...

1 Reads

ಆತ್ಮವಿಲ್ಲದ ದೇಹ ಸುಟ್ಟು ಕರಕಲಾಗುವ ಮುನ್ನ
ಆತ್ಮವಿಲ್ಲದ ದೇಹ ಮಣ್ಣಲ್ಲಿ ಮರೆಯಾಗುವ ಮುನ್ನ
ಒಂದೊಮ್ಮೆ ಆಲೋಚಿಸಿತು ಹೀಗೆ
ಕಾಣದ ಆತ್ಮ ನನ್ನೊಳಗಿತ್ತು, ನನಗಾಗ ಭೂಮಿಯ ಮೇಲೆ ಬೆಲೆ ಇತ್ತು,
ಕಾಣದ ಆತ್ಮ ನನ್ನೊಳಗಿತ್ತು, ನನಗಾಗ ಕಂಡಿದ್ದೆಲ್ಲ ಬೇಕೆನಿಸುತ್ತಿತ್ತು
ಕಾಣದ ಆತ್ಮ ನನ್ನೊಳಗಿತ್ತು, ಸಂಬಂಧಗಳು ನನ್ನೊಂದಿಗಿರಲು ಹಂಬಲಿಸುತ್ತಿತ್ತು
ಕಾಣದ ಆತ್ಮ ನನ್ನೊಳಗಿತ್ತು, ನನಗಾಗ ಎಲ್ಲರೂ ನನ್ನವರೆ ಅನಿಸುತ್ತಿತ್ತು
ಆ ಕಾಣದ ಆತ್ಮ ನನ್ನ ತೊರೆದಾಗಲಷ್ಟೆ ನನಗೆ ಅರಿವಾಯಿತು
ಇಲ್ಲಿ ನನಗೇನು ಬೆಲೆ ಇಲ್ಲ, ಇಲ್ಲಿ ನನಗೇನು ಬೇಕೆನಿಸುವುದಿಲ್ಲ,
ಇಲ್ಲಿ ಯಾವ ಸಂಬಂಧವೂ ನನ್ನೊಂದಿಗೆ ಬರುವುದಿಲ್ಲ,
ಇಲ್ಲಿ ನನ್ನೋರು ಎಂಬುದು ಕೇವಲ ವಾಸ್ತವದೊಳಗಿನ ಪಾತ್ರವಷ್ಟೆ ಎಂದು.
ಆತ್ಮವಿಲ್ಲದ ದೇಹಕ್ಕೆ ಬೆಲೆ ಇಲ್ಲ
ದೇಹದೊಳಗೆ ಆತ್ಮವಿದ್ದಾಗ ನಮ್ಮ ದೇಹಕ್ಕೆ ಆ ಆತ್ಮದ ಅರಿವೇ ಇರುವುದಿಲ್ಲ
ಅದರ ಬೆಲೆಯು ಕೂಡು ತಿಳಿಯುವುದಿಲ್ಲ.