...

18 views

ಬೇಡಿಕೆ
ಬಾಡದಿರುವ ಹೂದೋಟದಲ್ಲಿ ನಿನ್ನ ಜೊತೆ ಒಂದು ಸಂಜೆ ಕಾಲ ಕಳೆಯಬೇಕು
ಸಮಯವೇ ಗೊತ್ತಿರದ ಹಾಗೆ ನಿನ್ನ ಜೊತೆ ಮಾತನಾಡಬೇಕು
ಸಂಜೆ ಸೂರ್ಯನೇ ನಮ್ಮ ಮುಂದೆ ಬಂದು ನಿಲ್ಲಬೇಕು
ನಮ್ಮ ಮೌನಕ್ಕೆ ನಮ್ಮಿಬ್ಬರ ಹೃದಯ ತಿಳಿಯಾದ ಗಾಳಿಯ ಶಬ್ದ ಕೇಳಬೇಕು
ನಮ್ಮಿಬ್ಬರ ಕಣ್ಣುಗಳು ಚಿಲಿ ಪಿಲಿ ಹಕ್ಕಿಗಳ ಹಾರಾಟ ನೋಡಬೇಕು
ಜೀವನ ಪೂರ್ತಿ ನಿನ್ನ ಜೊತೆ ನಾನು ಇದೇ ತರ ಇರಬೇಕು...

© ಗಗನ ಜಿ ಎ
#ನಿನ್ನ ಜೊತೆ ನನ್ನ ಸಮಯ #