...

12 views

ಪ್ರೀತಿಯ ಸಂಗಾತಿ
ತಂಗಾಳಿಯಂತೆ ನೀ ಸುಳಿದೆ ನನ ಬಾಳಲಿ
ಸಂಗಾತಿಯಾಗಿ ನೀ ಬಂದೆ ನನ ಬದುಕಲಿ

ನೀ ರಂಗು ತಂದೆ ನನ ಬಾಳಲಿ ಇಂದು
ನನ ಮನಸಿನ ಚಿತ್ರ ನೀ ಬಿಡಿಸಿದೆ ಎಂದೋ

ಬೆಳದಿಂಗಳಂತೆ ನೀ ತಂದೆ ಖುಷಿ ನನ್ನಲ್ಲಿ
ಹುಣ್ಣಿಮೆಯ ಚಂದ್ರ ನೀನಾದೆ ಬದುಕಲ್ಲಿ

ನೀನಿದ್ದರೇನೆ ಈ ಜೀವನ ಸಾರ್ಥಕ
ನೀನಿಲ್ಲದೆ ಹೋದರೆ ಈ ಬಾಳು ನರಕ

ಬಿಡಬೇಡ ನೀ ನನ್ನ ಕೈ ಎಂದಿಗೂ
ನಿನ್ನರಸಿ ಬಂದಿರುವೆ ಜೊತೆಗಿರು ನೀ ಎಂದಿಗೂ

ಹೋದರೆ ಹೋಗಲಿ ಈ ಪ್ರಾಣ ನಿನ ಮಡಿಲಲ್ಲಿ
ಬಾಳುವೆನು ಜೊತೆಯಾಗಿ ಪ್ರತಿ ಕ್ಷಣವೂ ನಿನಗಾಗಿ
#kannadaquotes #manuthoughts
© ✍🏻ಮನು (Manu )