...

23 views

ಪ್ರೀತಿಯಾ ಗೆಳೆಯಾ 💍

ನನ್ನ ಹೃದಯಕ್ಕೆ ನಿನ್ನ ಇಂಪಾದ ಮಾತುಗಳೇ ಒಂದು ಸಡಗರ
ಮನದಲ್ಲಿ ಪ್ರೀತಿ ತುಂಬಿದೆ ಅದಕ್ಕೆ ನೀನೇ ಅಧಾರ
ನೀನೇ ನನ್ನ ಪ್ರೀತಿಯ ಚಂದಿರ

ಚಿಪ್ಪಿನಲ್ಲಿರುವ ಮುತ್ತುಗಳಂತೆ ನೂರಾರು ಕನಸಿದೆ
ಜೊತೆಯಾಗಿ ಬಂಧಿಸಿದ ನೂರಾರು ಕ್ಷಣಗಳು ಅದರಲ್ಲಿ ಒಂದೊಂದೆ
ಬಣ್ಣದ ಚಿಟ್ಟೆಗಳಾಗಿ ಹೊರಹೊಮ್ಮುತ್ತಿದೆ
ನಕ್ಷತ್ರವು ಆಕಾಶದಲ್ಲಿ ಮಿಂಚುತ್ತಿದೆ
ಆಕಾಶ ಮತ್ತು ಧ್ರುವ ತಾರೆಯ ಪಯಣ ಪ್ರಶಾಂತವಾಗಿ ಸಾಗುತಿದೆ
ಸೂರ್ಯ ಮತ್ತು ಚಂದ್ರರ ಮುಂದೆ
ಹಿರಿಯ ಜೀವಗಳಿಂದ ನಮಗೆ ಆಶೀರ್ವಾದ ದೊರಕಿದೆ
ಈ ವರ್ಷ ಆ ಬಹು ದಿನದ ಕನಸುಗಳೆಲ್ಲ ನನಸಾಗಿ ನಮ್ಮ ಪ್ರೀತಿಗೆ ಸಾಕ್ಷಿ ಆಗಬೇಕಿದೆ

ನಾವು ಕಟ್ಟಿದಂತ ಬಹು ಕಾಲದ ಕನಸಿನ ಸುಂದರ ಬದುಕು ಇನಿಯ
ಕ್ಷಣ ಕ್ಷಣ ಕುಡುತ್ತಿರುವೆ ನಿನ್ನ ಜೊತೆ ಇರಲು ನನ್ನ ಹೃದಯದ ಒಡೆಯ
ಒಮ್ಮೆ ಕೇಳು ನನ್ನ ಹೃದಯದ ಬಡಿತ ನನ್ನ ಪ್ರೀತಿಯ ಗೆಳೆಯ...........

#ProposeDay #ProposeDay💍
© ಗಗನ ಜಿ ಎ