...

9 views

ಕಾಮಧೇನು
ಕರುಣಾಮಯಿ

ಉದಯ ಕಾಲದಿ ಎದ್ದು
ಮುಸ್ಸಂಜೆ ವೇಳೆವರೆಗೂ ದುಡಿದು
ಕಾಯಕ ಮಾಡುವ ಕಾಮಧೇನು
ನಿನಗಿಲ್ಲವೋ ಅದರ ಅರಿವೇನು

ತಿಳಿದು ಮುಂದೆ ಸಾಗು
ಎಷ್ಟೆಲ್ಲ ಸಹಾಯ ನಿನಗೆ
ಈ ಪ್ರೀತಿಯ ಕಾವಧೇನುವಿಂದ
ಶುದ್ಧ ಮನಸಿನ ದೇವರಿಂದ

ಕಾಮಧೇನು ಎಂದರೇನೆ
ಮುಕ್ಕೋಟಿ ದೇವತೆಗಳು
ಪ್ರೀತಿ ಕರುಣೆ ಸೌಹಾರ್ದತೆ
ಕಾಮಧೇನು ನೀಡುವಳು ಮಮತೆ

ಜೀವನವನ್ನೇ ಮುಡಿಪಾಗಿಸಿದಳು
ನಿನ್ನ ಸ್ವಾರ್ಥದ ದುರಾಸೆಗಳಿಗೆ
ತನಗೆ ಕೇಡು ಬಯಸುವವರಿಗೂ
ಅಮೃತವನ್ನೆ ನೀಡುವ ದೇವತೆ ಇವಳು

ರಾಧ ಹಾಸನ
© All Rights Reserved