...

8 views

ಬೆಳಕು ನೀಡು

ಗೆಳತಿ ನಿನ್ನ ಭಾವ ತುಂಬಿದ ಮನಕೆ
ಏನೂ ಹಚ್ಚಿದರೂ
ಈ ಹುಚ್ಚಮನಸ್ಸು ಮರ್ಕಟವಾಗಿದೆ

ಶುದ್ದತೆಯ ಪ್ರತೀಕ ಸ್ನೇಹವೆಂದರೂ ಬದ್ದತೆ ತಪ್ಪಿದೆ
ಬಾ ಸರಿ ಪಡಿಸು
ಮುಗ್ದ ಮನಸ್ಸಿನ ನಿನ್ನ ಶಕ್ತಿಯುಕ್ತಿಯಲಿ

ಬಿದ್ದು ಹೋಗುವ ಮುನ್ನ
ಎದ್ದೇಳಲು ಸಾಥ್ ನೀಡಿ
ಬಯಕೆಯ ಯೋಚನೆಗೆ ಬ್ರೆಕ್ ಹಾಕಿ

ಲಗಾಮಿಲ್ಲದ ಹಯಕೆ
ವೇಗ ನಿಯಂತ್ರಿಸಿ
ನಿನ್ನ ಪ್ರೀತಿಯ ಶಕ್ತಿಯಲ್ಲಿನ ಗತ್ತಲ್ಲೆ
ದುಷ್ಟಶ್ಚಕ್ತಿಯ ನಾಶಪಡಿಸಿ

ಭಾವನಿಯಾಗಿ ದೇವತೆಯಾಗಿ
ತಲೆ ಎತ್ತುವಂತೆ ಸಾಗು ಬಾ
ಸಮಯ ಸಾಧಕರಿಗೆ ಪಾಠ ಕಲಿಸಿ

ದ್ವೇಶವ ಸುಟ್ಟು ತೊಟ್ಟು ಬಾ
ವಿಶ್ವಾಸ ಜೋತಿಯ ಬೆಳಗಲು
ಕತ್ತಲೆಯ ಜನರಿಗೆ ಬೆಳಕು ನೀಡಲು

ಅಂತರ್ನಾದದ ಶಾಂತಿಗಾಗಿ
ಉಸಿರಿಗೆ ಗಾಳಿಯ ಶಕ್ತಿ ನೀಡಲು
ಬಾ ಭಾವ ಬಂದನಕೆ
© Mallikarjun Bhrungimath