...

18 views

ನಿನ್ನ ನೆನಪೊಂದಿಗೆ..❤️
ಕಳೆದು ಹೋದ ಆ ದಿನಗಳಲ್ಲಿ
ಪ್ರೀತಿ-ಪ್ರೇಮದ ಹೆಸರಿನಲ್ಲಿ
ನೀ ನನ್ನಲ್ಲಿ ಉಳಿಸಿ ಹೋಗಿದ್ದು
ಕರಿ ನೆರಳಿನ ಕಹಿ ನೆನಪುಗಳು ಮಾತ್ರ..

ನಿದ್ರೆ ಕೆಡಿಸುವ ಕನಸುಗಳಲ್ಲಿ
ಒಂಟಿಯಾಗಿ ನಾ ಕಳೆಯುವ ಸಂಜೆಗಳಲ್ಲಿ
ನೀ ನನ್ನಲ್ಲಿ ಉಳಿಸಿ ಹೋಗಿದ್ದು
ಸಹಿಸಲಾಗದ ನೋವುಗಳು ಮಾತ್ರ..

ನೀ ನೆನಪಾಗುವ ಕ್ಷಣದಲ್ಲಿ
ಉಕ್ಕಿ ಬರುವ ದುಃಖದಲ್ಲಿ
ನೀ ನನ್ನಲ್ಲಿ ಉಳಿಸಿ ಹೋದದ್ದು
ಕಣ್ಣೀರಿನ ಬಿಸಿ ಹನಿಗಳು ಮಾತ್ರ..

ನೀ ನನ್ನನ್ನು ನೀ ಅಪ್ಪಿಕೊಳ್ಳದೆ
ಪ್ರೀತಿಯನ್ನು ಒಪ್ಪಿಕೊಳ್ಳದೆ
ಕೊನೆವರೆಗೂ ನೀ ನನ್ನಲ್ಲಿ ಉಳಿಸಿ ಹೋಗಿದ್ದು
ಬರೀ ನೋವಿನ ಹುಸಿ ಕನಸುಗಳು ಮಾತ್ರ....
ಇಂತಿ ನಿನ್ನವ ♥️
© ಕಮಾಂಡೋ ಮಂಜು