...

13 views

ಮಾಮರದ ಹಸಿರುನಾಡು

ಪ್ರಕೃತಿಯೊಂದು ಮಿಡಿದ ಬಡಿತ,
ಪರಸ್ಪರ ಶ್ರಮ, ವಿಶ್ವಾಸದ ಕುಣಿತ
ನಿಸರ್ಗಕಾಯಕ ನಿತ್ಯ ಭೂ ಮಡಿಲಲ್ಲಿ ವಿಶ್ವದಾತನ ಮಣ್ಣಿನ ಪುನಸ್ಕಾರ

ನೇಸರ ತುಂಬಿದ ಗಿಡ ಮರಗಳ ಸ್ವರೂಪ ಆವರಿಸಿದ ಸುಂದರ ತೋಟ ಹಕ್ಕಿ ಪಕ್ಷಿಗಳಿಗೆಲ್ಲ ಹಚ್ಚ ಹಸಿರಿನ ಮೈದಾನವಾದ ಚಿಲಿಪಿಲಿ ತೋಟ

ನಿಸ್ವಾರ್ಥತೆ ತುಂಬಿದ ಮನಸ್ಸಿನ ಮಂದಿರದ ಆನಂದ ಮಕ್ಕಳು ಈ ಗಿಡ ಪ್ರಪಂಚವೆ ಪ್ರಕೃತಿ, ನನ್ನಯ ಆಕೃತಿಯನ್ನ ಅದ್ಭುತ ಮಾಡುವ ಸಂಸ್ಕೃತಿಯ ಸರ್ವಸ್ವ ಈ ತೋಟದ ಮಹಿಮೆ

ಕನಸಿನ ತೋಟವಾಗೋಕೆ ಪ್ರತಿನಿತ್ಯ
ಪರಿಶ್ರಮದ ಬೇವರು ಹನಿ ಸುರಿಸಬೇಕು.........💚