಶೈಲಿಗೆ ಸ್ವತಃ ಜವಹರಲಾಲ್ ನೆಹ್ರೂ ಅವರೇ ಮರುಳಾಗಿದ್ದರು. ಅವರೊಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂದು ಸ್ವತಃ ನೆಹರೂ ಅವರೇ ಭವಿಷ್ಯ ನುಡಿದಿದ್ದರು!
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ...
1975 ರಿಂದ 1977 ರ ವರೆಗೆ ತುರ್ತು ಪರಿಸ್ಥಿಯ ಸಮಯದಲ್ಲಿ ಸಾಕಷ್ಟು ಬಾರಿ ವಾಜಪೇಯಿ ಅವರು ಜೈಲಿಗೆ ತೆರಳಿದರು. ಆದರೆ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ನಡೆಯನ್ನು ಅವರು ಬಹುವಾಗಿ ಖಂಡಿಸಿದ್ದರು.
1977 ರ ಚುನಾವಣೆಯಲ್ಲಿಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು ವಾಜಪೇಯಿ
ವಿದೇಶಾಂಗ ಸಚಿವರಾಗಿದ್ದ ಸಮಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾತಡುವ ಮೂಲಕ ಅವರು ದಾಖಲೆ ಬರೆದರು.
1980 ರಲ್ಲಿ ತಮ್ಮ ಬಹುಕಾಲದ ಸ್ನೇಹಿತರಾದ ಎಲ್ ಕೆ ಅಡ್ವಾಣಿ, ಭೈರಾನ್ ಸಿಂಗ್ ಶೆಖಾವತ್ ಸೇರಿದಂತೆ ಜನಸಂಘ ಮತ್ತು ಆರೆಸ್ಸೆಸ್ ನ ಹಲವು ಸಹೋದ್ಯೋಗಿಗಳನ್ನೂ, ಸಮಾನ ಮನಸ್ಕರನ್ನೂ ಒಂದೆಡೆ ಸೇರಿಸಿದರು. ಈ ಮೂಲಕ 'ಭಾರತೀಯ ಜನತಾ ಪಕ್ಷ'(ಬಿಜೆಪಿ) ಸ್ಥಾಪನೆಯಾಯಿತು. ಬಿಜೆಪಿಯ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದ ವಾಜಪೇಯಿ ಅವರು, ತಮ್ಮ ಅತ್ಯುತ್ತಮ ಮಾತುಗಾರಿಕೆ, ಸರಳತೆಯಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಪಡೆದರು.
ನಂತರ ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಕುರಿತಂತೆ ನಡೆಸಿದ ಹೋರಾಟದಲ್ಲೂ ವಾಜಪೇಯಿ ಅವರ ಪಾತ್ರ ಅಪಾರ.
#Kannada #Kannadaquote #vijaykumarvm #ವಿಬೆಣ್ಣೆ #ಸಂಗ್ರಹ
© ವಿಜು ✍ 💞