...

5 views

"ಜೀವನದಿ ತಂದೆ ಕಳೆದುಕೊಂಡ ಹೆಣ್ಣು ಮಗಳ ನೋವಿನ ಕಥೆ (ಕವನ ರೂಪದಿ) ದೇವರಿಗೆ ಪ್ರಶ್ನೆ ಆಕುವ ಮನ ಕಲಕುವ ವ್ಯತೆ ಜೊತೆ...
"ನನಗಾಗಿ ಎಂಬಂತೆ ತಂದೆ ತಾಯಿಯ ಸೃಷ್ಟಿಸಿಬಿಟ್ಟೆ.
ಅವರ ಕರುಳ ಬಳ್ಳಿಯಾಗಿ ನನ್ನ ಭೂಮಿಂದು
ತಂದುಬಿಟ್ಟೆ. ನನಗೆ ಸಹೋದರ
ಸಹೋದರಿಯರನ್ನೂ ಕೊಟ್ಟೆ ,ಒಮ್ಮೆ ನನ್ನ
ಜೀವನದಲ್ಲಿ ಸಂತೋಷವನ್ನಿಟ್ಟೆ .ಮುತ್ತಿನಂತಹ
ತಂದೆ ತಾಯಿಯ ಕೊಟ್ಟೆ ನೀ ಎಂದು ದಿನನಿತ್ಯ
ನಿನಗೆ ನೂರಾರು ನಮಸ್ಕಾರವೆಂದೆ. ನನ್ನ ತಂದೆ
ತಾಯಿಗೆ ಧಾರಾಳ ಮನಸ್ಸನ್ನು ಏಕೆ ಕೊಟ್ಟೆ.
ಅದರಲ್ಲೂ ಬಂಧುಬಳಗದವರಿಗೆ ಸಹಾಯ
ಮಾಡಲು ಆಜ್ಞೆ ಮಾಡಿಯೆ ಬಿಟ್ಟೆ .ಆಜ್ಞೆಯನ್ನು
ಪಾಲಿಸಿದ್ದಕ್ಕೆ ನನ್ನ ತಂದೆಗೆ ಕೊಟ್ಟ
ಪ್ರತಿಫಲವೇನೆಂದುಕೊಂಡೆ ದೇವಾ ಎಲ್ಲರಲ್ಲೂ
ತಿರಸ್ಕಾರದ ಮನೋಭಾವ, ಇಂತಹ ಅಭಿಯಾನ
ಗೌರವದಿಂದ ನೋಡಿಕೊಂಡಿರಲು ಅದರಿಂದಲೇ
ನನ್ನ ತಂದೇಯ ನೋವಿನ ಅಳಲು ನನ್ನ ತಂದೆ
ಕೊನೆಗೊಮ್ಮೆ ಎಲ್ಲರನ್ನೂ ತೊರೆದಿರಲು.

ಅನಾರೋಗ್ಯದಿ ಧವಾಖಾನೆಗೆ ದೇಶ
ವಿದೇಶಗಳನ್ನು ಸುತ್ತಿರಲು.ಜೊತೆಗೆಂದು
ಸ್ನೇಹಿತರನ್ನೂ ನೀ ಕುಳುಸಿರಲು ಅವರ ಹೃದಯದಿ
ನೋವು ತುಂಬಿರಲು ವೈದ್ಯರನ್ನು
ಬೇಡಿಕೊಂಡಿರಲು ನನ್ನಲ್ಲಿ ಹರಿಸಿದೆ ಕಣ್ಣೀರಿನ
ಕಡಲು ಆರೋಗ್ಯವು ಸ್ವಲ್ಪವೂ ಸುಧಾರಿಸದಿರಲು..

