...

8 views

ಆಹಾ ಓಹೋ, ಆಹಾ ಓಹೋ..
ಕೆಲಸದ ಒತ್ತಡದಲ್ಲಿ ಮುಳುಗಿರುವ ಜನರು ಒಮ್ಮೆಲೇ ತಮ್ಮ ಕನಸಿನ ಬಾಲ್ಯಕ್ಕೆ ಮರಳಿದರೆ ಹೇಗಿರುತ್ತೆ ಅನ್ನೋದೇ ಈ ಕವಿತೆ.


ಆಹಾ ಓಹೋ, ಆಹಾ ಓಹೋ..

ಗಗನದಲಿ ವಿಹರಿಸುತ್ತಿರುವೆ ನಾನೀಗ,
ಏಣಿಯ ಹತ್ತಿ ನೀ ಬಾಬೇಗ
ಚಿಂತೆಯನ್ನು ತೊರೆದು ಬಾಳೋಣ,
ಸಂತಸದಿಂದ ನಲಿಯೋಣ
ಆಹಾ ಓಹೋ, ಆಹಾ ಓಹೋ..

ಬೆಳ್ಳನೆಯ ಬಿಳಿ ಮೋಡಗಳಿಗೆ ಬಣ್ಣವ ಹಚ್ಚೋಣ,
ಚಂದದ ಚಿತ್ತಾರವ ಬಿಡಿಸೋಣ
ಸುಂದರ ಗೊಂಬೆಗಳ ಮಾಡೋಣ,
ಅದರ ಜೋತೆಗೂಡಿ ಆಟವ ಆಡೋಣ
ಆಹಾ ಓಹೋ, ಆಹಾ ಓಹೋ..

ತಾರೆಗಳನ್ನು ಸೇರಿಸೋಣ,
ಅದರಿಂದ ರಂಗವಲ್ಲಿ ಬಿಡಿಸೋಣ
ಜಗಮಗ ಜಗಮಗ ಹೊಳೆಯೋಣ,
ಸಣ್ಣ ಪುಟ್ಟ ಕಥೆಯ ಹೇಳೋಣ
ಆಹಾ ಓಹೋ, ಆಹಾ ಓಹೋ..

ಬಿನ್ನಾಣದ ಉಡುಗೆಯ ಮಾಡೋಣ,
ಭಿನ್ನ-ವಿಭಿನ್ನ ತೊಡುಗೆಯ ಧರಿಸೋಣ
ಮಕ್ಕಳಂತೆ ಆಡಿ ಪಾಡೋಣ,
ಉಲ್ಲಾಸದಿಂದ ದಿನ ಕಳಿಯೋಣ
ಆಹಾ ಓಹೋ, ಆಹಾ ಓಹೋ..

ಚಿಲಿಪಿಲಿ ರಾಗವ ಹಾಡೋಣ,
ಥಕತೈ ತಾಳಕೆ ಕುಣಿಯೋಣ
ಹಹ ಹಹ ಹಾಸ್ಯವ ಮಾಡೋಣ,
ಕಿಲಕಿಲ ನಗೆಯ ಬೀರೋಣ
ಆಹಾ ಓಹೋ, ಆಹಾ ಓಹೋ..

ಚಂದ್ರನ ಮೇಲೆ ಕೂರೋಣ,
ಜೋಗುಳದ ಹಾಡು ಹಾಡೋಣ
ಚಂದದ ನಿದ್ದೆಗೆ ಜಾರೋಣ,
ಹೊಸದಿನದ ಆರಂಭ ಮಾಡೋಣ
ಆಹಾ ಓಹೋ, ಆಹಾ ಓಹೋ..



© All Rights Reserved