...

7 Reads

ಅವಳು ಹಾಗೇ,
ನಿತ್ಯ ಅರಳಿ
ನಿತ್ಯ ಮುದುಡುವ
ಮಧುರ ನೈದಿಲೆ!

ಸದಾ ವಸಂತ
ಅವಳ ಮಾತಿಗೆ,
ನಿತ್ಯ ಚಿಗುರುವ
ಮರದ ಕೋಗಿಲೆ!

ಕ್ಷೀರ ಸಾಗರದಿ
ಮುಚ್ಚಿಟ್ಟ ರತ್ನ.
ಸತ್ಯ, ಸುಂದರ
ಅವಳ ನಯನ!

ಎಲ್ಲರನು ಸೆಳೆವ
ವಿಶ್ವ ಚೇತನ,
ಶುದ್ಧ-ನಿರ್ಮಲ
ಅವಳ ಗುಣ!