...

9 views

ಗೆಳೆತನ - 1
ಗೆಳೆಯ ಗೆಳೆಯನೇ ನನ್ನ ಗೆಳೆಯನೇ
ನಿನ್ನ ಜೊತೆಯಲೇ
ಇರುವ ಎಲ್ಲಾ ಸಮಯವೂ
ಕಳೆಯೋ ಪ್ರತಿಕ್ಷಣಗಳೂ
ಮತ್ತೇ ಮರುಕಳಿಸದು..........................................

ಹಲವಾರು ಗೆಳೆಯರು ನನಗಿದ್ದರೂ
ನಾ, ಬೇಕೆನಿಸಿ ಬರುವವರಿಗಿಂತ
ನನ್ನಿಂದ, ಬೇಕೆನಿಸಿ ಬರುವ ಮಂದಿ
ಅವರ ಮುಂದೆ ನೀನು ಬಂದೆ
ಏನನೂ ಬಯಸದಿದ್ದರೂ
ನೀಡಿದೆ ಸ್ನೇಹದ ಹಸ್ತ...........................................

ಒಂದೇ ಒಡಲು ಒಂದೇ ಮಡಿಲು
ನಾವು ಹಂಚಿಕೊಳ್ಳದಿದ್ದರೂ
ಹೆಗಲಿಗೆ ಹೆಗಲು ನೀಡಿದೆ
ನನ್ನ ಚಿಂತೆ ನಿನ್ನದೆಂದು
ನಿಂತೆ ನನ್ನ ಬೆನ್ನ ಹಿಂದೆ.........................................

ಬಾಲ್ಯದ ಗೆಳೆಯ ನೀನಲ್ಲದಿದ್ದರೂ
ನನ್ನೆಲ್ಲಾ ಬಲವು ನೀನೇ ಆಗಿಹೆ
ಸುಡುವ ಬಿಸಿಲಲಿ ನೆರಳಾಗಿ ನಿಂತಿಹೇ
ಸುರಿವ ಮಳೆಯಲಿ ನೆಲೆಯಾಗಿ ಬಂದಿಹೇ..............

ಸಿರಿವಂತನು ನೀನಲ್ಲದಿದ್ದರೂ
ಮನಸಾರೆ ನೀ ತಡವ ಮಾಡದೆ
ನನ್ನೆಲ್ಲಾ ಕಷ್ಟದಿ ಕ್ಷಣದೇ ಧಾವಿಸಿ
ಆಸರೆಯಾಗೋ ಗುಣವಂತನು.............................
_______________________________________

ಗೆಳೆಯ ಗೆಳೆಯನೇ ಬಾರೋ ಗೆಳೆಯನೇ
ನಿನ್ನ ಜೊತೆಯಲೇ
ಬರುವ ಎಲ್ಲಾ ಸಮಯವೂ
ಇಡುವ ಪ್ರತಿಹೆಜ್ಜೆಯೂ
ಮತ್ತೇ ಮರುಕಳಿಸದು..........................................

ದೇಹವೆರಡು ಜೀವವೊಂದು
ಸ್ನೇಹದೇ ಸಂದೇಹವಿರದೇ
ನನ್ನ ತಪ್ಪನು ತಿದ್ದೋ ಮಿತ್ರನು
ದಾರಿ ತಪ್ಪಲು ಬಿಡದ ಪಾತ್ರನು..............................

ನೋವಿನಲ್ಲಿ ನಾ ಬಳಲುವಾಗ
ಕಣ್ಣ ನೀರು ಜಾರಿ ಬರಲು
ಒರೆಸೋ ಕೈಗಳು ನಿನ್ನದಿರಲು
ಯಾವ ನೋವು ಬರುವುದೀಗ
ನನ್ನ ಸನಿಹ ನೀ_ನಿರಲು.......................................

ನಿನಗೆ ನಾನು ನನಗೆ ನೀನು
ನಿನ್ನ ಬೆಂಬಲ ನನ್ನ ಹಂಬಲ
ಸದಾ ಹಿತವ ಬಯಸುವ ಸ್ನೇಹಿತ
ಅತ್ಯಂತ ಆತ್ಮೀಯ ಆಪ್ತನು ಈತ..........................

ಎಲ್ಲರೂಳಗೊಂದಾಗಿ ಇರುತಾ
ಖುಷಿ-ಖುಷಿಯಾಗಿ ಮತ್ತೆ ಮೆರೆಯುತಾ
ನೆನ್ನೆಯ ಸಕಲ ಸಂಕಷ್ಟ ಮರೆಯುತಾ
ನಾಳೆಯ ಸೇರೋ ಗುರಿಯ ನೆನೆಯುತಾ
ಇಂದು ಜೊತೆ-ಜೊತೆಯಾಗಿ ನಡೆಯುತಾ
ಹೀಗೇ ಸಾಗಲಿ ನಮ್ಮ ಗೆಳೆತನ ಕೊನೆಯವರೆಗೂ....
© chethan_kumar