...

9 views

ಮುಂಗುರುಳ ನಾರಿ
ಅಂದದ ಒಡತಿ
ಚೆಂದದ ಮೂಗುತಿ
ಧರಿಸಿರುವಳು ನನ್ನೊಲವ ಆರತಿ!

ನಯನಗಳ ಸೋಕುತ
ಕದಪನು ಬಯಸುತ
ತಂಗಾಳಿಗೆ ಹಾರಿದೆ ಹಲವು ಸರತಿ!

ಹೊಂಚು ಹಾಕುತ
ಹಣೆಯ ಸ್ಪರ್ಶಿಸುತ
ತಟ್ಟನೆ ಹರಡುವಳು ಕೇಶರಾಶಿ!

ತಂಗಾಳಿಗೆ ಹಾರುತ
ರೆಪ್ಪೆಗಳ ಬಡಿಯುತ
ಮೊಗವು ಒಡ್ಡಿತು ಪ್ರೀತಿಗಾಗಿ!

ಕರ್ಣದ ಜೊತೆ
ಜುಮುಕಿಯ ಆಪ್ತತೆ
ಅಕ್ಕರೆ ತೋರಿದ ಒಲವ ಸ್ನೇಹಿ!

ಮೊಗವ ಮುಚ್ಚುತ
ಅಧರಗಳ ಚುಂಬಿಸುತ
ನಾಚಿಕೆ ಹೆಚ್ಚಿಸಿತು ನಿನ್ನ ಆಣತಿ!

ತಂಗಾಳಿಯ ಚೆಲ್ಲಾಟ
ಬೆರಳುಗಳ ಸರಸಾಟ
ನೋಡಿತು ಗಲ್ಲವ ಹಿಡಿಯುತ!

ಮುಂಗುರುಳ ಆಟಕೆ
ಇಣುಕುವ ಕಳ್ಳಾಟಕೆ
ಹಾಡಿ ನಲಿದಿದೆ ನಿಲ್ಲದ ಓಟಕೆ!

ಮುದ್ದು ಮೊಗವ ನಗಿಸಿ
ಸಲುಗೆಯಿಂದ ನರ್ತಿಸಿ
ಮುಂಗುರುಳು ಹಾರುವುದು ಛೇಡಿಸಿ!

ಮೊಗವನ್ನೇ ಮೋಹಿಸಿ
ಮುಂಗುರುಳ ಸರಿಸಿ
ಜೊತೆಯಾಗಿ ಬರುವುದು ಕಾಡಿಸಿ!
✍️ಶೃತಿ ಶೈವ

#WritcoQuote#writcoapp#Writer#Writco#shruthishaiva#Writcopoem
#ಮುಂಗುರುಳು#ಹೆಣ್ಣು#ಚೆಲುವೆ