...

3 views

ಹರಿಕೆ
ಕೈ ಯಾಂತ್ರಿಕವಾಗಿ ಬೀಡಿಕಟ್ಟುತಿದ್ದರು ಮನಸುಮಾತ್ರ ಹರಿಬಿಟ್ಟ ನೀರಿನಂತೆ ಎಲ್ಲೊ ಅಲೆಯುತ್ತಿತ್ತು,... ಒಮ್ಮೆ ಗಡಿಯಾರದ ಕಡೆ ಕಣ್ಣು ಇಟ್ಟವಳು ಕೈಯನ್ನು ಇನ್ನು ಚುರುಕುಗೊಳಿಸಿದಳು ಭಾಗ್ಯ.ಸಂಜೆ ಬೀಡಿ ಬ್ರಾಂಚಿಗೆ ಕೊಡದಿದ್ದರೆ ನಾಳೆ ಸಂಘಕ್ಕೆ ಕಟ್ಟಲು ಹಣವಿಲ್ಲ,. ಮ್ಯಾಡಮ್ ಕೈಯಲ್ಲಿ ಉಗಿಸಿಕೊಳ್ಳೋದು ಗ್ಯಾರಂಟಿ.ಕೈಚುರುಕು ಜೋರದಂತೆ ಮನಸು ಕೂಡ ಏನನ್ನೋ ಯೋಚಿಸುತಿತ್ತು..,
ಶ್ಯಾಮಣ್ಣ, ಸರಸ್ವತಿ ದಂಪತಿಗಳದ್ದು ಮಧ್ಯಾಮವರ್ಗದ ಸಂಸಾರ.... ಕೃಷಿ ಕುಟುಂಬ,ಸರಸ್ವತಿ ಹಾಲುಮಾರಿ ಇರುವ ಒಂದೇಕ್ರೆ ಜಾಗದಲ್ಲಿ ಸುಗ್ಗಿ ಬೆಳೆಸಿ ಜೀವನ ಸಾಗಿಸುತಿದ್ದರು... ಮಗ ವಿವೇಕ ಐದನೇ ಕ್ಲಾಸ್ನಲ್ಲಿರುವಾಗ ಅಪ್ಪ ಹೊಡೆದ ಒಂದೇಟಿಗೆ ವಿವೇಕ ಕಳೆದು ಬಾಂಬೆ ಎನ್ನುವ ಮಾಯನಗರಿಗೆ ಓಡಿಹೋಗಿದ್ದ,. ಎಲ್ಲಿ ಹುಡಕಿದರೂ ಅವನ ಸುಳಿವು ಸಿಕ್ಕಿರಲಿಲ್ಲ.. ಅಪ್ಪ ಅಮ್ಮ ಅದೆಷ್ಟೋ ಹರಿಕೆಯನ್ನ ಹೊತ್ತಿದರು... ಕೊನೆಗೆ ಮಗ ಸಿಕ್ಕಿದರೆ ಅವನ ಕೈನಿಂದಲೇ ಕೋಲಾ ಮಾಡಿಸುತ್ತೆವೆಂದು ಹರೆಕೆಯು ಆಯಿತು ಮಗ ಬರಲೇ ಇಲ್ಲ.... ಮಗನ ನೆನಪ್ಪಾಲ್ಲೇ ಶ್ಯಾಮಣ್ಣ ಇಹಲೋಕ ತೆಜಿಸಿದರು.ಪತಿ ಹಿಂದೆ ಸತಿ ಎಂಬಂತೆ ಸರಸ್ವತಿಯು ಅವರೊಂದಿಗೆ ಸ್ವರ್ಗ ಸೇರಿದರು. ಅವರ ಮಗಳು ಭಾಗ್ಯ ಮಾತ್ರ ಅನಾಥನಾದಳು..ಯಾರೋ ಸಂಬಂದಿಕರು ಕುಡುಕನೊಬ್ಬನನ್ನು ಭಾಗ್ಯಳ ಕುತಿಗ್ಗೆಗೆ ಗಂಟುಹಾಕಿದರು .... ಎಲ್ಲಿಯವರೆಗೆ ಭಾಗ್ಯ ನಿರ್ಬಾಗ್ಯಳೆಂದರೆ ಮದುವೆಯಾದ ಗಂಡನು ಮೂರೇವರ್ಷಕೆ ಇಹಲೋಕ ತೇಜಿಸಿದ್ದ.. ಪಾಪಿ ಹೋದಲ್ಲಿ ಮೊಣಕಾಲು ನೀರು ಎಂಬಂತೆ ಅಲ್ಲಿಗೆ ನಮ್ಮ ಭಾಗ್ಯಲ ಜೀವನ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.. ಭಾಗ್ಯ ದ್ರತಿಗೆಡಲಿಲ್ಲ...ಕಷ್ಟ ಕಾಲದಲ್ಲಿ ಕಲಿತ ವಿದ್ಯಾ ಕೈಬಿಡಲಿಲ್ಲ ಅಂದಿನಿಂದ ಭಾಗ್ಯ ಬೀಡಿಕಟ್ಟುವುದನ್ನು ರೂಢಿ ಮಾಡಿಕೊಂಡಳು. ಕಾಗೆಯ ಕಾ ಕಾ ಸದ್ದಿಗೆ ತಲೆ ಎತ್ತಿ ನೋಡಿದ ಭಾಗ್ಯ ಕಾಗೆ ಕೂಳು ಬಾಗುತಿದೆ ನೆಂಟರು ಬರುವ ಸೂಚನೆ ಈ ಅನಾಥಳಿಗೆ ಎಲ್ಲಿಯ ನೆಂಟರು... ಮನದಲ್ಲೇ ನಕ್ಕಳು..