...

33 views

ಮರೆಯಾದ ಮಡಿಕೆ:
ಜೇಡಿಮಣ್ಣನ್ನು ಹದಮಾಡಿ
ತಯಾರಿಸುತಿದ್ದರು ಮಡಿಕೆ ಕುಡಿಕೆ...
ಬೇಸಿಗೆಯಲ್ಲಿ ಮಡಿಕೆಯೊಳಗಿನ ತಂಪಾದ ನೀರು
ನೀಗಿಸುತಿತ್ತು ಒಡಲೊಳಗಿನ ನೀರಡಿಕೆ...

ಮೂಲೆಗುಂಪಾಗಿಹುದು ಇಂದು
ಹೊಸ ಹೊಸ ಪಾತ್ರೆಯ ಆವಿಷ್ಕಾರಕೆ...
ಕುಂಬಾರರ ವೃತ್ತಿ ಬದುಕಿಗೆ
ಆಸರೆಯಾಗಿರುವ ಮಣ್ಣಿನ ಮಡಿಕೆ...

ಪಾನೀಯಗಳ, ದವಸ ಧಾನ್ಯಗಳ
ಶೇಖರಣೆಯ ಗಡಿಗೆ...
ಹೆಚ್ಚು ಸ್ವಾದವಿರುವುದು
ಮಡಿಕೆಯಲ್ಲಿ ತಯಾರಿಸುವ ಅಡುಗೆ...

ಮರೆಯಾದರೂ ಬರುತ್ತಲಿದೆ
ನವನವೀನ ಬಣ್ಣವ ಹಚ್ಚುತ.....
ಆಂತರ್ಯದಲ್ಲಿ ಭರವಸೆಯು ನೆಲೆಯಾಗಿರುವುದು...
ಅದೇ ಅಲ್ಲವೇ ಮಣ್ಣಿನ ಸೆಳೆತ...

© ಅಮೃತಾ ಎಸ್ ❣️

#ಅಮ್ಮುಎಸ್ #ಅಮ್ಮು #ಕನ್ನಡಕವನ #ಕನ್ನಡಬರಹ