...

16 views

ಓ ಹಸಿರೇ

© Altaf mulla
ಪ್ರತಿ ಉಸಿರು ಉಸಿರ ಕಾಪಾಡುವ ಓ ಹಸಿರೆ.
ನೀನಿಲ್ಲದೆ ನನಗೆಲ್ಲಿಯ ಆಸರೆ.
ಮನ ಕೇಳುತಿದೆ ನಿನ್ನ ಮಡಿಲಲಿ ನನಗೆ ತುಸು ಒಲವ ತೋರೆ.

ನಿತ್ಯ ನನಗೇಕಿ ಪಾಡು ಕಲ್ಮಶ ಮನಗಳ ಸುಳಿದಾಡುವಿಕೆ.
ನಾ ಮಾಯವಾಗುವ ತನಕ ಇರಲಿ ನಿನ್ನ ಶುದ್ದತೆಯು ನನ್ನ ಕಾಯಕಕೆ.
ಜಗವೇ ನನದೆಂಬುದನ್ನ ಅರಿತು
ಕಾಣುವೆನು ತುಸು ಚೇತರಿಕೆ.
ಮರೆಮಾಚಿ ಹೋಗದಿರು ತಡೆಯಲಾರೆನು ಈ ಚಡಪಡಿಕೆ.

ಅಂತ್ಯವಿಲ್ಲದೆ ಸಾಗುವುದು ಜಗದ ಜೊತೆ ನಿನ್ನ ಸ್ನೇಹ.
ಆಟ ಮುಗಿಯುವವರೆಗೂ ನಿಲ್ಲದಿ
ನಿನ ಮೇಲಿನ ವ್ಯಾಮೋಹ.
ಓದಿದೆನು ಜಗದ ಈ ವಿಧಿಬರಹ.
ಓ ಹಸಿರೇ ಕೇಳು ತೀರಲಾಗದು ಈ ಕಂಡು ಕಾನರಿಯದ ಉಸಿರಿನ ದಾಹ.