...

10 views

"ಬಿಟ್ಟುಬಿಡು ಗೆಳತಿ"
ಏನೆಂದು ಕೂಗಲಿ ನಾನಿಂದು ನೀ ತೊರೆದು ನಡೆದಿರುವೆ........
ಮರಳಿ ಬಾರದಿರು ನವ ಹೃದಯದ ಸನಿಹಕೆ ಮಗದೊಮ್ಮೆ.......
ಅದೆಷ್ಟೋ ಎನ್ನ ಭಾವನೆಗಳ ನಿನಗಾಗಿ ನಶಿಸಿರುವೆ ನಿನ್ನ ಭಾವನೆಗಳ ಹೃದಯದೊಳಗಿರಿಸಿ......
ಕ್ಷಮಿಸಿಬಿಡು,, ನನ್ನ ಮೌಢ್ಯತೆಗೆ ಜಡವಿಡಿದಿದೆ ಮನವು , ನಿನ್ನ ವಿಶ್ವಾಸಘಾತವ ನೆನೆದು........
ನೀ ಕಾರಣವಾ ತಿಳಿಸದಿರು ಏಕೆಂದರೆ ನೀ ಹೇಳುವ ಮಾತುಗಳ ಹಿಂದಿನ ಸುಳ್ಳುಗಳ ಆಲಿಸಲು ಎನಗೆ ಕಾತರಿಕೆಯಿಲ್ಲ .............
ಬೆಂಕಿ ಮುಚ್ಚಿದ ಕೆಂಡದಂತೆ , ಸಿಹಿಮಾತುಗಳಲ್ಲಿ ಮರುಳುಮಾಡಿ ಸುಡುತಿಹೆ ನಿನ್ನ ಸುಳ್ಳುಗಳ ಸೆರೆಮಾಲೆಗೆ ಸಿಲುಕಿ.............
ಹಚ್ಚಿಕೊಂಡ ಮನವ ನುಚ್ಚುನೂರು ಮಾಡಿ ಹಣದ ವ್ಯಾಮೋಹಕೆ ಸಿಲುಕಿ ಬಿಸಾಡಿರುವೆ ನಿನ್ನ ಹೃದಯದ ಮೂಲೆಯಲಿ..........
ಸಹಿಸಲು ತಯಾರಿದ್ದೇನೆ ಆದರೆ ನಿನ್ನೆದುರು ಹೋರಾಡಲು ಮನವು ಹಿಂಜೆರಿಯುತಿದೆ ಎನ್ನ ಕುಗ್ಗಿಸಿ.........
ಹೊರಟಿಬಿಡು!! ನೀ ಎನ್ನಿಂದ ದೂರಕೆ ಕಾರಣವಾ ತಿಳಿಸದೇ.......
ಮರುಗಿಸದಿರು ಮತ್ತಾರನು ನಿನ್ನ ಮೋಸದ ಬಲೆಗೆ ಸಿಲುಕಿಸಿ............

© --ಸಂಪ್ರೀತ.....