...

4 views

"ಹೃದಯವು ಒಡೆಯಿತು ಮೋಸದ ಪ್ರೀತಿಗೆ...
"ಹೃದಯವು ಒಡೆದಿದೆ
ನಿನ್ನಯ ಮಾತಿಗೆ

ಹೇಳಿಕೆ ಮಾತನು
ಕೇಳುವ ನಿನಗೆ

ಪ್ರೀತಿಯ ಬೆಲೆಯು
ತಿಳಿಯದು ಮನಸಿಗೆ

ಪ್ರೇಮಿಯು ನೀನು
ಏನನು ಕೇಳೆನು

ಏತಕೋ ಬೇಡೆನು
ನಿನ್ನಲ್ಲಿ ಏನನು

ಕಾರಣವು ನಿನಗೆ
ತಿಳಿದಿರಲು

ನಾಟಕದ ಪರಿಹಾಸ
ನಟಿಸಲು

ಚತುರತೆಯು ನಿನ್ನಲಿ
ತಿಳಿಯದಾದೆನು

ಸೋತೆನು ಅಂದು
ಮೋಹದ ಬಲೆಗೆ

ನಾನಾರು ಇಂದು
ನಿನಗೆ

ಸಾಕಿದು ನಲ್ಲ
ಅಸಹನೆ ಎನಗೆ

ಹೃದಯವು ಒಡೆದಿದೆ
ನೋವಿನ ಛಾಯೆಗೆ

ಅಳು ಬಂದರು
ಕಣ್ಣೀರು ಬಾರದು

ಸೋತಿಹೆ ನಾನು
ಈ ಬದುಕಿಂದು

ಭಾವನೆಯಲಿ ಬೆಂದು
ಮನದಿ ನೋವೇ ಇನ್ನೆಂದೂ..,✍
😔shobha 🥀