...

6 views

ಜಪ ತಪ
ಮೂಟೆಯಷ್ಟು ಭಾರ ನಂಜು ಹೊದ್ದಿರುವಾಗ
ಕೋಟೆ ಕಟ್ಟಿ ಶಾಂತಿ ಪಠಣವೇ
ಸಾಟಿಯಿಲ್ಲದ ಬದುಕು ನಿಂದಲ್ಲವೇ
ಉಟ್ಟ ಬಟ್ಟೆಯೂ ಇಲ್ಲದೆ ಸಾಗುವಾಗ ನೋಡಿ ನಗುವುದು ಈ ಜಗವೆ..

ಜಪದ ಮೊರೆ ಹೋದರೇನಂತೆ
ಪಾಪದ ಕೊಡವೊಂದು ತುಂಬಿ ಕೂಪವಾಗಿದೆ
ತಪದ ಹೆಸರಿನೊಳು ಮಿಂದೆದ್ದರೇನಂತೆ
ಒಪ್ಪುವ ಕರ್ಮವು ಒಂದಿಲ್ಲದಾಗಿದೆ..

ಒಳ ಹೊರಗಿನಾಟದಲಿ
ಆಳಗಲ ಕಾಣದೇ ಬಿದ್ದರು
ಜಪ ತಪದ ಮುಖವಾಡದಲಿ
ಗಪ್ಪು ಚುಪ್ಪಾಗಿ ಮೆಯ್ದರು..

ಬಗೆದಷ್ಟು ಆಳಿದ್ದರೂ
ಇವರು ಮೌನವೃತದ ಗಾವಿಲರು
ಮೃಗದೆಂತೆರಗಿ ಕಪಟತನ
ಜಗಜಾಹಿರು ಮಾಡಿಹರು

ಹೂವೊಂದು ಬರೀ ಬಾಡಲಿಲ್ಲ
ಕನಸೊಂದು ಬರೀ ಕಮರಲಿಲ್ಲ
ಬಾಡುವ ಮೊದಲೇ ಮುದಡಿಸಿದರಲ್ಲ
ನನಸಾಗುವ ಮೊದಲೇ ವಿಷ ಉಣಿಸಿದರಲ್ಲ..

ಸತ್ಯ ನಿಷ್ಠೆಯ ,ಪರ್ಯಾಕೊಬ್ಬರು
ಇನ್ನೂ ಅಲ್ಲಲ್ಲಿ ಸಿಗುವರು..
ನಡೆದಾಡುವ ದೇವರಾಗಿ
ಭಕ್ತನ ನೋವ ಬಲ್ಲವರಾಗಿ.

*ರಮೇಶ್ ಹಡಪದ*