...

7 views

ನನ್ನ ಸ್ಮರಿಸು...
ನಿನ್ನ ಏಕಾಂತವ
ಮರೆಸಲು ನೀ ನನ್ನನ್ನೊಮ್ಮೆ ಸ್ಮರಿಸು

ನೀ ಕಣ್ಮುಚ್ಚಿ
ಬಿಡುವುದರೊಳಗೆ

ನಿನ್ನ ಕಣ್ಣ್ರೆಪ್ಪೆಗೆ ಮುತ್ತಿಟ್ಟು
ನಿನ್ನನ್ನೇ ಕಣ್ತುಂಬಿಕೊಳ್ಳುವೆ

ಅದ ನೋಡಿ ;
ನೀ ನಕ್ಕರೆ ಅದೇ ಸ್ವರ್ಗ
ಮುನಿಸಿಕೊಂಡರೆ ಅದೇ ನರಕ

ನನ್ನನ್ನು ನೀ
ಉಳಿಸುವುದು, ಅಳಿಸುವುದು
ಪ್ರೇಮಿಸುವುದು, ದ್ವೇಷಿಸುವುದು ನಿನ್ನ ಕೈಯಲ್ಲಿದೆ

ನಿನ್ನ ಮನದ
ಭಾವನೆಗೆ ಸಂಬಂಧಪಟ್ಟಿದ್ದು

ನಿನ್ನ ಮನದ ಗೊಂದಲಗಳಿಗೆ
ನನ್ನನ್ನೊಮ್ಮೆ ಸ್ಮರಿಸು ಇಲ್ಲ ದಹಿಸು...

~ ನಾನ್ಯಾರು ✍️