...

36 views

ರಾಜನಿಲ್ಲದ ನಮ್ಮ ಪರಪಂಚ
ಒಂದು ದೊಡ್ಡ ರಾಜ್ಯ
ಅಲ್ಲಿ ನಮ್ಮ ರಾಜನ ಪುಟ್ಟ ಸಾಮ್ರಾಜ್ಯ
ಸುಖ ಸಂಪತ್ತು ಇದ್ದರೂ ಅನುಭವಿಸದಸ್ಟು ನೂರೆಂಟು ತೊಂದರೆಗಳು ಒಂದು ಒಂದಾಗಿ
ಮೆಟ್ಟಿ ನಿಲ್ಲುತ್ತಾ ಬಂದ ಎಲ್ಲವನ್ನೂ ಸಾಲು ಸಾಲಾಗಿ........

ಅಸ್ತಾನದಲ್ಲಿ ಸೈನಿಕರು, ಮಂತ್ರಿ ಮಂಡಲ ಇದ್ದರೂ ಸಹಾಯಕ್ಕೆ ಬರದ ಗುಣದವರು.
ಆದರೂ ರಾಜ ತನ್ನ ಸಾಮ್ರಾಜ್ಯದಲ್ಲಿ ಇಟ್ಟುಕೊಂಡು ಅವರನ್ನೇ ಮೆರಸುತಿದ್ದ ನಿಷ್ಕಲ್ಮಶ ಇರದ ನಮ್ಮ ಮಹಾರಾಜರು.
ತನ್ನ ನೋವನ್ನು ಯಾರ ಬಳಿಯೂ ಹೇಳದಂತೆ ತಾನೇ ಮನಸಿನಲ್ಲಿ ಕದನ ಮಾಡಿದ ನಮ್ಮ ಯೋಗರಾಜರು...

ಎಲ್ಲಾ ಜನರ ಕಷ್ಟವನ್ನು ಕೇಳಿ ದಾನ ಧರ್ಮ ಮಾಡಿದ ಒಡೆಯ ನಮ್ಮ ರಾಜ
ಸಾಮ್ರಾಜ್ಯವೇ ಚಿದ್ರವಾದಗ ಎಲ್ಲವನ್ನೂ ತೊರೆದು ಹೋದ ನಮ್ಮ ರಾಜ
ಯಾವುದನ್ನು ಅಪೇಕ್ಷೆ ಪಡದೇ ಜೀವನವನ್ನು ಸಾಗಿಸಿದ ನಮ್ಮ ದೈರ್ಯವಂತ ರಾಜ.....

ನೂರೆಂಟು ತೊಂದರೆಗಳು ಬಂದರೂ ತಂದೆ ತಾಯಿಯನ್ನು ಮತ್ತು ಬಂದು ಬಳಗವನ್ನು ನೋಡಿಕೊಂಡ ಶೂರ ರಾಜ
ಇನ್ನೇನು ರಾಜ್ಯವನ್ನು ಮತ್ತೆ ಗೆಲ್ಲುವ ಅವಕಾಶ ವಿದ್ದರು
ವಿಧಿಯು ಕೈ ಚೆಲ್ಲಿ ಹೋಯಿತು
ಅವನ ತಂದೆಯ ಸಾವಿನ ಮಾತು.....

ತುಂಬಾ ದಿನಗಳ ಬಳಿಕ ಮದುವೆ ಮಾಡಿಕೊಂಡ ನಮ್ಮ ವೀರ
ಆದರೂ ನೆಮ್ಮದಿ ಇಲ್ಲದ ಬದುಕು ರಾಜನದು
ಬಡವರಿಗೆ ಹಸಿವನ್ನು ನೀಗಿಸಿದ ನಮ್ಮ ರಾಜ
ಪ್ರತಿಯೊಬ್ಬರ ಕಷ್ಟಕ್ಕೆ ನೇರವಾದ ನಮ್ಮ ವಿರಾಜ
ಪುಟ್ಟದೊಂದು ಗೂಡು ಕಟ್ಟಿಕೊಂಡ
ಅ ಗೂಡನ್ನು ತೋರಿಸುವ ಮೊದಲೇ ತನ್ನ ತಾಯಿಯನ್ನು ಕಳೆದುಕೊಂಡ....

