...

12 views

💖 ನೆನಪೆ ಕಾಡದಿರು ನನ್ನ 💖
ಹೇ ನೆನಪೆ ಹೇ ನೆನಪೆ
ನೀ ಏಕೆ ಕಾಡುವೆ..
ಕುಂತರೂ ನಾ ನಿಂತರೂ
ಬಿಂಬಿಡದೆ ನೀ ಬರುವೆ.!

ನೆನಪಾಗಿ ನೀ ಬಂದು
ಮನಸ ಆವರಿಸುವೆ
ಕನಸಾಗಿ ಬಂದು
ನನ್ನ ನಿದ್ದೆ ಕೆಡಿಸುವೆ.!

ತನುವಿದ್ದರು ಮನವ
ನೆನಪಿನಂಗಳಕ್ಕೆ ನೂಕುವೆ
ಹಗಲಿರುಳು ಎನ್ನದೆ
ನನ್ನನ್ನೇ ಹಿಂಬಾಲಿಸುವೆ.!

ಅರಿಯದೆ ನೀ ಬರುವೆ
ಮನಸನು ಕರೆದೊಯ್ಯುವೆ
ನೋಡುವ ದೃಷ್ಟಿಯ
ಕಣ್ಣನ್ನು ದಾರಿ ತಪ್ಪಿಸುವೆ.!

ನಿನ್ನ ಕಾಲ್ಗೆಜ್ಜೆಯ ಸದ್ದು
ನಿದ್ದೆಲೂ ಕೇಳುವುದು
ಆಡುವ ಸವಿನುಡಿ
ಕರ್ಣದಲಿ ಕುಣಿವುದು.!

ದಶಕ ಕಳೆದರೂ
ಮಾಸದು ಹಸಿರ ನೆನಪು
ಹರುಷ ತರುವುದು
ನಿನ್ನ ಸುಂದರ ಒನಪು.!

ನನ್ನದೆಯ ತೋಟದಲ್ಲಿ
ಅಳಿಸಲಾಗದ ನಿನ್ನ ಹೆಜ್ಜೆ ಗುರುತು
ತಂಗಾಳಿಯ ರೂಪದಲ್ಲಿ
ಮೊಗವ ಸ್ಪರ್ಶಿಸಿ ನೆನಸಿದೆ ಅರಿತು.!

ಮನದ ಮುಗಿಲಲ್ಲಿ
ಹಕ್ಕಿಯಂತೆ ನೀ ಹಾರುವೆ
ರಾತ್ರಿಯಲ ವೇಳೆ ಬೆಳ್ಳಿ
ಚುಕ್ಕಿಯಂತೆ ಕಂಗೊಳಿಸುವೆ.!

ತುಂತುರು ಮಳೆಯಂತೆ
ಸುರಿಯುತ್ತಿದೆ ಮನಸಲಿ
ಹುಣ್ಣಿಮೆಯ ‌ಬೆಳದಿಂಗಳಂತೆ
ಹೊಳೆಯುತ್ತಿದೆ ಕಣ್ಣಂಚಲಿ.!

ಕಡಲಲಿ ಉಕ್ಕುವ ಅಲೆಯಂತೆ
ಅಪ್ಪಳಿಸುವುದು ಹೃದಯಕೆ
ಸೂರ್ಯನ ರಶ್ಮಿಯನ್ನು
ಚೆಲ್ಲುವುದು ಚೆಂದದ ಮೊಗಕೆ.!

ನನ್ನುಸಿರಲಿ ಉಸಿರಾಗಿ ಬೆರೆತು
ಮನವ ಮೌನಕ್ಕೆ ದೂಡುವೆ
ಮಧುರ ಭಾವನೆಯ ಹೊತ್ತು
ತುಟಿಯಂಚಲಿ ನಗು ಅರಳಿಸುವೆ.!

ಒಮ್ಮೊಮ್ಮೆ ನಗಿಸುವೆ
ಒಮ್ಮೊಮ್ಮೆ ಅಳಿಸುವೆ
ಕೆಲವೊಮ್ಮೆ ನೋಯಿಸುವೆ
ಕೆಲವೊಮ್ಮೆ ನಲಿಸುವೆ.!

ಯಾರಿದ್ದರೂ ಜೊತೆಯಲ್ಲಿ
ನೆನಪಾಗಿ ನೀ ಬರುವೆ
ಯಾರಿಲ್ಲದಿದ್ದರೂ ಕಂಬನಿ
ಮಿಡಿದು ಬದುಕು ಸಾಗಿಸುವೆ.!

ಹೇ ನೆನಪೆ!
ಕಾಡಬೇಡ ನನ್ನ
ಬಿಟ್ಟುಬಿಡು ಮನಸನ್ನ
ನುಸುಳುವ ಮುನ್ನ
ಯೋಚಿಸು ಒಮ್ಮೆ ಇನ್ನ.!
✍️ಶೃತಿ ಶೈವ

#ನೆನಪು#ಕಾಡದಿರು#ಮನಸ್ಸು#ಕನಸು
#WritcoQuote#writcoapp#Writer#Writco#shruthishaiva#Writcopoem