...

2 views

ಬನ್ನಿ ದೀಪ ಹಚ್ಚೋಣ ಗೆಳೆಯರೇ
ಬನ್ನಿ ದೀಪ ಹಚ್ಚೋಣ ಗೆಳೆಯರೇ

ಹಬ್ಬಗಳಲ್ಲಿಯೇ ದೊಡ್ಡ ಹಬ್ಬ ಎಂದರೆ ಅದು ದೀಪಾವಳಿ. ಯಾವುದೇ ಜಿಲ್ಲೆ ಮತ್ತು ರಾಜ್ಯಗಳ ಭೇದವಿಲ್ಲದೆ, ಪ್ರಾಂತೀಯತೆಯ ಪ್ರಭಾವವಿಲ್ಲದೆ ಎಲ್ಲರೂ ಆಚರಿಸುವ ಹಬ್ಬ. ಭಾರತದ ಉತ್ತರದಿಂದ ಹಿಡಿದು ದಕ್ಷಿಣದವರೆಗೂ ಸಡಗರವೋ ಸಡಗರ. ಮತ್ತೊಂದು ದೀಪಾವಳಿ ಬಂದಾಯ್ತು. ಆದರೆ ಈ ವರ್ಷದ ದೀಪಾವಳಿ ಹಬ್ಬ ಯುಗಾದಿ ಹಬ್ಬದ ಸಿಹಿ-ಕಹಿಗಳ ಸಮ್ಮಿಲನದಂತೆ ಆಗಿದೆ. ಹೆಚ್ಚಾನೆಚ್ಚು ಕಹಿ ಅಂತಾನೇ ಹೇಳಬಹುದು. ಯಾಕಂದ್ರೆ ಕೈ ಕೊಟ್ಟ ಮಳೆರಾಯ. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದ ಮಳೆ ಇಲ್ಲದೆ ಈ ವರ್ಷ ಜನರ ಆರ್ಥಿಕ ಪರಿಸ್ಥಿತಿಗೆ ಬರ ಹಾಕಿದಂತಾಗಿದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ಕೂಡ ದುಬಾರಿಯಾಗಿದೆ. ಅದು ಏನೇ ಆದರೂ ಕೂಡ ಖರ್ಚುಗಳನ್ನು ಕಡಿಮೆ ಮಾಡಿಕೊಂಡಾದರೂ ಅನಿವಾರ್ಯವಾಗಿ ಎಲ್ಲರೂ ದೀಪಾವಳಿ ಆಚರಿಸಲೇಬೇಕು. ಆಚರಿಸೋಣ. ಯಾಕಂದ್ರೆ ಮುಖ್ಯವಾಗಿ ಅದು ಲಕ್ಷ್ಮೀ ಪೂಜೆಯ ಹಬ್ಬವಾಗಿರುವುದರಿಂದ ಮುಂದಿನ ದಿನಗಳಲ್ಲಾದರೂ ಲಕ್ಷ್ಮೀಯ ಕೃಪಾಕಟಾಕ್ಷ ನಮ್ಮ ಮನೆಯ ಮೇಲೆ ಹಾಗೂ ನಮ್ಮೆಲ್ಲರ ಮೇಲೆ ಇರಲಿ ಎನ್ನುವ ಬಲವಾದ ನಂಬಿಕೆ ಮತ್ತು ಆಸೆ.
ಹಬ್ಬವೆಂದರೆ ಸಾಕು. ಮನೆಯ ಸಿಂಗಾರದಿಂದ ಹಿಡಿದು ರುಚಿಕರ ಭೋಜನದವರೆಗೂ ಎಲ್ಲವೂ ವಿಶೇಷ. ತಳಿರು-ತೋರಣಗಳು, ತರತರ ಹೂಮಾಲೆಗಳು, ಮನೆಗಾಗಿ-ವಾಹನಗಳಿಗಾಗಿ ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳು, ಅಡುಗೆ ಸಾಮಾನುಗಳು, ತರಕಾರಿ, ದಿನಸಿಗಳು, ಹೊಸ ಬಟ್ಟೆಗಳು..... ಹೀಗೆ...