ಪ್ರಾಕೃತಿಯೇ ನಾ ಧನ್ಯನಾದೆ
ಚಿಟಪಟ ಎಳೆಗಳ ಸದ್ದನು ಕೇಳಿ
ಚಿಲಿಪಿಲಿ ಹಕ್ಕಿಗಳ ಕಲರವ ಕೇಳಿ
ಸೊಂಪಾದ ನಾದವು ಹೊಮ್ಮಿದಂತಿದೆ.
ಮನಸಿನ ದುಗುಡವೂ ಕಳೆದು ಹೋಗಿ
ಮಂಜಿನ ಹನಿಯ ತಂಪು ತಾಗಿ
ಎಲ್ಲೆಡೆಯೂ ಸಂಭ್ರಮದ ಉಯ್ಯಾಲೆ ಹಾಡಿದಂತಿದೆ.
ಪ್ರಕೃತಿಯೇ ಧನ್ಯನಾದೆ.....
ಓ ಪ್ರಕೃತಿಯೇ ನಾ ಧನ್ಯನಾದೆ.... .
ಬಾನಿನೆಡೆ ಬಿಳಿ ತಾರೆಗಳ ಕೇಳಲು ಹೋದೆ ಹೊಳಪಿನ ರಹಸ್ಯವ.
ಸುರಿಯೋ ಮಳೆಗೆ ಕೈ ಚಾಚಿದೆ
ಕಂಡೆ ನಾ ಶುದ್ಧ ತಿಳಿಯತನವ.
ಇನ್ಯಾವುದು ಬೇಕಾಗಿದೆ ಕಾಣದ ಸ್ವರ್ಗವ.
ಮನಮಿಡಿದಿದೆ ಸ್ವೀಕರಿಸಲು ಪ್ರಕೃತಿಯ ತ್ಯಾಗವ.
ಹೊರಸೂಸಿದೆ ಇಂಪಾದ ಕೋಗಿಲೆ ಕೊಳಲು.
ಸ್ಪರ್ಶಿಸಿದೆ ಸೊಂಪಾದ ಸೂರ್ಯನ
ಬೆಳಕಿನ ಹೊನಲು.
ಮೂಡಿದೆ ಚಿತ್ತಾರವು ಪ್ರತಿ ಬಾಳಿನ ಹೆಜ್ಜೆಯಲ್ಲೂ.
ಜಗವೆ ನೀ ಹೇಳು ಇನ್ನೆಲ್ಲಿದೆ ಅನುಭವಿಸಲು ಸ್ವರ್ಗದ ಬಯಲು .
ಪಕೃತಿಯೇ ಧನ್ಯನಾದೆ .........
ಓ ಪ್ರಕೃತಿಯೇ ನಾ ಧನ್ಯನಾದೆ . .........
© Altaf mulla
ಚಿಲಿಪಿಲಿ ಹಕ್ಕಿಗಳ ಕಲರವ ಕೇಳಿ
ಸೊಂಪಾದ ನಾದವು ಹೊಮ್ಮಿದಂತಿದೆ.
ಮನಸಿನ ದುಗುಡವೂ ಕಳೆದು ಹೋಗಿ
ಮಂಜಿನ ಹನಿಯ ತಂಪು ತಾಗಿ
ಎಲ್ಲೆಡೆಯೂ ಸಂಭ್ರಮದ ಉಯ್ಯಾಲೆ ಹಾಡಿದಂತಿದೆ.
ಪ್ರಕೃತಿಯೇ ಧನ್ಯನಾದೆ.....
ಓ ಪ್ರಕೃತಿಯೇ ನಾ ಧನ್ಯನಾದೆ.... .
ಬಾನಿನೆಡೆ ಬಿಳಿ ತಾರೆಗಳ ಕೇಳಲು ಹೋದೆ ಹೊಳಪಿನ ರಹಸ್ಯವ.
ಸುರಿಯೋ ಮಳೆಗೆ ಕೈ ಚಾಚಿದೆ
ಕಂಡೆ ನಾ ಶುದ್ಧ ತಿಳಿಯತನವ.
ಇನ್ಯಾವುದು ಬೇಕಾಗಿದೆ ಕಾಣದ ಸ್ವರ್ಗವ.
ಮನಮಿಡಿದಿದೆ ಸ್ವೀಕರಿಸಲು ಪ್ರಕೃತಿಯ ತ್ಯಾಗವ.
ಹೊರಸೂಸಿದೆ ಇಂಪಾದ ಕೋಗಿಲೆ ಕೊಳಲು.
ಸ್ಪರ್ಶಿಸಿದೆ ಸೊಂಪಾದ ಸೂರ್ಯನ
ಬೆಳಕಿನ ಹೊನಲು.
ಮೂಡಿದೆ ಚಿತ್ತಾರವು ಪ್ರತಿ ಬಾಳಿನ ಹೆಜ್ಜೆಯಲ್ಲೂ.
ಜಗವೆ ನೀ ಹೇಳು ಇನ್ನೆಲ್ಲಿದೆ ಅನುಭವಿಸಲು ಸ್ವರ್ಗದ ಬಯಲು .
ಪಕೃತಿಯೇ ಧನ್ಯನಾದೆ .........
ಓ ಪ್ರಕೃತಿಯೇ ನಾ ಧನ್ಯನಾದೆ . .........
© Altaf mulla