...

3 views

ಗಝಲ್
ಡಿಸೆಂಬರ್  ಮಾಹೆಯ  ಪಂಚಮವಿಹುದು ಮಣ್ಣಿನ ದಿನ
ಸುಫಲವಾಗಿ ಇಡಲು  ಅಗತ್ಯವಾಗಿಹುದು  ಮಣ್ಣಿನ ದಿನ

ಜೀವ ವಿಕಸಿಸಿ ಬೆಳೆಯುವುದು ಜೀವಕಣ  ಮಣ್ಣಲ್ಲೆ
ಜೀವನಾಧಾರವಾಗಲು ಬೇಡುತಿಹುದು  ಮಣ್ಣಿನ  ದಿನ.

ಭೋಗಾಸಕ್ತ ನರನ ಹಾವಳಿ  ದಿನೇದಿನೇ  ಹೆಚ್ಚಾಗಿದೆ
ಪರಿಸರವನ್ನು ರಕ್ಷಿಸಲು ಬೇಕಾಗಿಹುದು ಮಣ್ಣಿನ  ದಿನ

ಅನೈಸರ್ಗಿಕ ಸಂಪತ್ತುಗಳು ಕೆಡಿಸುತ್ತಿವೆ ಮಣ್ಣನ್ನು
ಸಂಪದ್ಭರಿತಕ್ಕೆ  ಅವಶ್ಯವಾಗಿಹುದು ಮಣ್ಣಿನ  ದಿನ

ಹಿರಿಯರ ನಡಾವಳಿಯಾಗಿತ್ತು ಭೂಮಿಹುಣ್ಣಿಮೆ ದಿನ
ತಾಪರಶ್ಮಿಯ ತಾಳಿ ಪ್ರಾಣವಾಗುತ್ತಿಹುದು ಮಣ್ಣಿನ  ದಿನ
                       ✍️ರಶ್ಮಿ ಭಟ್.