...

20 views

ಒಲವಾಗಿದೆ ಇಂದೇಕೋ

ಒಲವಾಗಿದೆ ಒಲವಾಗಿದೆ
ಇಂದೇಕೋ ನಿನ್ನ ಮೇಲೆ ಒಲವಾಗಿದೆ
ಮನವೇಕೊ ನಿನ್ನನೇ ಕರೆಯುತಿದೆ
ನಿನ್ನ ಬರುವಿಕೆಗಾಗಿ ಹಾತುರಿಯುತ್ತಿದೆ

ಪ್ರತಿಗಳಿಗೆಯು ನಿನ್ನನೇ ನೆನೆಯುತಿದೆ
ಮನಸಾಗಿದೆ ಮನಸಾಗಿದೆ
ನಿನ್ನ ಮೇಲೆ ನನಗೀಗ ಮನಸಾಗಿದೆ
ಹೃದಯವು ನಿನದೆ ಹೆಸರ ಜಪಿಸುತ್ತಿದೆ

ಪ್ರತಿ ಜನ್ಮವು ನಿನಗಾಗಿ ಕಾಯುತಿದೆ
ಒಲವಾಗಿ ಜೀವ ಪರದಾಡಿದೆ
ನಿನಗೇಕೋ ಇದು ಅರ್ಥವಾಗದೆ
ಅರಿತು ಅರಿಯದಂತೆ ನಟಿಸುತ್ತಿರುವೆ

ಯಾಕಾಗಿ ನನಗೆ ಈ ವೇದನೆ
ಯಾಕಾಗಿ ನನಗೀಗೆ ರೋದನೆ
ಕನಸಲಿ ಮನಸಲು ಕಾಡುತ್ತಿರುವೆ
ಈ ಮನಸಿಗೆ ನಿನ್ನ ಸೇರುವ ಆಸೆಯಾಗಿದೆ

*ರಾಧ ಹಾಸನ*
© All Rights Reserved