ಮದುವೆ.
"ಋಣಾನುಬಂಧ ರೂಪೇಣ, ಪಶು ಪತ್ನಿ ಸುತಾಲಯ" (ಸುತ = ಮಗ, ಆಲಯ = ಮನೆ)
ಈ ಮಾತು ಅಕ್ಷರಶಃ ಸತ್ಯ.
ಆ ದೇವರ ಅಣತಿ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಕದಲದು ಅನ್ನೊದು ಮಾತ್ರ ನನ್ನ ನಂಬಿಕೆ.
ಎಲ್ಲಿಯ ವಧು, ಎಲ್ಲಿಯ ವರ, ಎತ್ತಣದಿಂದೆತ್ತ ಸಂಬಂಧವಯ್ಯ!!.
ಮನೆಯಲ್ಲಿ ಸಾಕುವ ಒಂದು ಪ್ರಾಣಿ ಆಗ್ಲಿ, ಮದುವೆ ಯಾಗುವ ಹೆಂಡತಿ ಆಗ್ಲಿ, ಮಕ್ಕಳಾಗಲಿ, ಮನೆ ಆಗ್ಲಿ, ಯಾವುದೂ ಸಹ ಋಣವಿಲ್ಲದೆ ನಮಗೆ ಸಿಗೋದಿಲ್ಲ, ಅದೃಷ್ಟವಶಾತ್ ಸಿಕ್ಕರು ಹೆಚ್ಚು ದಿನ ಉಳಿಯೋದಿಲ್ಲ.
ಪ್ರೀತಿಸಿಯೊ, ಇಲ್ಲ ಮನೆಯವರೆ ನೋಡಿ ಒಪ್ಪಿ ಮದುವೆ ಮಾಡುವುದೊ, ಏನೊ ಒಂದು.
ಆದ್ರೆ ಜೀವನ ಪೂರ್ತಿ ಒಂದಾಗಿ ಬಾಳಬೇಕಾದ ಹುಡುಗ, ಹುಡುಗಿ ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡು, ಒಂದಾಗಿ ಬಾಳುವುದೆ ಈ...