ತಂದೆಯ ನೋವನ್ನೂ ನೋಡದೇ ಇದ್ದಾಗ ನಿನ್ನ
ಮೊರೆಯಿಟ್ಟು ಬೇಡಿಕೊಂಡೆ ನಾನಾಗ.
ಹಲವು ದೇವರನ್ನು ಬೇಡಿಕೊಂಡಾಗ ನನ್ನ ಕೂಗು
ಕೇಳಿಸಿತು ಎಂದುಕೊಂಡೆ.ಇಲ್ಲಾ ನೀನೊಂದು
ಕಲ್ಲುಬಂಡೆ, ನನ್ನ ತಂದೆಯ ಅಳಲನ್ನು
ಹೇಳಿಕೊಳ್ಳಲು ಯತ್ನಿಸಿದಾಗ ನನ್ನ ತಂದೆಯ
ಮಾತನ್ನೂ ಕಿತ್ತುಕೊಂಡೆ. ಆದರೂ ನಿನ್ನಲ್ಲಿ
ಬೇಡುವುದಾ ಬಿಡಲಿಲ್ಲ ನಾನು ಕೊನೆಗೂ ನನ್ನ
ಮೊರೆ ಕೇಳಲಿಲ್ಲವೇನು ಅಂತಹ ನೋವಿನಲ್ಲೂ
ನನ್ನ ತಂದೆ ಬೇಡಿಕೊಂಡರೂ ನಿನಗೆ ನನ್ನ ತಂದೆಯ
ಕೂಗು ಸಹ ಕೇಳಿಸದೆ ಹೋದರು ಕೊನೆಗೊಮ್ಮೆ
ಬದುಕಬೇಕು ಉಳಿಸು ಎಂದರು. ನನ್ನ ತಂದೆಯ
ಉಳಿಸು ಎಂದು ಬೇಡಿಕೊಂಡೆ. ಆದರೂ ನನ್ನ
ತಂದೆಯ ಕಿತ್ತುಕೊಂಡೆ ಕೊನೆಗೂ ನನ್ನ
ತಂದೆಯಿಲ್ಲದ ತಬ್ಬಲಿ ಮಾಡಿಯೇ ಬಿಟ್ಟೆ
ನೋವಿನಿಂದ ನರಳಿ ಸಾಯೋ ಹಾಗೆ
ಮಾಡಿದೆಯಲ್ಲಾ ಕೊನೆಗೂ ನಿನ್ನ ಹಠ
ಸಾದಿಸಿದೆಯಲ್ಲಾ. ಅರ್ಧವಯಸ್ಸಿನಲ್ಲಿ ನನ್ನ
ತಾಯಿಯ ಹರಿಶಿಣ ಕುಂಕುಮ
ಕಿತ್ತುಕೊಂಡೆಯಲ್ಲಾ ಇದು ನಿನಗೆ ನ್ಯಾಯವೇನು..?
ಸಂತೋಷವೇನು..? ಅದಕ್ಕಾಗಿ ನನ್ನ ತಂದೆಯ
ಕರೆದಕೊಂಡೆಯೇನು
ನನ್ನ ಪ್ರಶ್ನೆಗೆ ಉತ್ತರ ಹೇಳು ನೀನು,

ಹೇಳದೆ ಮೂಖವಾದರೆ ಎಂದೆನಿಸಲು
ನಿನಗೆ ಇದುವೇ ಸರಿ ಎಂದುಕೊಂಡೆಯಾ ಹೇಗೆ.
ತಂದೆ ತಾಯಿಯು ದೂರ ಮಾಡಿದರು
ಕೊನೆಗೊಮ್ಮೆ ಹೀಗೆ, ಇಂತಹ ಮನುಷ್ಯನನ್ನು
ಕಳೆದುಕೊಳ್ಳಲು ಆಗೊಲ್ಲವೆಂದು ಕಾಯಿಲೆಯ
ಕೊಟ್ಟೆ.ನೀನಿಂದು. ನನ್ನ ತಂದೆ ನ್ಯಾಯದಿ ಬಾಳಲು
ಬಿಡಲಿಲ್ಲ ವಿಂದು ನ್ಯಾಯದಿ ಬಾಳಿದ್ದಕ್ಕೆ
ಆಜ್ಞೆಯಂತೆ ನಡೆದುಕೊಂಡಿದ್ದಕ್ಕೆ ನೀ
ತಂದುಬಿಟ್ಟೆಯಲ್ಲಾ ಸಾವಿನ ಹಂತಕ್ಕೆ ,

ನೀನು ಕೊಟ್ಟ ಶಿಕ್ಷೆಗೆ ನೋವಿಗೆ ಎಂದರು ಸಾಕು ಈ
ಬಾಳು ನನಗಿಂದು ನೋವಿನಿಂದ
ಕೊನೆಯುಸಿರೆಳೆದರು ಇಂದು ಕೊರಗುತ್ತಿರುವೆ
ನಾನು ತಂದೆಯಿಲ್ಲದ ತಬ್ಬಲಿಯೆಂದು ಕರುಣೆಯು
ಬಾರದು ನಿನಗಿನ್ನೆಂದು ನೀನು ನಿಜವಾಗಿಯು
ದೇವರೆಯೇನು..? ಹೇಳಿಂದು,✍
😭shobha🙏