...

18 views

ಬದುಕು ಬದಲಿಸುವ ಮಾಯೆ
ಒಂದು ಮಹಾ ಮೋಸ, ಯಾರೋ ಮಾಡಿದ ವಂಚನೆ, ಇಟ್ಟ ನಂಬಿಕೆ ಕಳಚಿ ಬಿದ್ದಾಗ ಕಾಣುವ ಮುಖವಾಡಗಳು, ಕೈ ಹಿಡಿದು ಜೊತೆ ನಡೆದು ಬರಬೇಕಾದವರು ಮಧ್ಯದಲ್ಲೇ ಎದ್ದು ತಿರುಗಿಯೂ ನೋಡದೆ ಹೋದದ್ದು, ಎಷ್ಟೋ ಕನಸುಗಳ ಹೆಣೆದು ನಿದ್ರೆಯಿಲ್ಲದ ರಾತ್ರಿಗಳಾಗಿ ಕಳೆದು ಹೋದಂತವು ಹೀಗೆ ವಿಭಿನ್ನ ಸನ್ನಿವೇಶಗಳು ನಮ್ಮ ನಿಮ್ಮ ನಡುವಿನ ಸಾಕಷ್ಟು ಜನರ ಬದುಕಲ್ಲಿ ಒಂದಲ್ಲಾ ಒಂದು ಬಾರಿ ಘಟಿಸಿರುತ್ತವೆ. ಸಣ್ಣ ಸಣ್ಣ ಸಂಗತಿಗಳಿಗೂ, 'ಎಲ್ಲ ಮುಗಿದೇ ಹೋಯ್ತು, ಇನ್ನೇನಿದೆ ಇಲ್ಲಿ' ಅನ್ನುವ ಭಾವ ಹೊತ್ತು ನೋವು ತಿನ್ನುತ್ತಿರುತ್ತೇವೆ. " ಈ ನೋವುಗಳು ಯಾಕೆ ನಮ್ಮನ್ನೇ ಹುಡುಕಿ ಬಂದು ಕಾಡುತ್ತವೆ ? " ಎಂದು ಗೊಣಗಿಕೊಂಡಿರುತ್ತೇವೆ. ಬೇಡದ...