...

8 views

ಯಾವ ತುದಿಯಲಿ
ಯಾವ ತುದಿಯಲಿ ಇದ್ದರೂ ನೀನು
ಈ ಭೂಮಿಯ ಮೇಲೆ,
ಒಮ್ಮೆ ಭೇಟಿಯಾಗಲೇ ಬೇಕು
ದುಂಡಗಿನ ಭೂಮಿಯ ಮೇಲೆ

ನಮ್ಮೂರಿನ ಜಾತ್ರೆಯಲ್ಲಿ
ನಿನ್ನ ಗೆಳತಿಯರ ದಂಡು ನೋಡಿ
ನೀನೇ ಬಂದೆಯೆಂದು ತಿಳಿದು
ಕಾಲಗೆಜ್ಜೆಯ ತೆಗೆದಿಟ್ಟಿದ್ದೆ..

ಗಾಜಿನ ಬಳೆಗಳು,
ಕಲರ್ ಕಲರ್ ಕೂಲಿಂಗ್ ಗ್ಲಾಸು
ಯಾವುದು ಬೇಕು ಹೇಳು
ನಿನಗೆ ಕೊಡಿಸುವೆ..

ಮನದೊಳಗೆ ಬಲಗಾಲಿಟ್ಟು
ಬಂದುಬಿಡು ಗೆಳತಿ
ಅರಮನೆಯ ಕಟ್ಟಿ ಕಾಯುತಿರುವೆ
ಚಾಮರ ಬೀಸುತಲಿ
ನಿನ್ನಿಂದವ ಕಣ್ತುಂಬಿಕೊಳ್ಳುವೆ...

ಸಿಂಧು ಭಾರ್ಗವ ಬೆಂಗಳೂರು
ಕನ್ನಡ
© Writer Sindhu Bhargava