...

9 views

ನಗೆ(Smile)



ನಗೆ
ಕವಿತೆಯ ರಚನೆ :ಭೃಂಗಿಮಠ

ಓ ನಗೆ
ನೀ‌ನೆಷ್ಟು ಶಕ್ತಿಯುಕ್ತ
ನೊಂದ ಮನಕೆ
ಕ್ಷಣಾರ್ಧದಲ್ಲೇ ಸಂತೋಷದ ಔಷದಿಯ ನೀಡುವೆ
ಬಾಲ್ಯದ ಬೊಚ್ಚು ಬಾಯಿಯಲ್ಲಿ
ಸ್ವಚ್ಚಂದದ ಶುದ್ದತೆಯ ನಗೆಬೀರಿ ಬದ್ದತೆಯ ಮೆರೆಸುವೆ
ತಂದೆ ತಾಯಿಗೆ ಆನಂದ ನೀಡುವೆ
ಗೆಳೆಯರೊಡನೆ ಸ್ನೇಹಣದ ಬೀಜ ಬಿತ್ತುವೆ
ಯೌನದಲ್ಲಿ ಪ್ರೀತಿಗೆ ಮುನ್ನುಡಿ ಬರೆಯವೆ
ಸ್ನೇಹದ ಕಡಲಲ್ಲಿ ನೀರಾಗಿ
ಬದುಕ ದೋಣಿಯ ವಿಶ್ವಾಸ ಗಟ್ಟಿಯಾಗಿಸುವೆ
ಓ ನಗೆಯೇ ನಿನ್ನ ಆ ಶಕ್ತಿಗೆ ಸೋಲದವರಿಲ್ಲ
ನೀನಿಲ್ಲದಿರೆ ಬದುಕೇ ನಶ್ವರ
ಈಶ್ವರನ ಕೃಪೆಯೂ ಇಲ್ಲ
ಯಾರೂ ನೀನಿಲ್ಲದೇ ದಿನಗಳಿಯಲಾಸಧ್ಯ
ತುಟಿಗಳ ಮಧ್ಯದ ಹಕ್ಕು ಕಾಣಿಸಿದರೂ ನನ್ನವರ ಅಂತರಾತ್ಮದ ಭಾವದ ಮುಕುಟವಾಗಿ
ಅಂತರ್ಮುಖವ ತೋರುವೆ
ಹುಟ್ಟು ಹಬ್ಬದಲ್ಲಿ
ಜಯದ ಹಾದಿಯಲ್ಲಿ
ಮಮತೆಯ ಮಡಿಲಲ್ಲಿ
ಸ್ನೇಹ ಪರ್ವದಲ್ಲಿ
ನಂಬಿಕೆಯ ನಡೆಯಲ್ಲಿ
ದುಡಿದು ಬಂದಾಗ ನನ್ನವಳ ಮುಖದ ನಗೆಯೆ ದಣಿವು ತಣಿಸುವೆ ಅದಾವ ಲೋಕದ ಸೃಷ್ಠಿ ನಿನ್ನದು
ಭಾವ ತರಂಗಗಳನ್ನೇ ಬದಲಿಸುವ ಶಕ್ತಿ ನಿನ್ನದು
ಓ ನಗೆಯೇ
ತಾಯಿಗೊಂದು ನಗೆ
ತಂದೆಗೊಂದು ಬಗೆ
ಸಹೋದರತ್ತ,ಅಣ್ಣ ತಮ್ಮ
ಅತ್ತಿಗೆ ನಾಸಿನಿ
ಭಾವ ಭಾಮೈದ
ನಿಗೇಣಿ
ನಾದಿನಿ ಅಜ್ಜ ಅಜ್ಜಿ
ಅಕ್ಕ ತಂಗಿ
ಅಳಿಯ ಮಾವಂದಿರ ಇತರ ಸಂಬಂಧ ಬೆಸೆದರೂ ನೀನಿರದೇ ಅವ್ಯಾವೂ ಇರವು ಓ ನಗೆ
ನಿನ್ನ ಋಣ ನಮಗಿದೆ
ಯೌವನದಲ್ಲಿನ ಹೆಂಡತಿಯ ನಗೆ
ಮುಪ್ಪಿನಲ್ಲಿನ ಆಯಿ ಮುತ್ಯಾರ ಬೊಚ್ಚು ನಗೆಯಲ್ಲೆ ಅದೆಂತಹ ಅರ್ಥ ತುಂಬಿದೆ
ಬಾಳ ಬದುಕಿನ ಅನುಭವದ ಚಿತ್ರಣ ತುಂಬಿದೆ ಓ ನಗುವೆ