...

15 views

ಸಿರಿವಂತೆ
🌹 ಸಿರಿವಂತೆ🌹

ಅಂದದ ಮೊಗದಲ್ಲಿ.
ಚೆಂದದ ಕಣ್ಣುಗಳು,

ಕಾಮನ ಬಿಲ್ಲಿನ ಹಾಗೆ...
ಬಾಗಿರೋ ಉಬ್ಬುಗಳು,

ಸಂಪಿಗೆಯ ನಾಸಿಕವಂತೆ...*
*ವಿಶಾಲದ ಹಣೆಯವಳು,*

*ತುಂಬಿದ ಕೆನ್ನೆಗಳಲ್ಲೂ...*
*ಮುದ್ದಾದ ಗಲ್ಲವಿದೆ,*

*ಸುಂದರ ತುಟಿಗಳು ಎರಡು...*
*ಜೇನಿನ ಸಾರವಿದೆ,*

*ರೇಷ್ಮೆಯ ಕೂದಲು ಇಲ್ಲಿ...*
*ಮುಟ್ಟಲು ಜಾರುತಿದೆ,*

*ತೊಟ್ಟಿರೋ ಹೂವಿನ ಧಿರಿಸು...*
*ಸಿರಿ ಚೆಲುವೆಗೆ ಒಪ್ಪುತ್ತಿದೆ,*

*ಬಣ್ಣವೇ ಬಂಗಾರವಾಗಿರೆ...*
*ಆಭರಣವು ಇಲ್ಲೇಕೆ,*

*ಮುತ್ತಿನಂತ ಗುಣಗಳೇ ಇರುವ...*
*ಮುತ್ತು, ರತ್ನದ ಗೊಡವೇಕೆ,*

*ಮಗುವಿನಂತೆ ಮನಸಿರೋ ಸಿರಿಗೆ...*
*ಹಿರಿತನದ ಹಂಗೇಕೆ,*

*ಸಿರಿಯಂದಕೆ ಸಾಟಿಯೇ ಇಲ್ಲ...*
*ಮತ್ತೊರ್ವಳ ಕನಸೇಕೆ,*

*ಏನೆಂದು ಹಾಡಿ ಹೊಗಳಲಿ...*
*ಇವಳಂದಾ ಚೆಂದವನು,*

*ಸಿರಿವಂತೆಯೇ ಆಗಿಹಳಿಲ್ಲಿ...*
*ಸೌಂದರ್ಯದ "ಸಿರಿ" ರಾಶಿಯಲಿ,*


© All Rights Reserved