...

7 views

ದಿನಧಾರೆ
ದಿನದಿನವೂ ಧುಮ್ಮಿಕ್ಕುತ್ತಿದೆ ದಿನಧಾರೆ,
ಧೂಮಶಟಕದಂತೆ, ದಭದಭೆಯಂತೆ.

ಧುಮುಕಿ ಧಾವಿಸುತಿದೆ ದಾಪುಗಾಲಿಟ್ಟು,
ದಣಿವಾರಿಸಿಕೊಳಲು ದಾರಿಗೊಡದೆ.
ದುಮ್ಮಳವೇಕೆ? ದುಮ್ಮಾನವೇಕೆ?
ದುರ್ದಾನವಲ್ಲವಿದು, ದಿವ್ಯ ಧಾನ್ಯವು.

ದ್ರವಿಣದಂತೆ ದಿವಾಣದಲ್ಲಿರದು,
ದಿನದಿನವೂ ದೊರೆವ ದಿನಭತ್ಯವು....