ಮೂಕ ಅಳಲು
ಭಾವ ವರ್ಷ
ಬಿಂದು ೫
ಮೂಕ ಅಳಲು
ಸಾಗಿ ಬಾಳಪಯಣದ ತೇರು
ಸೇರಿ ಗಿರಿಶೃಂಗಗಳ ಮೇರು
ನಿರ್ವಹಿಸಿ ಜೀವನದ ಜವಾಬ್ದಾರಿ
ಕಾಯುತಿರುವೆ ಜವರಾಯನ ದಾರಿ
ಸವಿದೆಲ್ಲಾ ಸಂಬಂಧಗಳ ಸೊಗಡು
ಪ್ರಪಂಚದ ಸಂತಸವನೆಲ್ಲಾ ಉಂಡು
ಊರು ಹೋಗೆಂದು ಬಾಯೆಂದಿದೆ ಕಾಡು
ಅನಿಸುತಲಿದೆ ಈ ಜೀವನವೆಲ್ಲ ಬರಡು
ಮಾಸಿದ ಕಣ್ಣುಗಳು ಸುಲೋಚನದ ಪಾಲು
ಆಸರೆಗೆ ಬೇಕೇಬೇಕಾಗಿದೆ ಊರುಗೋಲು
ಪಟ್ಟ ಕಷ್ಟ ಸಂಕಟ ಹರುಷಗಳ ಸಾಲು
ಎಲ್ಲವೂ ಈಗ ನೆನಪಿನ ಬುತ್ತಿಯ ಮೀಸಲು
ಒಂಟಿ ಜೀವನದ ಬವಣೆ ಹೇಳಲಿ ಯಾರಿಗೆ
ಕಿವುಡನಾಗಿಹ ಗುಡಿಯ ದೇವ ಕೂಗಿಗೆ
ಜೀವನದ ಬಂಡಿ ಉರುಳುತ್ತಿಲ್ಲ ಸಲೀಸು
ಪಯಣ ಬೇಗ ಕೊನೆಗೊಂಡರೇನೇ ಲೇಸು
ಸುಜಾತಾ ರವೀಶ್
ಮೈಸೂರು
೧೫.೧೧.೨೦೨೨
ಬಿಂದು ೫
ಮೂಕ ಅಳಲು
ಸಾಗಿ ಬಾಳಪಯಣದ ತೇರು
ಸೇರಿ ಗಿರಿಶೃಂಗಗಳ ಮೇರು
ನಿರ್ವಹಿಸಿ ಜೀವನದ ಜವಾಬ್ದಾರಿ
ಕಾಯುತಿರುವೆ ಜವರಾಯನ ದಾರಿ
ಸವಿದೆಲ್ಲಾ ಸಂಬಂಧಗಳ ಸೊಗಡು
ಪ್ರಪಂಚದ ಸಂತಸವನೆಲ್ಲಾ ಉಂಡು
ಊರು ಹೋಗೆಂದು ಬಾಯೆಂದಿದೆ ಕಾಡು
ಅನಿಸುತಲಿದೆ ಈ ಜೀವನವೆಲ್ಲ ಬರಡು
ಮಾಸಿದ ಕಣ್ಣುಗಳು ಸುಲೋಚನದ ಪಾಲು
ಆಸರೆಗೆ ಬೇಕೇಬೇಕಾಗಿದೆ ಊರುಗೋಲು
ಪಟ್ಟ ಕಷ್ಟ ಸಂಕಟ ಹರುಷಗಳ ಸಾಲು
ಎಲ್ಲವೂ ಈಗ ನೆನಪಿನ ಬುತ್ತಿಯ ಮೀಸಲು
ಒಂಟಿ ಜೀವನದ ಬವಣೆ ಹೇಳಲಿ ಯಾರಿಗೆ
ಕಿವುಡನಾಗಿಹ ಗುಡಿಯ ದೇವ ಕೂಗಿಗೆ
ಜೀವನದ ಬಂಡಿ ಉರುಳುತ್ತಿಲ್ಲ ಸಲೀಸು
ಪಯಣ ಬೇಗ ಕೊನೆಗೊಂಡರೇನೇ ಲೇಸು
ಸುಜಾತಾ ರವೀಶ್
ಮೈಸೂರು
೧೫.೧೧.೨೦೨೨