...

1 views

ಮಕ್ಕಳ ಸಾಹಿತ್ಯ : ಅಂಶುಪುಟ್ಟ ಕತೆ
ಅಂಶು ಪುಟ್ಟ

#kidsstory
#moralstory
#childrenliterature
#kidsstoryteller
ಅಂಶು ಪುಟ್ಟ ಪ್ರತಿದಿನ ಶಾಲೆಗೆ ಹೋಗಲು ಹಟ ಮಾಡುತ್ತಿದ್ದ. ಅವನ ಹೆತ್ತವರು ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದ ಕಾರಣ ಅಜ್ಜ‌ನಿಗೆ ಅವನ ಜವಾಬ್ದಾರಿ ವಹಿಸಿದ್ದರು. ಪ್ರತಿದಿನ ಶಾಲೆಗೆ ಕರೆದುಕೊಂಡು ಹೋಗುವುದು, ಸಂಜೆ ಮನೆಗೆ ಕರೆದುಕೊಂಡು ಬರುವುದು. ಅಂಶುಪುಟ್ಟನ ಶಾಲೆ ಎದುರಿಗೆ ವಿಶಾಲವಾದ ಆಲದ ಮರವಿತ್ತು. ಸುತ್ತಲೂ ಕಟ್ಟೆಯನ್ನು ಕಟ್ಟಿದ್ದರು. ಅಲ್ಲಿ ಒಂದಷ್ಟು ಹಿರಿಯರು ಸಂಜೆ ಸಮಯಕ್ಕೆ ಸೇರುತ್ತಿದ್ದರು. ಹರಟೆ ಮಾತುಕತೆ ನಡೆಸುತ್ತಿದ್ದರು. ಅವರವರ ಅನುಭವಗಳನ್ನು ಹಂಚಿಕೊಂಡು ತಮಾಷೆ ಚಟಾಕಿ ಹಾರಿಸುತ್ತಿದ್ದರು. ದಿನಕಳೆದಂತೆ ಒಬ್ಬೊಬ್ಬರ ಸಂಖ್ಯೆ ಕಡಿಮೆಯಾಗುತ್ತಿತ್ತು.

ಹೀಗೆ ಪ್ರತಿಸಂಜೆ ಅಂಶುಪುಟ್ಟನ ಕರೆದುಕೊಂಡು ಬರುವಾಗ ಲೂನಾ ತರುತ್ತಿದ್ದರು. ಒಮ್ಮೆ ಅಂಶುಪುಟ್ಟನ ಗೆಳೆಯ ರಸ್ತೆಯಲ್ಲಿ ತನ್ನ ಅಜ್ಜನ ಜೊತೆಗೆ ನಡೆದುಕೊಂಡು ಹೋಗುವುದನ್ನು ನೋಡಿದ. ಅಜ್ಜ.ಅಜ್ಜ... ಈ ಲೂನಾ ಬೇಡ. ನಾವೂ  ನಡೆದುಕೊಂಡು ಹೋಗುವ ಎಂದ. ಅಯ್ಯೋ  ಪುಟ್ಟ ನಮ್ಮ‌ ಮನೆ ತುಂಬಾ ದೂರವಿದೆ. ನಡೆದರೆ ಕಾಲು ನೋವು ಬರುತ್ತದೆ ಎಂದರು.  ಅಂಶುಪುಟ್ಟನಿಗೆ ಮುಖ...