ಹಿಗ್ಗದೆ ಕುಗ್ಗದೆ ದೈರ್ಯದಿಂದ ಜೀವನ ಸಾಗಿಸಿದ ನಮ್ಮ ಒಡೆಯ
ಅವನ ಬಾಳಲ್ಲಿ ಒಮ್ಮೆ ಬೆಳಕು ಹೊಮ್ಮಿತು ಪುಟ್ಟ ರಾಜಕುಮಾರಿಯ ಸುದ್ದಿಯ ಬರುವಿಕೆಯ
ಜನಿಸಿದಳು ರಾಜನ ನಗುವಿನ ಒಡತಿ
ದೈರ್ಯ ತುಂಬುವ ಮಂದಹಾಸ ಬೀರುವ ಪುಷ್ಪವತಿ
ರಾಜನ ಪ್ರೀತಿಯ ಪುಟ್ಟ ರಾಯಾಭಾರಿ
ರಾಜನ ಮುದ್ದು ಅಂಬಾರಿ......

ಸುತ್ತಲಿನ ಜನರ ಕಷ್ಟಕ್ಕೆ ಸ್ಪಂದಿಸುವ ವೀರ
ಎಲ್ಲ ಜನರು ಮೆಚ್ಚುವಂತೆ ಇರುವ ನಮ್ಮ ಹಳ್ಳಿಯ ಹಮ್ಮಿರ
ಕೊನೆಗೆ ವಿದಿಯೇ ಅವನ ಒಳ್ಳೆ ಕೆಲಸಕ್ಕೆ ಮಾರುಹೋಗಿ ಕರೆದುಕೊಂಡು ಹೋಗಿತು ಕಲ್ಪನೆ ಮಾಡದಷ್ಟು ಬಹುದೂರ.....

ರಾಜ್ಯದಲ್ಲಿ ಇರುವ ಎಲ್ಲರಿಗೂ ಎಲ್ಲವನ್ನೂ ತೊರೆದು ಹೋದ
ಆದರೆ ಅವನ ಕಷ್ಟಕ್ಕೆ ಪ್ರತಿಫಲ ಕಾಣುವ ಮೊದಲೇ ಪ್ರಪಂಚದಿಂದ ಕಣ್ಮರೆಯಾದ...

ಇನ್ನೂ ಕಾಯುತ್ತಿದ್ದೇವೆ ರಾಜನ ಮತ್ತೆ ಬರುವಿಕೆಗಾಗಿ ಅಪಾರ
ನೀವು ನಮ್ಮ ಮನಸಿನಲ್ಲಿ ಎಂದೆಂದಿಗೂ ಅಜಾರಮರ
ರಾಜನಿಗೆ ಏನೂ ಮಾಡಲಿಲ್ಲವೇ ನಾವು ಎಂದೂ ಹೃದಯದಲ್ಲಿ ನೊಂದಿರುವ ಭಕ್ತರು
ರಾಜನ ಸಾವನ್ನು ಎಂದೂ ಮರೆಯಲು ಆಗದೆ ಇರುವ ದುಕ್ಕಿತಪ್ತರು
ಮನಸಿನಲ್ಲಿ ನೋವಿದ್ದರೂ ತೋಡಿಕೊಳ್ಳದ ಹಿತೇಷಿ ಜನರು
ದೇವರ ಬಳಿ ಪ್ರತಿನಿತ್ಯ ಈ ಸಾವಿಗೆ ಉತ್ತರ ಕೇಳುವ ರಾಜನ ಆರಾಧಕರು...

ರಾಜನಿಲ್ಲದ ಸಾಮ್ರಾಜ್ಯ ಶೂನ್ಯವೇನಿಸಿದೆ
ರಾಜನು ಓಡಾಡಿದ ದಾರಿಯೂ ಖಾಲಿ ಖಾಲಿ ಆಗಿದೆ
ಅಲ್ಲಿಗೆ ಮತ್ತೆ ಹೋಗಲು ಹೃದಯವು ತುಂಬಾಭಾರವಾಗಿದೆ
ಮನಸ್ಸು ನಿರಾಸೆಯಿಂದ ಕೊರಗಿದೆ
ಇದಕ್ಕೆಲ್ಲ ಉತ್ತರ ಬೇಕೆಂದು ದೇವರ ಬಳಿ ಬೇಡಿದೆ.......

ಜೊತೆಗಿರದ ಜೀವ ಎಂದಿಗಿಂತ ಜೀವಂತ ❤️
ಗಗನ ಜಿ ಎ
# ಜೀವಂತ # ದೇವರು # ಮರೆಯದ ಮಾಣಿಕ್ಯ # ನಿಮ್ಮ ನೆನಪು # ನಮ್ಮ ಹೃದಯದಲ್ಲಿ # ಮರೆಯದ ಜೀವ #
© All Rights Reserved