...

4 views

ಇದೊಂದು ಬದುಕೆ..?
*ಕಾರಣ*

ಇಲ್ಲಿ ಎಲ್ಲರದೊಂದೊಂದು ಕಾರಣ
ಸಬೂಬು ಹೇಳುವುದರಲ್ಲಿ
ಸತ್ಯದ ತಲೆ ಮೇಲೆ ಹೊಡೆಯುದರಲ್ಲಿ
ಕಾರಣದಲ್ಲೇ ಈ ಬದುಕೇ ಕಾಲಹರಣ
ನಿತ್ಯ ಹುಡುಕುವರು ಕಾರಣ,ವಿನಾಕಾರಣ.

*ಬಂಡವಾಳ*

ಕೆಲವರು ಕೈಯಿಟ್ಟಲೆಲ್ಲ ಹೂಡಿದರು ಬಂಡವಾಳ
ಇನ್ಕೆಲವರಿಗೆ ಬೆಂದ ಬದುಕೇ ಬಂಡವಾಳ
ಇದ್ದವನಿಗೆ ಇದ ಹಾಕುವ ಚಿಂತೆ
ಇಲ್ಲದವನಿಗೆ ಇದ ಹೊಂದಿಸುವುದೇ ಚಿಂತೆ.

*ತಲೆ*

ಕೆಲವರು ತಲೆ ಓಡಿಸುವರು
ಹಲವರು ತಲೆ ಕೆಡಿಸುವರು
ಇಲ್ಲದನ್ನು ಪಡೆಯಲು, ಇವರು ತಲೆ ಒಡೆಯುವರು
ಅವರೆಲ್ಲ ಕಲೆಗಾಗಿ ತಲೆ ಖರ್ಚು ಮಾಡಿದರು
ಇವರೆಲ್ಲ ನೆಲೆ‌ಕಾಣಲು ತಲೆಯಿಂದ ಬದುಕಿದರು.


ಬೇಕು

ಬೇಡವಾದುದ್ದೆಲ್ಲ ಬೇಕು ಮನುಜನಿಗೆ
ಬೇಕಾದುದ್ದೆಲ್ಲ ಸಿಕ್ಕಾಗಲೂ,ತುಂಬಿ ತುಳುಕುತ್ತಿದ್ದಾಗಲೂ
ಬೇಕು ಬೇಕೆಂಬ ಬೆಕ್ಕಿಗೆ
ಇಲಿ ಎಂದೂ ಸಾಲದು ಕನಸು ಕಾಣಲು..

ಹಂಚು

ತುತ್ತಾಗದಿದ್ದರೂ ಏನಂತೆ
ಅಗುಳಾದರೂ ನೀಡು
ಹೊಗಳಿಕೆಗಾಗಿ ಅಲ್ಲ
ಪುಣ್ಯವೆಂಬ ಪಳಿಯುಳಿಕಿಗಾಗಿ.


*ರಮೇಶ್ ಹಡಪದ*