...

15 views

ತುಂತುರು ಸ್ನಾನ
ಸ್ನಾನ ಮಾಡಿ
ಇನ್ನೂ ಹಸಿ ಆರದಿದ್ದ
ನಿನ್ನ ಒದ್ದೆಕೂದಲ ಮೇಲೆ
ತುಂತುರು ಸ್ನಾನ...
ಮಳೆಹನಿಗಳಿಗೆ ಮೈನೆರೆದ ಭಾವ..!
ಉದುರು ಉದುರಾಗಿ
ನಿನ್ನ ಮೈ ಮೇಲೆರಗಿದವುಗಳಿಗೆ
ಆರುವ ಮುನ್ನ ಗಳಿಗೆಯಾದರೂ
ಮೈ ಬಿಸಿ ಅನುಭವಿಸಿದ ಸಾರ್ಥಕ್ಯ,
ನೀಲಿ ಬಾನಲ್ಲೆಲ್ಲೂ ಕಂಡು ಕೇಳರಿಯದಿದ್ದ
ಅವ್ಯಕ್ತ ಅನುಭವ..!


© ಹೃದಯ ಸ್ಪರ್ಶಿ