ಹೊರಗೆ ಸೂರ್ಯ ದೇವಾ ಎಂದಿಗಿಂತಲೂ ತುಸು ಜಾಸ್ತಿಯೇ ಕೋಪಿಸಿಕೊಂಡಂತೆ ಕೆಂಪೇರಿದ್ದ... ಅನಾತಿ ದೂರದಲ್ಲಿ ಬಿಳಿಕಾರೊಂದು ನಿಂತು ಇವರ ಮನೆಗೆ ಕೈತೋರಿರಸುದನ್ನು ನೋಡಿ ಒಮ್ಮೆಲೇ ಮೈ ಜೂಮ್ಮೆದಿತು ಭಾಗ್ಯಳಿಗೆ ಹಿಂದಿನ ವಾರವಸ್ಟೇ ಬ್ಯಾಂಕಿನ ಲೋನ್ ಕ್ಲಿಯರ್ ಮಾಡಿದ್ದಳು,.. ಮತ್ಯಾರಿದೂ ಮನದಲ್ಲಿ ಪ್ರಶ್ನಿಸುತಿದ್ದವಳಿಗೆ ಬಿಳೀಜುಬ್ಬಾದಾರಿ ವ್ಯಕ್ತಿ ಹತ್ತಿರ ಬಂದು ಭಾಗ್ಯ ನಾನ್ಯಾರು ಗೊತೈತಾ ಎಂದು ಅರೆಬರೇ ಹಿಂದಿಮಿಶ್ರಿತ ಕನ್ನಡದಲ್ಲಿ ಕೇಳಿದನು.,ಅವನ ಕುತ್ತಿಗೆಯಲಿ ನೇಲುತ್ತಿರುವ ಮಣಭಾರದ ಚಿನ್ನದ ಸರ ಅವನ ಸಿರಿವಂತಿಕೆಯನು ಪ್ರದರ್ಶಿಸುತಿತ್ತು...ಎಲ್ಲೊ ಮನದ ಮೂಲೆಯಲ್ಲಿ ಪರಿಚಯದ ಮುಖ ಹಾದು ಹೋಯಿತು... ಇವಳ ಉತ್ತರಕ್ಕು ಕಾಯದೆ ಆ ವ್ಯಕ್ತಿ ನಾನು ವಿವೇಕ್ ನಿನ್ ಅಣ್ಣ ಎಂದು
ತನ್ನೆಲ್ಲ ಕಥೆಯನು ಒದರತೋಡಾಗಿದ.... ಕೂತು ತಿಂದರು ಕರಗದಷ್ಟು ಅಸ್ತಿ ಇದ್ದರು ನೆಮ್ಮದಿ ಇರಲಿಲ್ಲ ವಿವೇಕನಿಗೆ..... ಕಾಡುವ ಕನಸುಗಳು ಮನೆ, ಮನಸುಗಳ ಸುತ್ತ ತಿರುಗುತ್ತಿರುವ ಗಗ್ಗರ ಸದ್ದು...ವಿವೇಕನನ್ನು ಜ್ಯೋತಿಷಿಗಳ ಬಳಿ ಕರೆದೋಯಿದಿತ್ತು,,, ಅಲ್ಲಿ ಅವನ ಮನಸಿನ ಮರಣ ಮ್ರದಂಗಕ್ಕೆ ಮದ್ದು ಸಿಕ್ಕಿತ್ತು.. ಅಪ್ಪ ಹೊತ್ತಿದ್ದ ಹರಿಕೆಯ ಕೋಲದ ದೈವ ಇವನನ್ನು ಮನೆಯ ದಾರಿ ಹಿಡಿವಂತೆ ಮಾಡಿತ್ತು.,ಆದಷ್ಟು ಬೇಗ ಕೋಲಕ್ಕೊಂದು ಸಮಯ ನಿಗದಿಪಡಿಸಿ ತೃಪ್ತಿಯ ನೆಗೆಚೆಲಿದ್ದ ವಿವೇಕ್.. ಭಾಗ್ಯಲಂತು ಬಾಡಿಹೋದ ತನ್ನ ಜೀವನದಲ್ಲಿ ಭರವಸೆಯ ಅಲೆ ಬಂದಂತೆ ನವ ಚೈತನ್ಯದ ಮದುಮಗಳಾಗಿ ರಾರಾಜಿಸಿದಳು.... ಗೋಡೆಯ ಮೇಲಿನ ಶ್ಯಾಮ ರಾಯರ ಫೋಟೋ ಎಂದಿಗಿಂತಲೂ ಜಾಸ್ತಿ ನಗು ಚೆಲ್ಲಿತ್ತು... ದೂರದಲಿ ವರಾಹ ರೂಪಮ್, ದೈವ ಸಂಬುತಮ್..,.. ಹಾಡು ಕಿವಿಗೆ ಇಂಪೆರೆಯುತಿತ್ತು.

@ಶ್ರೀವಿ @
© All Rights Reserved