...

10 Reads

#ಸುಮನ್ #WritcoQuote #writco #writcoapp
ಎಲ್ಲಿ ಮರೆಯಾಗಿ ಹೋದೆ
ಬಿರುಗಾಳಿಯಬ್ಬರ ಜೋರಾಗಿದೆ
ಸಿಡಿಲು, ಗುಡುಗು,ಮಿಂಚು ಸಹಿತ
ಮಳೆ ಜಡಿದು ಸುರಿಯುತಿದೆ.
ಎನ್ನನ್ನೋರ್ವಳ ಬಿಟ್ಟು ನೀನೆತ್ತ
ಹೋದೆ ?

ಓ ! ಎನ್ನ ಪ್ರಣಯಿನಿಯ !
ವರ್ಷಗಳು ಕಳೆದರು,ಎದೆಯ
ಮರೆಯೊಳಡಗಿರುವ ಪ್ರೀತಿ
ನೆನಪಾಗದೆ... ಇರುವುದೇ?
ಏಕೆನ್ನ ಕೈಬಿಟ್ಟು ಹೋದೆ,
ನಿನ್ನ ದನಿಯುಸಿರು ಕೇಳದೆ,
ಮೂಕವಾಗಿದೆ ಬದುಕು !

ಬಾಳೆಲ್ಲಾ ಕತ್ತಲು ತುಂಬಿ,ಮನದಾಳದಿ
ನೋವು ಮನೆಮಾಡಿ,ಕಾರ್ಮುಗಿಲು ಚೀರುತಿದೆ
ಹೃದಯದೊಳಗಾವುದೋ ಶಕ್ತಿ ಕುಗ್ಗುತಿದೆ
ಶೂನ್ಯವಾದ ಈ ಜೀವನವ ನೆನೆದು ಕಣ್ಣೀರಿಡುತಿದೆ !

ಎಲ್ಲಿ ಮರೆಯಾಗಿ ಹೋದೆ ?
ಎನ್ನನೋರ್ವಳನ ಬಿಟ್ಟು !