ಮಾತರಿಶ್ವ
ಹೀಗೇಕೆ ಕಾಡುವೆ ಚೆಲುವ?
ಮುಂಜಾನೆಯ ಕಂಪಲ್ಲಿ ಮುಸ್ಸಂಜೆಯ ರಂಗಲ್ಲಿ...
ಮುಂಗುರುಳ ತೀಡುತಲಿ , ಹಿತವಾಗಿ ತಬ್ಬುತಲಿ.
ಒಮ್ಮೊಮ್ಮೆ ಸಶಬ್ಧವಾಗಿ,ಒಮ್ಮೊಮ್ಮೆ ನಿಶ್ಶಬ್ಧವಾಗಿ,
ನಿನ್ನ ಮೈಯ ಗಂಧವನು ಪಸರಿಸುತ ;
ಉಸಿರೊಳಗೆ ಉಸಿರಾಗಿ ,ಹಸಿರೊಳಗೆ ಮಿಡುಕಾಗಿ ...
ಅಲೆಯೊಳಗೆ,ಬೆಳಕಿನಲಿ;
ಜಗದಚ್ಚರಿಯೋಳಗೆ ಅವಿತಿರುವೆ ನೀ.
ಜೀವಸಂಕುಲಕೆಲ್ಲ ನಿನ್ನೊಲವೇ ಆಧಾರ;
ಅತಿಯಾದರದೇ ನಿರಾಧಾರ.
ಹಿತವಾಗಿ,ಮಿತವಾಗಿ..
ಎಲ್ಲೆಲ್ಲೂ ಇರುವೆ ನೀ ...
ಈ ವಿಶ್ವವ ಸಾಗಿಸುವ ಚೈತನ್ಯವೇ,
ವಂದಿಸುವೆ ನಿನಗೆ ನಾನೆಂದಿಗೂ
ಮಾತರಿಶ್ವನೇ!
ಮುಂಜಾನೆಯ ಕಂಪಲ್ಲಿ ಮುಸ್ಸಂಜೆಯ ರಂಗಲ್ಲಿ...
ಮುಂಗುರುಳ ತೀಡುತಲಿ , ಹಿತವಾಗಿ ತಬ್ಬುತಲಿ.
ಒಮ್ಮೊಮ್ಮೆ ಸಶಬ್ಧವಾಗಿ,ಒಮ್ಮೊಮ್ಮೆ ನಿಶ್ಶಬ್ಧವಾಗಿ,
ನಿನ್ನ ಮೈಯ ಗಂಧವನು ಪಸರಿಸುತ ;
ಉಸಿರೊಳಗೆ ಉಸಿರಾಗಿ ,ಹಸಿರೊಳಗೆ ಮಿಡುಕಾಗಿ ...
ಅಲೆಯೊಳಗೆ,ಬೆಳಕಿನಲಿ;
ಜಗದಚ್ಚರಿಯೋಳಗೆ ಅವಿತಿರುವೆ ನೀ.
ಜೀವಸಂಕುಲಕೆಲ್ಲ ನಿನ್ನೊಲವೇ ಆಧಾರ;
ಅತಿಯಾದರದೇ ನಿರಾಧಾರ.
ಹಿತವಾಗಿ,ಮಿತವಾಗಿ..
ಎಲ್ಲೆಲ್ಲೂ ಇರುವೆ ನೀ ...
ಈ ವಿಶ್ವವ ಸಾಗಿಸುವ ಚೈತನ್ಯವೇ,
ವಂದಿಸುವೆ ನಿನಗೆ ನಾನೆಂದಿಗೂ
ಮಾತರಿಶ್ವನೇ!