...

4 views

#ವಸುಧೆಯಂತರಾಳದ ರತ್ನಾಕರ ಮೈಥಿಲಿ#
#ವಸುಧೆಯಂತರಾಳದ ರತ್ನಾಕರ ಮೈಥಿಲಿ#

ಹೇ ವಸುಧೇ! ನಿನ್ನ ಒಡಲ ಕೂಸೇ ಮೈಥಿಲಿ?
ಜಾನಕಿಯೇ ನೀನೇಕೆ ಮೌನಿಯಾದೆ?
ರತ್ನಾಕರನ ರಕ್ಷಣೆಯ ಹೊಣೆಯೇ ?

ಶೀತಲ ಶಶಿಯ ಸೋಜಿಗಕ್ಕೆ ರತ್ನಾಕರನೇ ಉದ್ರಿಕ್ತನಾಗಿ ಉಕ್ಕೇರಿ ಬರುತಿರಲು;
ನೀ ತೇಜಸಾಂರಾಶಿಯ ನಡುವೆಯೂ ಮಂಕೇಕಾದೆ!?

ಕುಟಿಲತೆಯ ತಂತ್ರದಲಿ, ಸ್ವರ್ಣನಗರಿಯಲಿ ತಪ್ತಳಾಗುವಾಗ ತಡೆಯದಾದನಲ್ಲಾ?
ಮತ್ತೆ ಅವನಾಣತಿಯಂತೆ ತಟಸ್ಥಳೇಕಾದೆ;
ಯಾವ ಹಮ್ಮಿತ್ತು ಅವನಂಕೆಯಲ್ಲಿ!?
ಧಾರಿಣಿಯೇ ನೀನಾದರೂ ಅರುಹಬಾರದಿತ್ತೇ ಸುತನಿಗೆ !?

ಗರ್ಹಣೆಯ ತೇಜಸ್ಸು ನಷ್ಟವಾಗಿ ಹಿಡಿತಕ್ಕೊಳಪಟ್ಟಿದ್ದೇಕೆ?
ಆನಂದದಾಯಕನ ದೂರಾಗಿಸಿ;
ನಿನ್ನ ರಕ್ಷಣೆಯ ದಿಬ್ಬವನ್ನು ಛೇದಿಸಿದವನ ಆಶ್ರಯವದೇಕೆ ?
ಮತ್ತೆ ಅಂತರಾಳವ ಕೆದಕುವನೆಂಬ ಭಯವೇ !?🤝
(ಗರ್ಹಣೆ -ಖಂಡಿಸುವುದು)

✍️ರಶ್ಮಿ ಭಟ್