...

12 views

ತವರು ಮನೆ
ಮಗಳಿಗೊಂದು ತವರು ಬೇಕು

ಅಮ್ಮನ ಮನೆಯೊಂದಿರಬೇಕು
ಎಲ್ಲಿದ್ದರೂ ಹೇಗಿದ್ದರೂ
ಅಪರೂಪಕ್ಕೊಮ್ಮೆ ಬಂದು ವಿಶ್ರಮಿಸಲು
ತನ್ನೆಲ್ಲಾ ಭಾರಗಳ ಇಳಿಸಿಕೊಳ್ಳಲು
ಮಗಳಿಗೆ ತವರು ಮನೆಯೊಂದು ಬೇಕು ...

ಗಂಡ ಮನೆ ಮಕ್ಕಳು
ಅತ್ತೆ ಮಾವ ನಾದಿನಿ ಮೈದುನರು
ತುಂಬಿದ ಮನೆಯಿರಲಿ
ಗಂಡ ಹೆಂಡತಿಯೆಂಬ ಪುಟ್ಟ ಸಂಸಾರವಿರಲಿ
ಬಳಲಿದ ಮಗಳಿಗೆ
ತವರು ಮನೆಯೊಂದು ಬೇಕು ...

ಸಿರಿತನವೋ ಬಡತನವೋ...