...

11 views

ಮಿಡಲ್ ಕ್ಲಾಸ್ ಮನಸ್ಸುಗಳು
ಹರಿದ ಚಡ್ಡಿ, ಮುರಿದ ಸ್ಲೇಟು,
ಕಲ್ಲು ಬಳಪದಿ ಕಪ್ಪು ಬೋರ್ಡು
ಸುತ್ತ ನೂರು ಮಂದಿಯೆದುರು
ಅತ್ತು ನಡೆದ ದಿನಗಳೆಷ್ಟೋ..

ಸುಟ್ಟು ಸುಡವ ಬಿಸಿಲಿನೆದುರು
ಎಡವಿ ಬಿದ್ದ ಗಾಯದೊಡನೆ
ಊರ ಸುತ್ತ ಕತ್ತಲಿರಲು..
ಗುಮ್ಮನಿಗೆದರಿದ ನೆನಪುಗಳೆಷ್ಟೋ...,

ಗೆಳೆಯರೊಡನೆ ಕದ್ದು ತಿಂದು
ಜಗಳವಾಡಲೆಂದು ಮುಂದು
ಅಮ್ಮನೊಡೆದ ಕೊಳಪೆ ಗುರುತು
ನೋವ ನೆನೆಸುವುದೆಷ್ಟೋ...,

ಆರು ತಿಂಗಳಿಗೂರು ಜಾತ್ರೆ
ನೂರು ನೆಂಟರ ನಡುವೆ ನಿಂತ್ರೆ
ಊರ ದೇವತೆ ಎಂತ ಚೆಂದ..
ಕಳೆದು ಹೋದ ನೆನಪುಗಳೆಷ್ಟೋ..:

ಫ್ರೌಢಶಾಲೆಯ ಮೊದಲ ಹೆಜ್ಜೆ
ಕನಸು ಕಂಡ ಹಲವು ಮಜುಲು
ಕನಸು ಕನಸೇ ಹಾಗಿ ಹೋಯ್ತು
ಎಂತ ಚೆಂದ ಆ ದಿನಗಳು...,

ನಡೆವ ಪಾದವು ಸವೆಯಲಿಲ್ಲ
ನುಡಿವ ಮಾತಲಿ ಖುಷಿಯೆ ಎಲ್ಲ
ಅಂದಿದ್ದ ಬದುಕಿಗೆ ಸಾಟಿಯಿಲ್ಲದ
ಪ್ರಥಮ ಪ್ರೇಮದ ಪ್ರಹಸನ..;

ಏನೂ ಇಲ್ಲದ ಬದುಕಿನಲ್ಲಿ
ಏನೋ ಹುಡುಕಿದೆ ಇಂದು ಇಲ್ಲಿ
ಎಲ್ಲವಿದ್ದರೂ ಏನೂ ಇಲ್ಲದ
ಬದುಕೇ ನವ ನೂತನ....;

"ಇದು ಮಿಡಲ್ ಕ್ಲಾಸ್ ಜೀವನ"







© ಆತ್ಮೀಯ